ಇನ್ಫೋಸಿಸ್ ನಿಂದ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವ್ಯಾನ್ ಕೊಡುಗೆ!

Written By: Ramesh
Subscribe to Oneindia Kannada

ಬೆಂಗಳೂರು, ಸೆ. 23 : ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸೆ. 23 ರಂದು ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಿಇಒ ಯು.ಬಿ ಪ್ರವೀಣ್ ರಾವ್ ಹಾಗೂ ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಬಿ.ಎನ್ ಗಂಗಾಧರ್ ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವ್ಯಾನ್ ಯೊಂದನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕೊಡುಗೆ ನೀಡಿದೆ. [2017ರಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭ]

Van

ಬೆಂಗಳೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಕ್ತಾದಾನ ಶಿಬಿರಗಳ ಸ್ಥಳಕ್ಕೆ ತೆರಳಿ ರಕ್ತವನ್ನು ಶೇಖರಿಸುವ ಅನುಕೂಲಕ್ಕಾಗಿಈ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವ್ಯಾನ್ ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಇನ್ಫೋಸಿಸ್ ಪೌಂಡೇಶನ್ ನೀಡಿತು.

ಈ ವ್ಯಾನ್ ನಲ್ಲಿರುವ ವಿಶೇಷತೆಗಳು : ಈ ವ್ಯಾನ್ ಅತ್ಯಾಧುನಿಕವಾಗಿದ್ದು. ಇದು ಸಂಪೂರ್ಣ ಹವಾ ನಿಯಂತ್ರಣ ಒಳಗೊಂಡಿರುತ್ತದೆ. ಹಾಗೂ ವ್ಯಾನ್ ಒಳಗೆ ಮೆಡಿಕಲ್ ಗೆ ಸಂಬಂಧಿಸಿದ ಎಲ್ಲಾ ಉಪಕರಣಗಳು ಲಭ್ಯವಿರಲಿವೆ. ವಿಶೇಷವೆನೆಂದರೆ ಈ ವ್ಯಾನ್ ನಲ್ಲಿ ಸುಮಾರು 250ಲೀ ರಕ್ತ ಶೇಖರಣೆ ಮಾಡಬಹುದಾಗಿದೆ. ಇಂತಹ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವಾಹನವನ್ನು ಇನ್ಫೋಸಿಸ್ ಕೊಡುಗೆಯಾಗಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys Foundation has donated a blood bank van, which has been specially designed for blood donation camps in rural and city areas, to NIMHANS on September 23, 2016. U B Pravin Rao, COO, Infosys Ltd handed over the bus to Dr. B N Gangadhara, Director, NIMHANS, at the Infosys Bengaluru campus.
Please Wait while comments are loading...