ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಕ್ತರ ಅನುಕೂಲಕ್ಕಾಗಿ ನಾಳೆ ತುಮಕೂರಿಗೆ ವಿಶೇಷ ರೈಲು

|
Google Oneindia Kannada News

ಬೆಂಗಳೂರು, ಜನವರಿ 21: ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ಬೆಂಗಳೂರಿನ ಯಶವಂತಪುರದಿಂದ ನಾಲ್ಕು ರೈಲುಗಳು ತುಮಕೂರಿಗೆ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಸಿದ್ದಗಂಗಾ ಶ್ರೀ ಲಿಂಗೈಕ್ಯ : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಮಂಗಳವಾರ ರಜಾ ಘೋಷಣೆಸಿದ್ದಗಂಗಾ ಶ್ರೀ ಲಿಂಗೈಕ್ಯ : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಮಂಗಳವಾರ ರಜಾ ಘೋಷಣೆ

ಸಾರ್ವಜನಿಕರು ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಮಧ್ಯಾಹ್ನ 3 ಗಂಟೆಯವರೆಗೂ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

Indian Railways special trains between Yashwanthpur Tumakuru siddaganga mutt

ಹೀಗಾಗಿ ಮಠಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಯಶವಂತಪುರದಿಂದ ತುಮಕೂರಿಗೆ ಬೆಳಿಗ್ಗೆ 7.30, 9, ಮಧ್ಯಾಹ್ನ 12 ಮತ್ತು 1.30ಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ.

ಹಾಗೆಯೇ ತುಮಕೂರಿನಿಂದ ಈ ರೈಲುಗಳು ಮರಳಿ ಯಶವಂತಪುರಕ್ಕೆ ಬೆಳಿಗ್ಗೆ 9.40, 11.10, ಮಧ್ಯಾಹ್ನ 2.45 ಸಂಜೆ 4.15 ಗಂಟೆಗೆ ಸಂಚರಿಸಲಿವೆ.

ಅನ್ನ, ಶಿಕ್ಷಣ ಅಂದರೆ ಶಿವಕುಮಾರಸ್ವಾಮಿಗಳಲ್ಲದೆ ಇನ್ಯಾರ ನೆನಪು? ಅನ್ನ, ಶಿಕ್ಷಣ ಅಂದರೆ ಶಿವಕುಮಾರಸ್ವಾಮಿಗಳಲ್ಲದೆ ಇನ್ಯಾರ ನೆನಪು?

ವಿಶೇಷ ರೈಲುಗಳ ಮೂಲಕ ತುಮಕೂರು ರೈಲು ನಿಲ್ದಾಣಕ್ಕೆ ತಲುಪುವ ಸಾರ್ವಜನಿಕರು ಅಲ್ಲಿಂದ ಮಠಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ತುಮಕೂರಿನ ರೈಲು ನಿಲ್ದಾಣದಿಂದ ರಿಂಗ್ ರಸ್ತೆಯ ಮೂಲಕ ಬಸ್‌ಗಳು ಮಠಕ್ಕೆ ತೆರಳಲಿವೆ.

ತುಮಕೂರಿನಿಂದ ಎಪಿಎಂಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಜೂನಿಯರ್ ಕಾಲೇಜಿನಿಂದ ಸಿದ್ದಗಂಗಾ ಮಠಕ್ಕೆ ನೂರಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Indian Railways has arranged special trains between Yashwanthpur and Tumakuru to provide transport facilities for the devotees of Siddaganga Mutt to give last respect to Shivakumara swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X