ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೈತ್ಯಗಾತ್ರ ಗಡ್ಡೆಗಳು ಕಂದನ ಪ್ರಾಣಕ್ಕೆ ಸಂಚಕಾರ ತಂದಿತ್ತಾ?

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 22 : ನವಜಾತ ಶಿಶುವಿನ ಕುತ್ತಿಗೆ ಹಾಗೂ ಕಂಕುಳ ಭಾಗದಲ್ಲಿ ಬೆಳೆದಿದ್ದ ದೈತ್ಯಗಾತ್ರದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯಿಂದ ಯಶಸ್ವಿಯಾಗಿ ಕತ್ತರಿಸಿ ತೆಗೆದು ಮಗುವಿನ ಪ್ರಾಣ ಉಳಿಸಿದ ಘಟನೆ ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಡೆದಿದೆ.

ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಡಾ. ಎಂ.ಎಂ ಝಮೀರ್ ನೇತೃತ್ವದ ನವಜಾತ ಶಿಶು ತಜ್ಞರು, ಅರವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರನ್ನೊಳಗೊಂಡಂತೆ ಬಹು ವಿಭಾಗಗಳ ವೈದ್ಯರ ತಂಡದ ಪ್ರಯತ್ನದಿಂದ ಭಾರೀ ಗಾತ್ರದ ಎರಡು ಗಡ್ಡೆಗಳನ್ನು ಯಶಸ್ವಿಯಾಗಿ ತೆಗೆಯಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ.[ಮಾನವನಿಗೆ ಹೃದಯ ಕವಾಟ : ಕಾಮಧೇನುವೇ ನಿನಗೆ ಸಾಟಿಯಿಲ್ಲ]

 infant- St Martha's hospital saved one child in bengaluru

ಹೊಸೂರು ಮೂಲದ ಲಾರಿ ಚಾಲಕ ಎಂ. ನಾರಾಯಣ ಸ್ವಾಮಿ ಎಂಬುವರ ಪತ್ನಿ 8ನೇ ತಿಂಗಳಿನಲ್ಲಿದ್ದಾಗ ಆಕೆಯ ಮಗುವಿನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಗೆಡ್ಡೆಗಳು ದಿನಗಳೆದಂತೆ ಭಾರೀ ದೊಡ್ಡದಾಗುತ್ತಾ ಹೋಗಿತ್ತು. ಇದನ್ನರಿತ ನಾರಾಯಣ ಸ್ವಾಮಿ ಪತ್ನಿಯನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ತೋರಿಸಿದರೂ ವೈದ್ಯರು ಸುರಕ್ಷಿತ ಪ್ರಸವ ಹಾಗೂ ಸರ್ಜರಿಯ ಭರವಸೆ ನೀಡಲಿಲ್ಲ.

ಬಳಿಕ ನಗರದ ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಸ್ರೀರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಿದಾಗ ಸುರಕಲ್ಷಿತ ಪ್ರಸವದ ಭರವಸೆ ನೀಡಿದರು. ಈ ನಿಮಿತ್ತ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಗುವಿನ ಕುತ್ತಿಗೆ ಭಾಗದಲ್ಲಿ 10ಸೆಂ.ಮೀ, ಕಂಕುಳಲ್ಲಿ 8 ಸೆಂ.ಮೀ ಗಾತ್ರದ ಗಡ್ಡೆಗಳು ಕಂಡು ಬಂದವು. ಈ ಎರಡು ಗಡ್ಡೆಗಳು ಮಗುವಿನ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿತ ವೈದ್ಯರ ತಂಡ ತಾಯಿಯ ಪ್ರಸವದ ಬಳಿಕ ಮಗುವಿನ ಶಸ್ತ್ರಚಿಕಿತ್ಸೆಯನ್ನು ತಕ್ಷಣವೇ ನಡೆಸಿತು.

ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದ ಡಾ. ಝಮೀರ್ ಇಂತಹ ಪ್ರಕರಣಗಳು 10,000ಕ್ಕೊಂದು ಕಾಣಿಸಿರ್ಕೊಳಳುತ್ತದೆ. ಇದಕ್ಕೆ ಶಸ್ತ್ರ ಚಿಕಿತ್ಸೆಯ ಹೊರತು ಬೇರೆ ಯಾವ ಔಷಧೋಪಚಾರಗಳು ಪ್ರಯೋಜಕ್ಕೆ ಭಾರದು. ಅಲ್ಲದೇ ಈ ಎರಡು ಗಡ್ಡೆಗಳು ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸಿತ್ತು. ಹಾಗಾಗಿ ಮಗುವಿನ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂದು ಹೇಳಿದರು.

English summary
Bengaluru Infant St Martha's hospital doctors has saved a child. They are removed 2 tumors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X