ಡಿಸೆಂಬರ್‌ನಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳು ಆರಂಭ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 16 : ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಸ್ಥಳವಿಲ್ಲದ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಿದೆ. ಡಿಸೆಂಬರ್‌ನಲ್ಲಿ ನಗರದಲ್ಲಿ ಸುಮಾರು 22 ಕ್ಯಾಂಟೀನ್‌ಗಳು ಪ್ರಾರಂಭವಾಗಲಿವೆ.

ಇಂದಿರಾ ಕ್ಯಾಂಟೀನ್ ಇಲ್ಲದ ವಾರ್ಡ್‌ನಲ್ಲಿ ಮೊಬೈಲ್ ಕ್ಯಾಂಟೀನ್

ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಬೆಂಗಳೂರು ನಗರದ ಪ್ರತಿ ವಾರ್ಡ್‌ಗೆ 1 ಕ್ಯಾಂಟೀನ್ ಸ್ಥಾಪನೆಯಾಗಬೇಕಿತ್ತು. ಆದರೆ, ಕೆಲವು ವಾರ್ಡ್‌ಗಳಲ್ಲಿ ಕ್ಯಾಂಟೀನ್ ಸ್ಥಾಪನೆ ಮಾಡಲು ಜಾಗ ಸಿಕ್ಕಿಲ್ಲ.

Indira Canteen : Mobile canteens to open by December end

ಯಾವ ವಾರ್ಡ್‌ಗಳಲ್ಲಿ ಸ್ಥಳಾವಕಾಶದ ಕೊರತೆ ಇದೆಯೋ ಅಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಮೊಬೈಲ್ ಕ್ಯಾಂಟೀನ್‌ಗಳ ವಿನ್ಯಾಸ ಅಂತಿಮಗೊಳಿಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ನಗರದಲ್ಲಿ ಸುಮಾರು 22 ಕ್ಯಾಂಟೀನ್‌ಗಳು ಆರಂಭವಾಗಲಿವೆ. ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ಆಹಾರವನ್ನು ಮೊಬೈಲ್ ಕ್ಯಾಂಟೀನ್‌ಗಳ ಮೂಲಕ ವಿತರಣೆ ಮಾಡಲಾಗುತ್ತದೆ.

247 ಇಂದಿರಾ ಕ್ಯಾಂಟೀನ್ ಸ್ಥಾಪನೆ, ಯಾವ ನಗರಕ್ಕೆ ಎಷ್ಟು?

ಜಿಪಿಎಸ್ ಮೂಲಕ ಕ್ಯಾಂಟೀನ್‌ ಎಲ್ಲಿದೆ? ಎಂದು ನಿರ್ವಹಣೆ ನೋಡಿಕೊಳ್ಳಲಾಗುತ್ತದೆ. ಕ್ಯಾಂಟೀನ್ ಆರಂಭಕ್ಕೂ ಮೊದಲು ವಾಹನವನ್ನು ಎಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಮೊಬೈಲ್ ಕ್ಯಾಂಟೀನ್? : ಬನಶಂಕರಿ, ಕೋರಮಂಗಲ, ಗೋವಿಂದರಾಜ ನಗರ, ಬೊಮ್ಮನಹಳ್ಳಿ, ಆರ್.ಆರ್.ನಗರ, ಬಿಟಿಎಂ ಲೇಔಟ್, ಛಲವಾದಿಪಾಳ್ಯ, ಯಲಹಂಕ ನ್ಯೂ ಟೌನ್, ಜೆ.ಪಿ.ನಗರ ಮತ್ತು ಕೇಂಗೇರಿ ವಾರ್ಡ್‌ನಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bengaluru Mahanagara Palike (BBMP) is all set to introduce mobile canteens in Bengaluru city where there is no place to build Indira Canteen. 22 mobile canteens will open by the end of December.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ