ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸ್ ವಿರುದ್ಧ ತಿರುಗಿಬಿದ್ದ ವಕೀಲ

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 8: 2012ರ ಮಾರ್ಚ್‌ 2ರಂದು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ವಕೀಲರು, ಪೊಲೀಸರ ನಡುವಿನ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೋಟರಿ ವಕೀಲರೊಬ್ಬರು ಒಂದು ಕೋಟಿ ಪರಿಹಾರ ಕೋರಿ ಉಚ್ಚ ನ್ಯಾಯಲಯದ ಮೆಟ್ಟಿಲೇರಿದ್ದಾರೆ.

2012ರ ಮಾರ್ಚ್‌ 2ರಂದು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ಘರ್ಷಣೆ ತಾರಕಕ್ಕೇರಿತ್ತು. ಈ ವೇಳೆ ಜಯನಗರದ 4ನೇ ಬ್ಲಾಕ್‌ ನಿವಾಸಿ ವಕೀಲ ಅರುಣ್ ಆರ್. ನಾಯಕ್ ಅವರು ಗಂಭೀರ ಗಾಯಗೊಂಡಿದ್ದರು. ಅಲ್ಲದೆ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದುಕೊಂಡಿದ್ದರು.[ಬೆಂಗಳೂರು ಪೊಲೀಸ್ ವಿರುದ್ಧ ತಿರುಗಿಬಿದ್ದ ವಕೀಲ]

injured layer has filed a petition in high court, relief seeking for 1 crore

ಇನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಘರ್ಷಣೆಯಿಂದ ನಾನು ಗಾಯಗೊಂಡ ನಂತರ ಬದುಕು ದುಸ್ತರವಾಗಿದೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಹಾಗೂ ಬದುಕು ನಡೆಸುವುದಕ್ಕೆ ಕಷ್ಟವಾಗಿದೆ. ಆದ್ದರಿಂದ ಮಧ್ಯಂತರ ಪರಿಹಾರವಾಗಿ ರು. 10 ಲಕ್ಷ ನೀಡಲು ನಿರ್ದೇಶಿಸಬೇಕು' ಎಂದು ಕೋರಿದ್ದಾರೆ.[JNU: ಮತ್ತೆ ಕೋಲಾಹಲ, ರಣರಂಗವಾದ ಪಟಿಯಾಲ ಕೋರ್ಟ್]

ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿದ್ದು, ಗೃಹ ಇಲಾಖೆ ಕಾರ್ಯದರ್ಶಿ, ಸಿಬಿಐ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿದೆ.

English summary
A lawyer has filed a petition in High Court of Karnataka seeking Rs. 1 crore compensation from Bengaluru police for the injuries caused to him when police and lawyers clashed on March 2, 2012 in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X