ಇನ್ಫೋಸಿಸ್ ಸಂದರ್ಶನ, ತಲೆಮೇಲೆ ಇಟ್ಟಿಗೆ ಬಿದ್ದು ಯುವತಿ ಸಾವು

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,16: ಇನ್ಫೋಸಿಸ್ ನಡೆಸಿದ ವಾಕ್ ಇನ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಯುವತಿಯ ತಲೆ ಮೇಲೆ ಪಕ್ಕದಲ್ಲಿ ಕಾಮಗಾರಿ ಹಂತದಲ್ಲಿದ್ದ ಕಟ್ಟಡದ ಇಟ್ಟಿಗೆ ಬಿದ್ದು, ಸಾವನ್ನಪ್ಪಿದ ಘಟನೆ ಮಂಗಳವಾರ ಜೆ.ಪಿ ನಗರದ ಮಿನಿಫಾರೆಸ್ಟ್ ಸಮೀಪ ನಡೆದಿದೆ.

ಆಂಧ್ರದ ಚಿತ್ತೂರು ಮೂಲದ ಮೋನಿಕಾ (23) ಮೃತಪಟ್ಟ ಯುವತಿ. ಈಕೆ ತನ್ನ ಸಹೋದರ ಸಂಬಂಧಿಯ ಜೊತೆ ವಾಕ್ ಇನ್ ಸಂದರ್ಶನಕ್ಕೆ ಬಂದ ವೇಳೆ ನಿರ್ಮಾಣದ ಹಂತದಲ್ಲಿದ್ದ ಪಕ್ಕದ ಕಟ್ಟಡದ ಮೇಲಿನಿಂದ ಇಟ್ಟಿಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.[ಇನ್ಫೋಸಿಸ್ ಕ್ಯಾಂಪಸಿನಲ್ಲಿ ರೇಪ್, ವಿಡಿಯೋ ಮಾಡಿದ ದುರುಳರು]

Infosys interview, a young lady killed by falling brick in Bengaluru

ಮೋನಿಕಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದ್ದಳು. ಈಕೆ ಇನ್ಫೋಸಿಸ್ ಸಂಸ್ಥೆ ವತಿಯಿಂದ ಜೆ.ಪಿನಗರದಲ್ಲಿದ್ದ ವಾಕ್ ಇನ್ ಸಂದರ್ಶನಕ್ಕೆ ಮಂಗಳವಾರ ತನ್ನ ಸಹೋದರ ಸಂಬಂಧಿಯ ಜೊತೆ ಆಗಮಿಸಿದ್ದಳು.

ಮೋನಿಕಾಳ ಸಹೋದರ ಸಂಬಂಧಿ ಸಂದರ್ಶನಕ್ಕೆ ಬರುವ ಅವಸರದಲ್ಲಿ ಗುರುತಿನ ಚೀಟಿ ತರುವುದನ್ನು ಮರೆತುಬಿಟ್ಟಿದ್ದನು. ಇದನ್ನು ತರಲು ಆತ ಮನೆಗೆ ತೆರಳಿದ್ದನು. ಇದೇ ವೇಳೆ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಮೋನಿಕಾಗೆ ಸಂದರ್ಶನದ ವೇಳೆ ಮಾತನಾಡಬಾರದೆಂದು ಹೇಳಿದ್ದಾರೆ.[ಭರಚುಕ್ಕಿ ಜಲಪಾತದಲ್ಲಿ ಜಾರಿ ಬಿದ್ದು ಇನ್ಫೋಸಿಸ್ ಟೆಕ್ಕಿ ಸಾವು]

ಹಾಗಾಗಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಮೋನಿಕಾ ಸಂದರ್ಶನ ನಡೆಯುತ್ತಿದ್ದ ಕಟ್ಟಡದಿಂದ ಹೊರಬಂದು ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದಾಳೆ. ಈ ವೇಳೆ ಮೂರನೇ ಮಹಡಿಯ ಮೇಲಿನಿಂದ ಬಿದ್ದ ಇಟ್ಟಿಗೆ ಈಕೆಯ ತಲೆಮೇಲೆ ಬಿದ್ದಿದೆ.

ಈ ಘಟನೆ ನಡೆದ ತಕ್ಷಣ ಮೋನಿಕಾಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಕಟ್ಟಡ ಮಾಲೀಕ ಮೋಹನ್, ಗುತ್ತಿಗೆದಾರ ಶಂಕರ್ ಹಾಗೂ ಉಸ್ತುವಾರಿ ವಹಿಸಿದ್ದ ಮನೋಜ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A young lady Monika (23) from Chittoor in Andhra Pradesh has been killed at Infosys campus in Bengaluru when a hallow brick fell on her head. She was rushed to NIMHANS, but could not survive. She had come to attend walk-in interview in Infosys.
Please Wait while comments are loading...