ಬೆಳ್ಳಂದೂರು ಮೆಟ್ರೋ ನಿಲ್ದಾಣ: ಇಂಟೆಲ್ ಜೊತೆಗೆ ನಮ್ಮ ಮೆಟ್ರೋ ಒಪ್ಪಂದ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ14 : ನಮ್ಮ ಮೆಟ್ರೋ ಮಾರ್ಗದ ಎರಡನೇ ಹಂತದ ಕಾಮಗಾರಿಯಲ್ಲಿ ಬರುವ ಬೆಳ್ಳಂದೂರು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಬಿಎಂಆರ್ ಸಿಎಲ್ ನೊಂದಿಗೆ ಇಂಟೆಲ್ ಕಂಪನಿ ಕೈಜೋಡಿಸಿದ್ದು ಒಪ್ಪಂದಕ್ಕೆ ಸಹಿ ಹಾಕಿದೆ.

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ಬೆಳ್ಳಂದೂರು ಮೆಟ್ರೋ ನಿಲ್ದಾಣ, ಔಟರ್ ರಿಂಗ್ ರಸ್ತೆ ಜತೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಆರ್ ಪುರಂ ನಡುವೆ ಕಾಮಗಾರಿಗಳು ಆರಂಭವಾಗಲಿದ್ದು ಅದಕ್ಕೆ ಇಂಟೆಲ್ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿದೆ.

ಇಂದು ಬಿಇಎಂಎಲ್ ನಿಂದ ಮೂರು ಮೆಟ್ರೋ ಬೋಗಿಗಳ ಹಸ್ತಾಂತರ

ಬೆಳ್ಳಂದೂರು ಮೆಟ್ರೋ ನಿಲ್ದಾಣ ನಿರ್ಮಾಣವಾದರೆ ಇಂಟೆಲ್ ಕಂಪನಿಯಿಂದ ನೇರವಾಗಿ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸಬಹುದಾಗಿದೆ. ಇನ್ನು 30 ವರ್ಷಗಳ ವರೆಗೆ ಕಂಪನಿಯು ಜಾಹಿರಾತುಗಳನ್ನು ನಿಲ್ದಾಣಗಳಲ್ಲಿ ಅಳವಡಿಸುವ ಹಕ್ಕನ್ನು ಪಡೆದಿದೆ. ಬಿಎಂಆರ್ ಸಿ ಎಲ್ ಜತೆಗೆ 100 ಕೋಟಿ ರೂಗಳ ಒಪ್ಪಂದಕ್ಕೆ ಸಹಿ ಹಾಕಿದೆ.

Intel inks to adopt Benllandur Metro station

ಕಡುಬೀಸನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಎಂಬಸ್ಸಿ ಕಂಪನಿಯ ಜತೆಗೆ 100 ಕೋಟಿ ರೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರೆಸ್ಟೀಜ್ ಗ್ರೂಪ್ ಸೇರಿದಂತೆ ಐದಾರು ಕಂಪನಿಗಳ ಜತೆಗೆ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದೆ.

ಎರಡನೇ ಹಂತ ಮೆಟ್ರೋ ಕಾಮಗಾರಿಯಲ್ಲಿ 13 ಮೆಟ್ರೋ ನಿಲ್ದಾಣಗಳು ಬರಲಿವೆ. ಸಿಲ್ಕ್ ಬೋರ್ಡ್ ಜಂಕ್ಷನ್, ಎಚ್ ಎಸ್ ಆರ್ ಲೇಔಟ್, ಅಗರ ಜಂಕ್ಷನ್, ಇಬ್ಲೂರು ಜಂಕ್ಷನ್, ಬೆಳ್ಳಂದೂರು, ಕಡುಬೀಸನಹಳ್ಳಿ, ಮಾರತ್ತಹಳ್ಲಿ, ಇಸ್ರೋ ಲೇಔಟ್, ದೊಡ್ಡನೆಕ್ಕುಂದಿ, ಡಿಆರ್ ಡಿಓ ಸ್ಪೋರ್ಸ್ ಕಾಂಪ್ಲೆಕ್ಸ್, ಮಹಾದೇವಪುರ ಹಾಗೂ ಕೆಆರ್ ಪುರಂ ನಿಲ್ದಾಣಗಳು ಬರಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Technology gaint intel has signed an MOU with BMRCL to adopt the upcoming Bellandur Metro station on outer Ring Road along the silk board junction -KR Puram corridar(Phase 2).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ