ಇಂದಿರಾ ಕ್ಯಾಂಟೀನ್ ಮಹಿಳಾ ಕ್ಯಾಷಿಯರ್ ಗೆ ಲೈಂಗಿಕ ಕಿರುಕುಳ

Posted By:
Subscribe to Oneindia Kannada

ಬೆಂಗಳೂರು, ಜನವರಿ 6: ಇಂದಿರಾ ಕ್ಯಾಂಟೀನ್ ನಲ್ಲಿ ಮಹಿಳಾ ಕ್ಯಾಷಿಯರ್ ಗೆ ಮೇಲಧಿಕಾರಿ ಲೈಂಗಿಕ ಕಿರುಕುಳ ನಡೆದಿರುವುದು ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೇತ್ರಾವತಿ ಎಂಬವರು ಮೇಲಾಧಿಕಾರಿ ಸತೀಶ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಬಿಬಿಎಂಪಿ 190ನೇ ವಾರ್ಡ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ನೇತ್ರಾವತಿ ಎನ್ನುವರು ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಮುಂದುವರೆಯಬೇಕಾದರೆ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಸತೀಶ್ ಒತ್ತಡ ಹೇರುತ್ತಿದ್ದಾನೆ.

Indira Canteen Woman cashier sexually harassed by senior official in Bengaluru

ರಾತ್ರಿ ಸಮಯದಲ್ಲಿ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದದಿದ್ದಲ್ಲಿ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ನೇತ್ರಾವತಿ ದೂರು ತಿಳಿಸಿದ್ದಾರೆ.

ದೂರು ದಾಖಲಾದ ಬಳಿಕ ಆರೋಪಿ ಸತೀಶ್ ನಾಪತ್ತೆಯಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indira Canteen employee sexually harassed by senior official. Woman cashier Netravati allegedly forced to get physical with officer. Accused Satish allegedly forced victim to sleep with him to retain the job. Victim files complaint against accused at Bandepalya Police Station, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ