ಏರ್ ಪೋರ್ಟ್ ನಲ್ಲಿ ಇಂದಿರಾ ಕ್ಯಾಂಟೀನ್: ಸಿಎಂಗೆ ಪ್ರತಾಪ್ ಸಿಂಹ ಮನವಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: 'ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟಿನ್ ತೆರೆಯಿರಿ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್ ಕುರಿತು ಟ್ವೀಟ್: ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ!

ಎಕನಾಮಿಕ್ ಕ್ಲಾಸ್ ನಲ್ಲಿ ಓಡಾಡುವ ಜನರಿಗೆ ಏರ್ ಪೋರ್ಟ್ ನಲ್ಲಿ ಸಿಗುವ ದುಬಾರಿ ಬೆಲೆಯ ತಿಂಡಿಗಳಿಗೆ ಹಣ ನೀಡುವುದು ಕಷ್ಟ. ಆದ್ದರಿಂದ ಏರ್ ಪೋರ್ಟ್ ನಲ್ಲಿಯೂ ಒಂದು ಇಂದಿರಾ ಕ್ಯಾಂಟೀನ್ ತೆರೆಯಿರಿ' ಎಂದು ಅವರು ಮಾಡಿರುವ ಟ್ವೀಟ್ ನ ಆರಂಭದಲ್ಲೇ 'serious note' ಎಂದು ಉಲ್ಲೇಖಿಸಿರುವುದರಿಂದ ಇದು ತಮಾಷೆಯಂತೂ ಅಲ್ಲ ಎಂದುಕೊಳ್ಳಬಹುದು. ಆದರೆ ಸಂಸದರ ಈ ಟ್ವೀಟ್ ಮತ್ತಷ್ಟು ವಿವಾದವನ್ನೇ ಸೃಷ್ಟಿಸುವ ಲಕ್ಷಣಗಳಂತೂ ನಿಚ್ಛಳವಾಗಿದೆ.

ಏರ್ ಪೋರ್ಟ್ ನಲ್ಲಿ ತಿಂಡಿ, ತಿನಿಸುಗಳು ತೀರಾ ದುಬಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕುರಿತು ಎಂದಿಗೂ ದೂರಿದ್ದೇ ಇದೆ. ಆದರೆ ಅದಕ್ಕಾಗಿ ಏರ್ ಪೋರ್ಟ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎನ್ನುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.

Indira canteen in Kempegowda international airport: MP Pratap Simha's tweet becomes controversial

ವಿಮಾನಯಾನ ಮಾಡುವವರು ಎಂದಮೇಲೆ ಒಂದೋ ಶ್ರೀಮಂತರು, ಇಲ್ಲವೇ ಮಧ್ಯಮ, ಮೇಲ್ಮಧ್ಯಮ ವರ್ಗದವರು. ಆದರೆ ಇಂದಿರಾ ಕ್ಯಾಂಟೀನ್ ತೆರೆದಿರುವುದು ಬಡವರಿಗೆ, ಕಡು ಬಡವರಿಗಾಗಿ. ಹೀಗಿರುವಾಗ ಏರ್ ಪೋರ್ಟ್ ನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವುದು ಹೇಗೆ ಸಾಧ್ಯ ಎಂಬುದು ಹಲವರ ಪ್ರಶ್ನೆ.

ಅಕಸ್ಮಾತ್ ಏರ್ ಪೋರ್ಟ್ ನಲ್ಲಿ ಇಂದಿರಾ ಕ್ಯಾಂಟೀನ್ ತೆರೆದರೆ ಅದು ಇಲ್ಲಿಗೆ ಬರುವ ಬಡ ಟ್ಯಾಕ್ಸಿ ಡ್ರೈವರ್ ಗಳಿಗೆ ಸಹಾಯವಾಗುತ್ತದಾದರೆ ಪರವಾಗಿಲ್ಲ ಎಂದೂ ಒಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಅವರ ಈ ಟ್ವೀಟ್ ಅನ್ನು 171 ಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದು, 62 ಜನ ಈ ಟ್ವೀಟ್ ಗೆ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Member of parliament for Mysuru-Kodagu constituency Pratap Simha's tweet to Karnataka chief minister Siddaramaiah becomes a matter of controversy now. In his tweet he quoted, "we need one Indira Canteen at Kempegowda international Airport. Food is unaffordable for economy class travellers"

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ