ಇಂದಿರಾ ಕ್ಯಾಂಟೀನ್ ಜೊತೆ ಸೆಲ್ಫೀ ತಗೊಳ್ಳಿ, 1 ಲಕ್ಷ ಗೆಲ್ಲಿ!

Posted By: Gururaj
Subscribe to Oneindia Kannada

ಬೆಂಗಳೂರು, ಅ.10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 'ಇಂದಿರಾ ಕ್ಯಾಟೀನ್' ಜನಪ್ರಿಯತೆ ಹೆಚ್ಚಿಸಲು ಸ್ಪರ್ಧೆಯೊಂದನ್ನು ಆಯೋಜಿಸಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ಲಕ್ಷ ರೂ. ಬಹುಮಾನ ದೊರೆಯಲಿದೆ.

ಆ. 16ಕ್ಕೆ ಶುರುವಾಗುವ ಇಂದಿರಾ ಕ್ಯಾಂಟೀನ್, ಸಿಎಂ ವೀಕ್ಷಣೆ

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. 120 ವಾರ್ಡ್‌ನಲ್ಲಿ ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ.

Indira Canteen : Take a selfie and win Rs 1 lakh

ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದ್ದು, ಇದಕ್ಕಾಗಿ ಸ್ಪರ್ಧೆಯೊಂದನ್ನು ಆಯೋಜಿಸಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ಯಾಂಟೀನ್ ಜೊತೆ ಸೆಲ್ಫೀ ತೆಗೆದುಕೊಂಡು ಉತ್ತಮ ಶೀರ್ಷಿಕೆ ನೀಡಿಬೇಕು. ಉತ್ತಮ ಶೀರ್ಷಿಕೆಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

ಇಂದಿರಾ ಕ್ಯಾಂಟೀನ್‌ ಮಾರ್ಗ, ಮೆನು ತಿಳಿಸಲಿದೆ ಬಿಬಿಎಂಪಿಯ ಹೊಸ ಆ್ಯಪ್‌

ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಮಾಹಿತಿ ನೀಡುವ ಅಪ್ಲಿಕೇಶನ್‌ ಅನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದ್ದು, ಆಗಸ್ಟ್ 16ರಂದು ಅದು ಬಿಡುಗಡೆಗೊಳ್ಳಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಇಂದಿರಾ ಕ್ಯಾಂಟೀನ್ ಮುಂದೆ ನಿಂತು ಸೆಲ್ಫೀ ತೆಗೆದುಕೊಂಡು ಶೀರ್ಷಿಕೆ ಕೊಟ್ಟು ಪೋಟೋ ಅಪ್ ಲೋಡ್ ಮಾಡಬೇಕು.

ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ

Indira Canteen starts from August 15th | Menu details in the video | Oneindia Kannada

ಬಿಬಿಎಂಪಿ ಅಧಿಕಾರಿಗಳು ಉತ್ತಮ ಶೀರ್ಷಿಕೆ ನೀಡಿದವರನ್ನು ಆಯ್ಕೆ ಮಾಡಲಿದ್ದಾರೆ. ಯುವಕರಲ್ಲಿರುವ ಸೆಲ್ಫೀ ಕ್ರೇಜ್ ಅನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಜೊತೆಗೆ ಇಂದಿರಾ ಕ್ಯಾಂಟೀನ್ ಗೆ ಯುವಕರನ್ನು ಸೆಳೆಯಲು ಬಿಬಿಎಂಪಿ ಇಂತಹ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BBMP is organizing a special competition you can win Rs 1 lakh prize for taking a Selfie with Indira Canteen. You have to send selfie photo with an attractive tag line. The best tag line selfie will be awarded.
Please Wait while comments are loading...