ಹೆಂಡತಿಯನ್ನು ಭೀಕರವಾಗಿ ಹತ್ಯೆಗೈದಿದ್ದ ಇನ್ಫಿ ಮಾಜಿ ಉದ್ಯೋಗಿಗೆ ಜೈಲು ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 29 : ತನ್ನ ಹೆಂಡತಿಯನ್ನು ಭೀಕರವಾಗಿ ಹತ್ಯೆಗೈದ 7 ವರ್ಷಗಳ ನಂತರ ಇನ್ಫೋಸಿಸ್ ಉದ್ಯೋಗಿಯನ್ನು ಅಪರಾಧಿ ಎಂದು ಸಿಟಿ ಮತ್ತು ಸಿವಿಲ್ ಪ್ರಧಾನ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಇನ್ಫೋಸಸ್ ನಲ್ಲಿ ಮಾನವ ಸಂಪನ್ಮೂಲ ಮ್ಯಾನೇಜರ್ ಆಗಿದ್ದ ಲಖನೌ ಮೂಲದ ಸತೀಶ್ ಕುಮಾರ್ ಗುಪ್ತಾ, ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿದ್ದ ತನ್ನ ಹೆಂಡತಿ ಪ್ರಿಯಾಂಕಾ ಗುಪ್ತಾಳನ್ನು 2010ರ ಆಗಸ್ಟ್ 8ರಂದು ಭೀಕರವಾಗಿ ಹತ್ಯೆಗೈದಿದ್ದ.

ಪತ್ನಿಯನ್ನ ಕೊಂದದ್ದು ಇನ್ಫಿ ಉದ್ಯೋಗಿಯೇ!

ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ವಿಚಾರಣೆಗಾಗಿ ಹುಳಿಮಾವು ಠಾಣೆಯ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದಾಗ ಆತ ಕೈಗೆ ಮೊಳೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಯತ್ನಿಸಿದ್ದ. ನಂತರ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

Infosys ex manager convicted for cold blooded murder of wife

'ಕ್ಲಾತ್' ನೋಡಿ 'ಕ್ಲಾಸ್' ಅಳೆಯುವ ಮನಸ್ಥಿತಿ ಬದಲಾಗಬೇಕಿದೆ: ಸುಧಾಮೂರ್ತಿ

ಹತ್ಯೆ ಮಾಡಿದ ರೀತಿ ಮತ್ತು ಹಿಂದಿದ್ದ ಕಾರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಕಣ್ಣಾಮುಚ್ಚಾಲೆ ಆಟವಾಡುವ ನೆಪದಲ್ಲಿ ಆತ ಹೆಂಡತಿಯ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿದ್ದ. ನಂತರ ಮನೆಗೆ ದರೋಡೆಕೋರರು ನುಗ್ಗಿರುವಂತೆ ಊಹಿಸಲು ಹೇಳಿ ಕುರ್ಚಿಗೆ ಕಟ್ಟಿದ್ದ. ನಂತರ ಕುತ್ತಿಗೆಗೆ ಹಗ್ಗ ಬಿಗಿದು, ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದ.

ಪೊಲೀಸರ ದಾರಿ ತಪ್ಪಿಸಲು ಯತ್ನ

ತಾನು ಬೆಳಿಗ್ಗೆ 5.30ಕ್ಕೆ ವಾಯುವಿಹಾರಕ್ಕೆ ಹೋಗಿದ್ದೆ. ಅಷ್ಟರಲ್ಲಿ ಮನೆ ಬಳಿ ಯಾರೋ ಅಪರಿಚಿತರು ಇದ್ದಾರೆ ಎಂದು ಹೆಂಡತಿಯ ಕರೆ ಬಂದಿತ್ತು. ಬಾಗಿಲು ತೆಗೆಯಬಾರದೆಂದು ಹೇಳಿ 6.40ಕ್ಕೆ ಮನೆಗೆ ಮರಳಿದಾಗ ಮನೆ ಒಳಗಿನಿಂದ ಚಿಲುಕ ಹಾಕಿತ್ತು. ಎಷ್ಟೊತ್ತು ಗಂಟೆ ಬಾರಿಸಿದರೂ ಹೆಂಡತಿ ಬಾಗಿಲು ತೆರೆಯಲೇ ಇಲ್ಲ.

ಮೈಸೂರಿನಲ್ಲಿ ನೇಣಿಗೆ ಶರಣಾದ ಕಲಬುರ್ಗಿಯ ಇನ್ಫೋಸಿಸ್ ಟ್ರೇನಿ

ಆಗ ನಾನು ಕಚೇರಿಗೆ ಹೋಗಿ ಡ್ಯುಪ್ಲಿಕೇಟ್ ಕೀ ತಂದು ಬಾಗಿಲು ತೆರೆದಾಗ ಆಕೆ ಹತ್ಯೆಯಾಗಿದ್ದು ನೋಡಿ ಆಘಾತಗೊಂಡಿದ್ದೆ ಎಂದು ಪೊಲೀಸರ ತನಿಖೆಯನ್ನು ದಿಕ್ಕುತಪ್ಪಿಸಲು ಯತ್ನಿಸಿದ್ದ. ಕಳ್ಳರು ಬಂದಿದ್ದರೆ ಕಳುವಾಗಬೇಕಿತ್ತು. ಆದರೆ, ಅದು ಯಾವುದೂ ಆಗಿರಲಿಲ್ಲ. ಎಲ್ಲ ವಸ್ತುಗಳು ಇದ್ದಂತೆಯೇ ಇದ್ದವು. ಆಗ ಪೊಲೀಸರಿಗೆ ಅನುಮಾನ ಶುರುವಾಗಿತ್ತು.

ಆದರೆ ಸತೀಶ ವಿಭಿನ್ನವಾದ ಹೇಳಿಕೆ, ಮೊಬೈಲ್ ಕರೆಗಳನ್ನು ಟ್ರಾಕ್ ಮಾಡಿದಾಗ ಪೊಲೀಸರ ಅನುಮಾನ ನಿಜವಾಗಿತ್ತು. ಅಸಲಿಗೆ ಸತೀಶ್ ಮನೆಯಿಂದ ಹೊರಹೋಗಿರಲೇ ಇಲ್ಲ. ತಾನು ಮಾಡಿದ ಕರೆಯ ಸ್ಥಳ ಮತ್ತು ಹೆಂಡತಿಯ ಫೋನ್ ಗೆ ಮಾಡಿದ್ದ ಕರೆಯ ಸ್ಥಳ ಒಂದೇ ಆಗಿತ್ತು.

ಹತ್ಯೆ ಮೂಲ ಉದ್ದೇಶವಾದರೂ ಏನಾಗಿತ್ತು

ಗಂಡ ಹೆಂಡತಿಯ ನಡುವೆ ಸಾಮರಸ್ಯ ಇರಲಿಲ್ಲ. ಸತೀಶನ ಹೆಂಡತಿಯನ್ನು ಪ್ರಿಯಾಂಕಾ ತುಚ್ಛವಾಗಿ ನೋಡಿಕೊಳ್ಳುತ್ತಿದ್ದಳು. ಅವಮಾನವನ್ನೂ ಮಾಡಿತ್ತಿದ್ದಳು. ಈ ಕಾರಣದಿಂದಾಗಿ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಆತ ಪದವೀಧರನಾಗಿದ್ದ, ಪ್ರಿಯಾಂಕಾ ಸ್ನಾತಕೋತ್ತರ ಪದವೀಧರೆಯಾಗಿದ್ದಳು. ಮೇಲು ಕೀಳೆಂಬ ಒಣಪ್ರತಿಷ್ಠೆ ಅವರಿಬ್ಬರ ನಡುವೆ ಕಂದಕ ಸೃಷ್ಟಿಯಾಗಲು ಕಾರಣವಾಗಿತ್ತು. ಅಲ್ಲದೆ, ಪ್ರಿಯಾಂಕಾ ಗಂಡನನ್ನು ನಪುಂಸಕನೆಂದು ಜರಿಯುತ್ತಿದ್ದುದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಎಲ್ಲ ಕಾರಣಗಳಿಂದ ಆತ ರೋಸಿಹೋಗಿದ್ದ. ಇದಕ್ಕೊಂದು ಗತಿ ಕಾಣಿಸಬೇಕೆಂದು ಪ್ಲಾನ್ ಮಾಡಿದ ಆತ, ಅತ್ಯಂತ ಜಾಣತನದಿಂದ ಪ್ರಿಯಾಂಕಾಳ ಹತ್ಯೆ ಬೇರೆಯವರು ಮಾಡಿದ್ದಾರೆ ಎಂದು ಕಾಣಿಸುವಂತೆ ಸನ್ನಿವೇಶವನ್ನು ಸೃಷ್ಟಿಸಿದ್ದ. ಆದರೆ, ಪೊಲೀಸರನ್ನು ಮೋಸ ಮಾಡಲು ಆದೀತೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The principal city civil and sessions court has convicted Infosys former HR manager for murdering his wife brutally by enacting a fake incident of robbery and murder. Satish Kumar Gupta had killed his wife Priyanka Gupta.
Please Wait while comments are loading...