ಕ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ಅನಾರೋಗ್ಯ ಸಂದರ್ಭದಲ್ಲಿ ಬಡ್ಡಿರಹಿತ ಸಾಲ ಒದಗಿಸುವ ಯೋಜನೆಗೆ ಬೆಂಗಳೂರಿನಲ್ಲಿ ಶುಕ್ರವಾರ ಆರೋಗ್ಯ ಫೈನಾನ್ಸ್ ನಿಂದ ಚಾಲನೆ ನೀಡಲಾಯಿತು. ಈ ಯೋಜನೆಯೇ ತುಂಬ ಹೊಸದು ಎನಿಸುವಂತಿದೆ. ಯಾವುದೇ ಕಾಯಿಲೆಯ ಶಸ್ತ್ರಚಿಕಿತ್ಸೆಗೆ ಹಾಗೂ ಆನಂತರದ ಚಿಕಿತ್ಸೆಯ ಅಗತ್ಯಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.

ಎಷ್ಟು ಮೊತ್ತದವರೆಗೆ ಸಾಲ ಕೊಡ್ತಾರೆ, ಏನೇನು ದಾಖಲೆಗಳನ್ನು ನೀಡಬೇಕು, ಯಾವ ರೀತಿಯ ಚಿಕಿತ್ಸೆ..ಮತ್ತಿತರ ಪ್ರಶ್ನೆಗಳಿಗೆ ಭಾರತಿ ಮರಡಿಯವರು ಉತ್ತರಿಸಿದ್ದಾರೆ.

Interest-free loans for needy patients

* ಕ್ಯಾನ್ಸರ್ ಚಿಕಿತ್ಸೆಗೇ ಸಾಲ ಕೊಡುವ ಅಗತ್ಯ ಏನು?
ಹಾಗೇನಿಲ್ಲ. ಎಲ್ಲ ಕಾಯಿಲೆಯ ಚಿಕಿತ್ಸೆಗೂ ಸಾಲ ಸೌಲಭ್ಯ ಕೊಡ್ತೀವಿ. ಆದರೆ ಕ್ಯಾನ್ಸರ್ ಚಿಕಿತ್ಸೆ ಸ್ವಲ್ಪ ದುಬಾರಿ ಆದ್ದರಿಂದ ಅದನ್ನು ಹೈಲೈಟ್ ಮಾಡಿದ್ದೀವಿ. ಯಾವುದೇ ಕಾಯಿಲೆಗೆ, ಯಾವುದೇ ಪದ್ಧತಿಯಲ್ಲಿ ಅಂದರೆ ಅಲೋಪಥಿಕ್, ಹೋಮಿಯೋಪಥಿಕ್, ಆಯುರ್ವೇದ..ಹೀಗೆ ಯಾವುದಾದರೂ ಸಾಲ ಸೌಲಭ್ಯ ಸಿಗುತ್ತದೆ. ಬರೀ ಶಸ್ತ್ರಚಿಕಿತ್ಸೆಗೆ ಅಲ್ಲ, ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನಿಂಗ್ ಗಳಂಥವಕ್ಕೆ ಹಾಗೂ ಆಪರೇಷನ್ ನಂತರದ ಚಿಕಿತ್ಸೆಗೂ ಸಾಲ ಸೌಲಭ್ಯ ನೀಡ್ತೀವಿ.[ಕ್ಯಾನ್ಸರ್ ಚಿಕಿತ್ಸೆಗಾಗಿ ಎಚ್ ಸಿಜಿ, ಆರೋಗ್ಯ ಫೈನಾನ್ಸ್ ನಿಂದ ಬಡ್ಡಿರಹಿತ ಸಾಲ]

* ಕನಿಷ್ಠ ಹಾಗೂ ಗರಿಷ್ಠ ಮಿತಿ ಏನು?
ಇಪ್ಪತ್ತು ಸಾವಿರದಿಂದ 5 ಲಕ್ಷದವರೆಗೆ ಸಾಲ ನೀಡ್ತೀವಿ.

Interest-free loans for needy patients

* ಪೂರ್ತಿ ಬಡ್ಡಿಯೇ ಇಲ್ಲವಂತೆ ಹೌದಾ?
ಅದು ಹಾಗಲ್ಲ. ಮೊದಲ ಹನ್ನೆರಡು ತಿಂಗಳವರೆಗೆ ಬಡ್ಡಿ ಇಲ್ಲ. ಆ ನಂತರ ಎರಡು ವರ್ಷದವರೆಗೆ ವಾರ್ಷಿಕ ಶೇ 6ರಷ್ಟು, ಮೂರು ವರ್ಷಕ್ಕೆ ವಾರ್ಷಿಕ ಶೇ 8ರಷ್ಟು ಹಾಗೂ ಗರಿಷ್ಠ ಕಾಲಾವಧಿ ನಾಲ್ಕು ವರ್ಷಕ್ಕೆ ವಾರ್ಷಿಕ ಶೇ 9ರಷ್ಟು ಬಡ್ಡಿ ಹಾಕಲಾಗುತ್ತದೆ. ಶೇ 2ರಷ್ಟು ಪ್ರೊಸೆಸೆಂಗ್ ಫೀ ಇರುತ್ತದೆ.

* ಯಾವ ದಾಖಲೆ, ಶ್ಯೂರಿಟಿ ಕೊಡಬೇಕು?
ಆಧಾರ್ ಅಥವಾ ಪ್ಯಾನ್ ಕಾರ್ಡ್ ನಂಥ ದಾಖಲೆ ಇರಬೇಕು. ಶ್ಯೂರಿಟಿಯ ಅಗತ್ಯವಿಲ್ಲ.

Interest-free loans for needy patients

* ಎಲ್ಲ ಆಸ್ಪತ್ರೆಗಳಲ್ಲೂ ಈ ರೀತಿ ಅರೋಗ್ಯ ಫೈನಾನ್ಸ್ ನ ಸಾಲ ಸೌಲಭ್ಯ ಪಡೆಯಬಹುದಾ?
ಬೆಂಗಳೂರಿನ ಎಚ್ ಸಿಜಿ ಹಾಗೂ ನಾರಾಯಣ ಹೃದಯಾಲಯದ ಜತೆಗೆ ನಮ್ಮ ಸಂಸ್ಥೆ ಒಪ್ಪಂದವಿದೆ. ಆ ಮೂಲಕ ಸಾಲ ಪಡೆದರೆ ಕಡಿಮೆ ಬಡ್ಡಿದರ ಇರುತ್ತದೆ. ಯಾವ ಆಸ್ಪತ್ರೆಗಳ ಜತೆಗೆ ಒಪ್ಪಂದವಿದೆ ಎಂಬುದನ್ನು ಆರೋಗ್ಯ ಫೈನಾನ್ಸ್ ವೆಬ್ ಸೈಟ್ ನಲ್ಲಿ ನೋಡಬಹುದು. ಒಪ್ಪಂದ ಇರುವ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಕಡೆಗೆ ಬಡ್ಡಿ ದರ ಬೇರೆ ಇರುತ್ತದೆ.

* ಎಷ್ಟು ದಿನದೊಳಗೆ ಸಾಲ ಮಂಜೂರಾಗುತ್ತದೆ
ಕನಿಷ್ಠ 24 ಗಂಟೆಯಿಂದ ಗರಿಷ್ಠ 72 ಗಂಟೆಯೊಳಗೆ ಸಾಲ ಮಂಜೂರಾಗುತ್ತದೆ. ಇನ್ನೊಂದು ಅವಕಾಶ ಇದೆ. ಅದೇನೆಂದರೆ ನಮ್ಮದೇ ಆರೋಗ್ಯ ಕಾರ್ಡ್ ಅನ್ನೋ ಪ್ರೀ ಅಪ್ರೂವ್ಡ್ ಲೋನ್ ಕಾರ್ಡ್ ಇದೆ. ಅದನ್ನು ಪಡೆದರೆ ಐದು ಜನರಿರುವ ಕುಟುಂಬಕ್ಕೆ ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಇರುತ್ತದೆ. ಆಯಾ ವ್ಯಕ್ತಿಯ ಆದಾಯಕ್ಕೆ ತಕ್ಕಂತೆ ಸಾಲದ ಮಿತಿ ನೀಡಲಾಗಿರುತ್ತದೆ. ವರ್ಷಕ್ಕೆ ಒಮ್ಮೆ ಅದನ್ನು ರಿನೀವ್ ಮಾಡಿಸಬೇಕು.

Interest-free loans for needy patients

* ಇನ್ಷೂರೆನ್ಸ್ ಅಥವಾ ಸರಕಾರದಿಂದ ಆರೋಗ್ಯ ಚಿಕಿತ್ಸೆಗೆ ಅನುಕೂಲ ಇದ್ದವರಿಗೆ ಈ ಸಾಲ ಸೌಲಭ್ಯದಿಂದ ಏನು ಪ್ರಯೋಜನ?
ಎಲ್ಲ ರೀತಿಯ ಚಿಕಿತ್ಸೆಗಳಿಗೆ ಇನ್ಷೂರೆನ್ಸ್ ಅನ್ವಯ ಆಗಲ್ಲ, ಜತೆಗೆ ಹಣಕಾಸಿನ ಮಿತಿ ಸಹ ಇರುತ್ತದೆ. ಆಧುನಿಕ ಚಿಕಿತ್ಸೆ ಕೊಡಿಸುವುದಕ್ಕೆ ಸರಕಾರದ ಯೋಜನೆಗಳಲ್ಲಿ ಅವಕಾಶ ಇಲ್ಲ. ಜತೆಗೆ ಅಷ್ಟು ಹಣ ತಕ್ಷಣಕ್ಕೆ ಹೊಂದಿಸುವುದಕ್ಕೆ ಅಗಲ್ಲ. ಅಂಥ ಸಂದರ್ಭದಲ್ಲಿ ಈ ಸಾಲ ಸೌಲಭ್ಯದಿಂದ ಸಹಾಯವಾಗುತ್ತದೆ.

* ಯಾವುದೇ ದಾಖಲೆಗಳು ಇಲ್ಲದಿದ್ದರೂ, ಇನ್ ಕಂ ಪ್ರೂಫ್ ಇಲ್ಲದಿದ್ದರೂ ಸಾಲ ಕೊಡ್ತೀವಿ ಅಂತೀರಲ್ಲ, ಹೇಗೆ?
ನಮ್ಮ ಫೈನಾನ್ಸ್ ತಂಡದಿಂದ ಸಂಬಂಧಪಟ್ಟವರಿಂದ ಸೈಕೋ ಮೆಟ್ರಿಕ್ ಟೆಸ್ಟ್ ಅಂತ ಮಾಡ್ತೀವಿ. ಅದರಿಂದ ನಮಗೆ ಸಾಲ ಪಡೆಯಲು ಬಂದವರ ಮನಸ್ಥಿತಿ ಅರ್ಥವಾಗುತ್ತದೆ. ಆ ನಂತರವೇ ಸಾಲ ಕೊಡೋದು.

Interest-free loans for needy patients

* ನಮಗೆ ಇನ್ನೂ ಪ್ರಶ್ನೆಗಳಿವೆ ಮತ್ತಷ್ಟು ಮಾಹಿತಿ ಬೇಕು ಅಂದರೆ ನಿಮ್ಮನ್ನು ಸಂಪರ್ಕಿಸುವುದು ಹೇಗೆ?
ಕನ್ನಡದಲ್ಲಿ ಮಾಹಿತಿ ಬೇಕು ಅಂದರೆ ಭಾರತಿ ಮೊಬೈಲ್ ಸಂಖ್ಯೆ 9343174843, ಇಂಗ್ಲಿಷ್ ನಲ್ಲಿ ಮಾಹಿತಿ ಬೇಕೆಂದರೆ ಮೊ. 9769205032 ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Arogya Finance, a leading social healthcare startup Friday at Bengaluru announces interest free loan for all kind of treatments. Here is an FAQ about loan facility.
Please Wait while comments are loading...