ವಿಪ್ರೋ ವಿರುದ್ಧ ಲಿಂಗ ತಾರತಮ್ಯ ಕೇಸ್ ಗೆದ್ದ ಮಹಿಳೆ!

Posted By:
Subscribe to Oneindia Kannada

ಬೆಂಗಳೂರು, ಮೇ 11: ಪ್ರಮುಖ ಐಟಿ ಸಂಸ್ಥೆ ವಿಪ್ರೋದ ಲಂಡನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮಹಿಳಾ ಉದ್ಯೋಗಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಶ್ರೇಯಾ ಯುಕಿಲ್ ಅವರು ಲೈಂಗಿಕ ನಿಂದನೆ, ಪಕ್ಷಪಾತ, ಸಂಬಳದಲ್ಲಿ ತಾರತಮ್ಯ ಆರೋಪ ಹೊರೆಸಿ ವಿಪ್ರೋ ಸಂಸ್ಥೆ ವಿರುದ್ಧ ಪರಿಹಾರ ರೂಪದಲ್ಲಿ 1 ಮಿಲಿಯನ್ ಪೌಂಡ್ ನೀಡುವಂತೆ ಆಗ್ರಹಿಸಿದ್ದರು.

40 ವರ್ಷ ವಯಸ್ಸಿನ ಶ್ರೇಯಾ ಅವರು ಉದ್ಯೋಗದಲ್ಲಿ ತಾರತಮ್ಯದಿಂದಾಗಿ ಉದ್ಯೋಗ ಕಳೆದುಕೊಳ್ಳಬೇಕಾಯಿತು. ಆಕೆಯ ಅಂದಿನ ಬಾಸ್ ಮುಖ್ಯ ಕಾರ್ಯನಿರ್ವಾಹಕ ಟಿಕೆ ಕುರಿಯನ್ ಅವರು ಸಂಚು ರೂಪಿಸಿದ್ದು ಸಾಬೀತಾಗಿದೆ.[ವಿಪ್ರೋದಿಂದ 1 ಮಿಲಿಯನ್ ಪೌಂಡ್ಸ್ ಆಗ್ರಹಿಸಿ ದೂರು]

ಬೆಂಗಳೂರು ಮೂಲದ ವಿಪ್ರೋ ಸಂಸ್ಥೆಯ ಯುಕೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ತನ್ನ ಬಾಸ್ ನಿಂದ ಉಂಟಾದ ಮಾನಸಿಕ ಹಿಂಸೆ, ಅಶ್ಲೀಲ ಮಾತುಗಳನ್ನು ಸಹಿಸಿಕೊಳ್ಳಲಾಗದೆ ದೂರು ನೀಡಿದ್ದರು. [ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ತಗ್ಗದ ಪ್ರಮಾಣ]

Indian techie wins gender discrimination case against Wipro London

ಭಾರತದ ಪುರಾಣದಲ್ಲಿ ಬರುವ ಮಾದಕ ನೃತ್ಯಗಾರ್ತಿಗೆ ನನ್ನನ್ನು ಹೋಲಿಸಿ ಮಾತನಾಡಿದ್ದಾರೆ. ನನ್ನ ಉಡುಪು, ನಡೆ, ನುಡಿ ಬಗ್ಗೆ ಅವರು ನೀಡುತ್ತಿದ್ದ ಪ್ರತಿಕ್ರಿಯೆ ಕಾಮದೃಷ್ಟಿಯಿಂದ ಕೂಡಿರುತ್ತಿತ್ತು. ಪರಪುರುಷನ ಜೊತೆ ಅನೈತಿಕ ಸಂಬಂಧಕ್ಕೆ ದೂಡಲು ಬೇಕಾದ ಎಲ್ಲಾ ತಂತ್ರಗಳು ನನ್ನ ಮೇಲೆ ಪ್ರಯೋಗಿಸಲ್ಪಟ್ಟಿದೆ ಎಂದು ನೊಂದ ಮಹಿಳೆ ಲಂಡನ್ನಿನ ಉದ್ಯಮಿಗಳ ನ್ಯಾಯಮಂಡಳಿ ಮುಂದೆ ಗೋಳು ತೋಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. [ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ಮಹಿಳೆಯರನ್ನು ಕೆಟ್ಟ ಸರಕುಗಳಂತೆ ಕಾಣುವ ಇಂಥವರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು.ಇಂಥದ್ದೆಲ್ಲ ನಡೆಯುತ್ತಿದ್ದರೂ ಸಂಸ್ಥೆ ಸುಮ್ಮನಿದೆ. ಪುರುಷ ಉದ್ಯೋಗಿಗಳಿಗಿಂತ ನಮಗೆ ಸಂಬಳ ಕಡಿಮೆ ಸಿಗುತ್ತಿತ್ತು. ಪುರುಷರಿಗೆ 1,50,000 ಪೌಂಡ್ಸ್ ಸಿಗುತ್ತಿದ್ದರೆ, ನಮಗೆ 75,000 ಪೌಂಡ್ ವಾರ್ಷಿಕವಾಗಿ ಸಿಗುತ್ತಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ. [ಸಂಬಳ ತಾರತಮ್ಯದ ಪ್ರಶ್ನೆ ಎತ್ತಿದ ನಟಿ ಐಂದ್ರಿತಾ ರೇ]

ಲಂಡನ್ನಿನ ವಿಪ್ರೋ ಕಚೇರಿಯ ಬ್ಯಾಕ್ ಆಫೀಸ್ ಕಚೇರಿಯಲ್ಲಿ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕಿಯಾಗಿ ಶ್ರೇಯಾ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿಯ ಹಿರಿಯ ಉದ್ಯೋಗಿ ಮನೋಜ್ ಪೂಂಜ(54) ಜತೆ ಅಫೇರ್ ಇಟ್ಟುಕೊಳ್ಳುವಂತೆ ಕೂಡಾ ಆಕೆಯನ್ನು ಬಲವಂತ ಪಡಿಸಲಾಗುತ್ತಿತ್ತು ಎಂಬ ದೂರು ಕೇಳಿ ಬಂದಿತ್ತು. 2015ರ ಅಕ್ಟೋಬರ್ ನಲ್ಲಿ ವಿಪ್ರೋ ವಿರುದ್ಧ ದೂರು ದಾಖಲಿಸಿದ್ದ ಶ್ರೇಯಾಗೆ ಕೊನೆಗೂ ಜಯ ಸಿಕ್ಕಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shreya Ukil, a 40-year-old Indian woman who was formerly a techie at the Wipro office in London, has won a landmark lawsuit in a British court against the IT major for sacking her on grounds of gender discrimination, unequal pay and victimisation
Please Wait while comments are loading...