ಶಂಕರ ನೇತ್ರಾಲಯದೊಂದಿಗೆ ಇನ್ಫೋಸಿಸ್ ತರಬೇತಿ ಘಟಕ

Written By:
Subscribe to Oneindia Kannada

ಬೆಂಗಳೂರು, ಜೂನ್, 09: ಶಂಕರ ಕಣ್ಣಿನ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಇನ್ಫೋಸಿಸ್ ಕಣ್ಣು ಸಂಶೋಧನಾ ಕೇಂದ್ರ ಮತ್ತು ತರಬೇತಿ ಸಂಸ್ಥೆಯನ್ನು ಆರಂಭ ಮಾಡಲು ಮುಂದಾಗಿದೆ.

5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಆರಂಭ ಮಾಡಲಾಗುತ್ತಿದೆ. ಶಂಕರ ಅಕಾಡಮಿ ಆಫ್ ವಿಸನ್- ಇನ್ಫೋಸಿಸ್ ನೇತ್ರ ತರಬೇತಿ ಮತ್ತು ಸಂಶೋಧನಾ ಕೇಂದ್ರ' ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ಸಲಕರಣೆಗಳ ಮೂಲಕ ನಾಗರಿಕರಿಗೆ ಕಣ್ಣಿನ ಚಿಕಿತ್ಸಾ ಸೌಲಭ್ಯವನ್ನು ಘಟಕ ನೀಡಲಿದೆ.[ಇನ್ಫಿ ನಾರಾಯಣಮೂರ್ತಿ ಸಿಎಂ ಭೇಟಿಯಾಗಿದ್ದು ಯಾಕೆ?]

Infosys

ಯಾವ ಬಗೆಯ ತರಬೇತಿ? ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ತರಬೇತಿಯನ್ನು ಒದಗಿಸಿ ಕೊಡಲಾಗುವುದು. ಮೆಡಿಕಲ್ ಕೋರ್ಸ್ ಮತ್ತು ಫೆಲೋಶಿಪ್ ಗಳನ್ನು ನೀಡಲಾಗುವುದು. ಸರ್ಜಿಕಲ್ ಟೆಕ್ನಿಕ್ಸ್, ಪ್ಯಾರಾಮೆಡಿಕಲ್ ಕೋರ್ಸ್ ನ್ನು ಸಹ ಶಂಕರ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರಿಂದ ಕೊಡಮಾಡಲಾಗುವುದು.[ಬದಲಾವಣೆಗೆ ಸಜ್ಜಾದ ಇನ್ಫೋಸಿಸ್, ರಾಮನಗರಕ್ಕೆ ಬಯೋಗ್ಯಾಸ್]

ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿಯ ಪ್ರಮುಖ ಉದ್ದೇಶ. 130ಕ್ಕೂ ಅಧಿಕ ಗ್ರಾಮೀಣ ಭಾಗದ ಯುವತಿಯರಿಗೆ ಉದ್ಯೋಗವಕಾಶ ಮಾಡಿಕೊಡುವುದು ಧ್ಯೇಯ. ಈ ಸಂಸ್ಥೆ ಪ್ರತಿವರ್ಷ 10 ಸಾವಿರ ಜನರನ್ನು ತಲುಪುವ ಗುರಿಯನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys Foundation, the philanthropic arm of Infosys, has signed a Memorandum of Understanding (MoU) with Sankara Eye Hospitals to establish a sustainable eye care training academy and undertake research & training activities in various fields of eye care. As part of the MoU, Sankara Eye Hospital, a recognized center for training and capacity building of both medical and non-medical staff, will be provided with a grant of INR 5 Crore.
Please Wait while comments are loading...