ಇಂದಿರಾನಗರ: ಓಪನ್ ಸ್ಟ್ರೀಟ್ ಉತ್ಸವ ಪ್ರಶ್ನಿಸಿ ಪಿಐಎಲ್

Posted By:
Subscribe to Oneindia Kannada

ಬೆಂಗಳೂರು, ಜನವರಿ 06: ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಓಪನ್ ಸ್ಟ್ರೀಟ್ ಉತ್ಸವ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಅವರು ಈ ಉತ್ಸವದ ವಿರುದ್ಧ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಇಂದಿರಾನಗರದಲ್ಲಿ ಜ.15ರಂದು ನಡೆಸಲು ಉದ್ದೇಶಿಸಿರುವ 'ಓಪನ್ ಸ್ಟ್ರೀಟ್ ಉತ್ಸವ' ಪ್ರಶ್ನಿಸಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. [ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹಬ್ಬದ ವಾತಾವರಣ]

Indiranagar residents Oppose Open Street Event

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾ.ಆರ್.ಬಿ. ಬೂದಿಹಾಳ್ ಅವರಿದ್ದ ಪೀಠ, ಈ ಸಂಬಂಧ ಬಿಬಿಎಂಪಿ ಆಯುಕ್ತರು ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್​ಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಜ.10ಕ್ಕೆ ವಿಚಾರಣೆ ಮುಂದೂಡಿದೆ.

ಜನವರಿ 15ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ ನಿಗದಿಯಾಗಿದೆ. ಪ್ರವಾಸೋದ್ಯಮ ಇಲಾಖೆ, ಬಿಬಿಎಂಪಿ ಹಾಗೂ ಶಾಸಕ ಹ್ಯಾರಿಸ್, ಸಚಿವ ಪ್ರಿಯಾಂಕ್ ಖರ್ಗೆ ಅವರು ಆಯೋಜನೆಯ ಹೊಣೆ ಹೊತ್ತಿದ್ದಾರೆ.[ಬಿಟಿಎಂ ಲೇಔಟ್‌ನಲ್ಲಿ ಶೀಘ್ರದಲ್ಲೇ ಓಪನ್ ಸ್ಟ್ರೀಟ್]

ಟ್ರಾಫಿಕ್ ಸಮಸ್ಯೆ: ಸದಾ ಸಂಚಾರ ದಟ್ಟಣೆ ಹೆಚ್ಚಿರುವ ಈ ರಸ್ತೆ ಹಳೇ ಮದ್ರಾಸು ರಸ್ತೆಯಿಂದ ಹಳೇ ವಿಮಾನ ನಿಲ್ದಾಣದವರೆಗೂ ಸಾಗುವ ರಸ್ತೆ ಇದಾಗಿದ್ದು, ಕೃಷ್ಣರಾಜಪುರ ಹಾಗೂ ವೈಟ್​ಫೀಲ್ಡ್ ನಿವಾಸಿಗಳು ಕೋರಮಂಗಲ ಹಾಗೂ ಎಂ.ಜಿ. ರಸ್ತೆ ತಲುಪಲು ಒಂದೇ ಮಾರ್ಗವಾಗಿದೆ. ಸ್ಥಳೀಯರು ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ದಿನಕರ್ ಅವರು ವಾದಿಸಿದ್ದಾರೆ.

ಈ ಉತ್ಸವದಿಂದ ಪಬ್ ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂದು ಐ ಚೇಂಜ್ ಇಂದಿರಾನಗರ ಸೇರಿದಂತೆ ಹಲವು ಸಂಘಟನೆಗಳು ಹೇಳಿವೆ. ಆದರೆ, ಈ ಉತ್ಸವದಲ್ಲಿ ಕರ್ನಾಟಕ ಸಂಗೀತ, ಸಂಕ್ರಾಂತಿ ಸಂಭ್ರಮಾಚರಣೆ ಇರಲಿದೆ, ಪಬ್ ಸಂಸ್ಕೃತಿಗೆ ಪೂರಕವಾಗಿಲ್ಲ ಎಂದು ಸಚಿವ ಪ್ರಿಯಾಂಖ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Residents association of Indiranagar have intensified their protest against Open Street Event scheduled on January 15, 2017. Retd Police officer C Dinakar has filed PIL in High court against the event.
Please Wait while comments are loading...