ಇಂದಿರಾ ಕ್ಯಾಂಟೀನ್ ಯಶಸ್ಸಿನ ಸಂಭ್ರಮಕ್ಕೆ ಕಾಫಿಬುಕ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 19: ದೇಶ ಕಂಡ ಅತ್ಯಂತ ಪ್ರಭಾವಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ಸಿನ ಸಂಭ್ರಮವನ್ನು ಆಚರಿಸಲು ಕಾಫಿ ಬುಕ್ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರದಲ್ಲೇ ಈ ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ 246 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ

ಕರ್ನಾಟಕ ಸರ್ಕಾರ ಆರಂಭಿಸಿರುವ ಬಹು ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಈಗ ರಾಜ್ಯಾದ್ಯಂತ ವಿಸ್ತರಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಚಿರಂತನಾ ಮೀಡಿಯಾ ಸಲ್ಯೂಷನ್ಸ್ ಈ ಯಶಸ್ಸನ್ನು ದಾಖಲಿಸಿದ್ದು, ಒಂದು ಚಿತ್ರ ಸಂಪುಟವನ್ನು ಪ್ರಕಟಿಸುತ್ತಿದೆ.

ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಮಾರ್ಷಲ್!

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ 'ಇಂದಿರಾ ಕ್ಯಾಂಟೀನ್'. ಅತಿ ಕಡಿಮೆ ಅವಧಿಯಲ್ಲಿ ಬಹು ಜನಪ್ರಿಯವಾದ ಯೋಜನೆ.

ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?

ನಾಡಿನ ಬಡವರು, ಶ್ರಮಿಕರು, ಕಾರ್ಮಿಕರು, ದುರ್ಬಲರಿಗೆ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಒದಗಿಸುವ ಇಂದಿರಾ
ಕ್ಯಾಂಟೀನ್‍ಗಳು ನೈಜ ದಾಸೋಹ ಕೇಂದ್ರಗಳಾಗಿವೆ.

ನೈಜ ಫಲಾನುಭವಿಗಳ ಸಂಖ್ಯೆ ಹೆಚ್ಚಳ

ನೈಜ ಫಲಾನುಭವಿಗಳ ಸಂಖ್ಯೆ ಹೆಚ್ಚಳ

ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಹೆಸರಿನಲ್ಲಿಯೇ ಕ್ಯಾಂಟೀನ್ ಆರಂಭಿಸಿರುವುದು ವಿಶೇಷವಾಗಿದೆ. ಸಮಾಜದ ವಿವಿಧ ಸ್ತರಗಳ ಜನತೆಯನ್ನು ಆಕರ್ಷಿಸಿರುವ ಈ ಯೋಜನೆ ಈಗ ಕರ್ನಾಟಕದಾದ್ಯಂತ ಜಾರಿಗೆ ಬರುತ್ತಿದೆ. ಅದಕ್ಕೆ ಕಾರಣ ದಿನ ಕಳೆದಂತೆ ನೈಜ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿರುವುದು.

ಶ್ರೀಸಾಮಾನ್ಯನ ನೆರವಿಗೆ ಕ್ಯಾಂಟೀನ್

ಶ್ರೀಸಾಮಾನ್ಯನ ನೆರವಿಗೆ ಕ್ಯಾಂಟೀನ್

ಹೋಟೆಲ್ ಗಳಲ್ಲಿ ದರ್ಶಿನಿಗಳಲ್ಲಿ ಗಗನಮುಖಿಯಾಗಿರುವ ಬೆಲೆಗಳನ್ನು ಕಂಡು ತತ್ತರಿಸಿಹೋಗಿದ್ದ ಶ್ರೀಸಾಮಾನ್ಯ ತನ್ನ ಜೇಬಿಗೆ ಹೊರೆ ಮಾಡಿಕೊಳ್ಳದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ. ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನಿನ ನೈಜ ಫಲಾನುಭವಿಗಳ ನೈಜ ಚಿತ್ರಣ ಬಿಂಬಿಸುವ ಚಿತ್ರ ಸಂಪುಟ ‘ಅಭಯ ಹಸ್ತ' ನಿಮ್ಮ ಕೈಗಿಡುತ್ತಿದ್ದೇವೆ. ಇನ್ನಷ್ಟು ಇಂಥ ಸತ್ಕಾರ್ಯಗಳಿಗೆ ಸ್ಫೂರ್ತಿಯಾಗುವುದೇ ಈ ಚಿತ್ರ ಸಂಪುಟದ ಯಶಸ್ಸು.

ಮೊಬೈಲ್ ಕ್ಯಾಂಟೀನ್‌ಗಳ ಮೂಲಕ ವಿತರಣೆ

ಮೊಬೈಲ್ ಕ್ಯಾಂಟೀನ್‌ಗಳ ಮೂಲಕ ವಿತರಣೆ

ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಬೆಂಗಳೂರು ನಗರದ ಪ್ರತಿ ವಾರ್ಡ್‌ಗೆ 1 ಕ್ಯಾಂಟೀನ್ ಸ್ಥಾಪನೆಯಾಗಬೇಕಿತ್ತು. ಆದರೆ, ಕೆಲವು ವಾರ್ಡ್‌ಗಳಲ್ಲಿ ಕ್ಯಾಂಟೀನ್ ಸ್ಥಾಪನೆ ಮಾಡಲು ಜಾಗ ಸಿಕ್ಕಿಲ್ಲ. ನಗರದಲ್ಲಿ ಸುಮಾರು 22 ಕ್ಯಾಂಟೀನ್‌ಗಳು ಆರಂಭವಾಗಲಿವೆ. ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ಆಹಾರವನ್ನು ಮೊಬೈಲ್ ಕ್ಯಾಂಟೀನ್‌ಗಳ ಮೂಲಕ ವಿತರಣೆ ಮಾಡಲಾಗುತ್ತದೆ.

ಕ್ಯಾಂಟೀನ್ ಮಾಹಿತಿಗೆ ಅಪ್ಲಿಕೇಷನ್

ಕ್ಯಾಂಟೀನ್ ಮಾಹಿತಿಗೆ ಅಪ್ಲಿಕೇಷನ್

ಕ್ಯಾಂಟೀನ್ ಗಳಿಗೆ ರೇಟಿಂಗ್ ನೀಡಲೂ ಆ್ಯಪ್ ನಲ್ಲಿ ಅವಕಾಶವಿದೆ. ಜತೆಗೆ ಅಧಿಕಾರಿಗಳಿಗೆ ಕ್ಯಾಂಟೀನ್‌ಗೆ ಸರಬರಾಜು ಆದ ಆಹಾರ ಪದಾರ್ಥ, ಖರ್ಚಾದ ಉಪಾಹಾರ, ಊಟ, ಮಿಕ್ಕಿರುವ ಆಹಾರ ಪ್ರಮಾಣದ ಬಗ್ಗೆ ಈ ಆ್ಯಪ್‌ ನಿಂದಲೇ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indira Canteen is an ambitious project of Karnataka Government which has become immensely popular in a very short span of time. Chiranthana Media Solutions has documented this noble act in pictorial frames where one can get a rooted glimpse of actual beneficiaries relishing various dishes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ