ಬೆಂಗಳೂರಿನ ರಸ್ತೆಗಿಳಿಯಲಿದೆ 'ಇಂದಿರಾ ಸಾರಿಗೆ' ಬಸ್

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 9 : ಬೆಂಗಳೂರು ನಗರದ ಆಯ್ದ ಪ್ರದೇಶಗಳಲ್ಲಿ ಇಂದಿರಾ ಸಾರಿಗೆ ಬಸ್ ಸೇವೆ ಆರಂಭವಾಗಲಿದೆ.ಬಿಎಂಟಿಸಿಯೇ ಇದರ ಉಸ್ತುವಾರಿ ನೋಡಿಕೊಳ್ಳಲಿದೆ.

ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆಯ್ದ ಪ್ರದೇಶಗಳಲ್ಲಿ ಇಂದಿರಾ ಬಸ್ ಸೇವೆ ಆರಂಭಿಸಲಾಗುತ್ತದೆ. ಈ ಬಸ್ಸುಗಳಲ್ಲಿ ಪ್ರಯಾಣ ದರ ಕಡಿಮೆ ಇರುತ್ತದೆ. ನವೆಂಬರ್ 19ರಂದು ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ನಡೆಯಲಿದ್ದು, ಅಂದೇ ಬಸ್ ಸೇವೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ವಿಶೇಷ ಕನ್ನಡಿಗ: ಬಿಎಂಟಿಸಿ ನಿರ್ವಾಹಕ ಚಂದ್ರೇಗೌಡ

 Indira Sarige bus service in Bengaluru city soon

ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಆಡಳಿತವಿದ್ದಾಗ ಬೆಂಗಳೂರು ನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ 'ಅಟಲ್ ಸಾರಿಗೆ'ಯನ್ನು ಆರಂಭಿಸಲಾಗಿತ್ತು. ನಗರದ ಕೆಲವು ಭಾಗಗಲ್ಲಿ ಮಾತ್ರ ಈ ಬಸ್ಸುಗಳು ಸಂಚಾರ ನಡೆಸುತ್ತಿದ್ದವು. ಪ್ರಯಾಣದರವೂ ಕಡಿಮೆ ಇತ್ತು.

ರಸ್ತೆಗಿಳಿಯಲಿದೆ ದೇಶದ ಮೊಟ್ಟಮೊದಲ ಎಲೆಕ್ಟ್ರಿಕ್ ಬಸ್

ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ 'ಇಂದಿರಾ ಸಾರಿಗೆ' ಸೇವೆ ಆರಂಭಿಸಲು ನಿರ್ಧರಿಸಿದೆ. ಬಸ್ ಸಂಚಾರ ನಡೆಸುವ ಮಾರ್ಗ, ದರ ನಿಗದಿ ಬಗ್ಗೆ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 6,400 ಬಸ್ಸುಗಳನ್ನು ಹೊಂದಿದೆ. ಪ್ರತಿನಿತ್ಯ ಸುಮಾರು 50 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಬಿಎಂಟಿಸಿ ಇಂದಿರಾ ಸಾರಿಗೆ ವ್ಯವಸ್ಥೆಯ ನಿರ್ವಹಣೆಯನ್ನು ನೋಡಿಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Transport minister H.M.Revanna announced Indira Sarige transport service for women and students in Bengaluru city. Bus will run in select parts of city with low fares. The service will be run by the Bangalore Metropolitan Transport Corporation (BMTC).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ