ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಪೇದೆ ಹಾಲುಣಿಸಿ ರಕ್ಷಿಸಿದ್ದ ಮಗು ಕುಮಾರಸ್ವಾಮಿ ಸಾವು

By Manjunatha
|
Google Oneindia Kannada News

ಬೆಂಗಳೂರು, ಜೂನ್ 18: ನಗರದ ದೊಡ್ಡ ತೋಗೂರಿನ ಕಸದ ತೊಟ್ಟಿಯೊಂದರಲ್ಲಿ ಸಿಕ್ಕ ಮಗುವನ್ನು ಮಹಿಳಾ ಪೊಲೀಸ್ ಪೇದೆಯೊಬ್ಬರು ಎದೆ ಹಾಲುಣಿಸಿ ರಕ್ಷಿಸಿದ್ದ ಸುದ್ದಿ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು ಆದರೆ ದುರಾದೃಷ್ಟವಷಾತ್ ಆ ಮಗು ಅಸುನೀಗಿದೆ.

ಹೌದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅರ್ಚನಾ ಅವರು ಎದೆಹಾಲುಣಿಸಿ ಕಾಪಾಡಿದ್ದ ಮಗು ಜೂನ್ 7ರಂದೇ ಸಾವನ್ನಪ್ಪಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಗುವು ಮೆದುಳಿನ ಸೋಂಕಿಗೆ ತುತ್ತಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್ ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

ಜೂನ್ 04ನೇ ತಾರೀಖಿನಂದು ಮಗುವು ಕಸದ ತೊಟ್ಟಿಯಲ್ಲಿ ಪತ್ತೆಯಾಗಿತ್ತು. ಅಳುತ್ತಿದ್ದ ಮಗುವನ್ನು ಠಾಣೆಗೆ ಹೊತ್ತುತಂದಿದ್ದ ಮಾತೃಹೃದಯಿ ಪೇದೆ ಅರ್ಚನಾ ಹಾಲುಣಿಸಿ ಬದುಕಿಸಿದ್ದರು. ನಂತರ ಮಗುವನ್ನು ವಿಲ್ಸನ್ ಗಾರ್ಡನ್‌ನ ಶಿಶುಮಂದಿರಕ್ಕೆ ಸೇರಿಸಲಾಗಿತ್ತು.

Infant died which rescued by lady police constable

ಸರ್ಕಾರಿ ಶಿಶುಮಂದಿರದಲ್ಲಿ ಅದರ ಆರೈಕೆ ನಡೆಯುತ್ತಿದ್ದೆ ಎಂಬ ಕಾರಣಕ್ಕೆ ಆಗತಾನೆ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಹೆಸರನ್ನೇ ಮಗುವಿಗೆ ಇಡಲಾಗಿತ್ತು. ಆದರೆ ಈಗ ಮಗು ಅಸುನೀಗಿದೆ. ಆಸ್ಥೆಯಿಂದ ಆರೈಕೆ ಮಾಡಿದ್ದ ವಿಲ್ಸನ್‌ಗಾರ್ಡನ್ ಠಾಣೆಯ ಪೇದೆ ಅರ್ಚನಾ ಹಾಗೂ ಠಾಣೆಯ ಸಿಬ್ಬಂದಿಗೆ ಅತೀವ ನೋವು ಕಾಡುತ್ತಿದೆ.

ಶಿಶು ದೊರೆತ ದಿನ ಅರ್ಚನಾ ಅವರು ಪೊಲಿಸ್ ಸಮವಸ್ತ್ರ ಧರಿಸಿ ಠಾಣೆಯಲ್ಲೇ ಹಾಲುಣಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ

ತ್ತು. ಅರ್ಚನಾ ಹಾಗೂ ಪೊಲೀಸ್ ಇಲಾಖೆಯ ಮಾನವೀಯತೆಗೆ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಸಿಎಂ ಕುಮಾರಸ್ವಾಮಿ ಕೂಡ ಪೇದೆ ಅರ್ಚನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದರು.

English summary
Infant died on June 7 which was rescued by lady police constable Archana. She rescued child from garbage tank and feed the child. But on June 7 child died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X