ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೂಲದ ವಿಜ್ಞಾನಿಗೆ ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಭಾರತೀಯ ಮೂಲದ ವಿಜ್ಞಾನಿ ಸುಬಿರ್ ಸಚ್ದೇವ್ ಅವರಿಗೆ ದಿ ಇಂಟರ್ನಾಶ್ನಲ್ ಸೆಂಟರ್ ಫಾರ್ ಥಿಯರೆಟಿಕಲ್ ಫಿಸಿಕ್ಸ್ (ಐಸಿಟಿಪಿ) ಕೊಡಮಾಡುವ ಪಾಲ್ ಡೈರಾಕ್ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಸಚ್ದೇವ್ ಅವರು ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಮಾಡಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎಂಬುದು ಕನ್ನಡಿಗರು ಹೆಮ್ಮೆ ಪಡುವ ವಿಷಯ.

ಭಾರತ ಮೂಲದ ಅಕ್ಷಯ್‌ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವಭಾರತ ಮೂಲದ ಅಕ್ಷಯ್‌ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವ

ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಸಚ್ದೇವ್ ಅವರು ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬ್ರಿಟಿಷ್ ವಿಜ್ಞಾನಿ ಪಾಲ್ ಅಡ್ರೇನ್ ಮೌರಿಸ್ ಡೈರಾಕ್ ಅವರು ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯನ್ನು ಭೌತಶಾಸ್ತ್ರ ಲೋಕಕ್ಕೆ ಕೊಡುಗೆ ನೀಡಿದ ವಿಜ್ಞಾನಿಗಳಿಗೆ ನೀಡಲಾಗುತ್ತದೆ.

Indian born scientist bags Dirac Medal in US

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಓದು ಮುಗಿಸಿದ್ದ ಸಚ್ದೇವ್ ಅವರು ನಂತರ ದೆಹಲಿಯ ಐಐಟಿಯಲ್ಲಿಯೂ ಓದಿದರು. 1984 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ ಅವರು, ಇಲ್ಲಿಯೇ ಪಿಎಚ್ ಡಿ ಪದವಿ ಪಡೆದರು.

2014 ರಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿಯಿಂದ ಲಾರ್ಸ್ ಒನ್ಸಗಾರ್ ಪ್ರಶಸ್ತಿ ಪಡೆದ ಸಚ್ದೇವ್ ಈ ಭಾರಿಯ ಪಾಲ್ ಡೈರಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

English summary
Indian born scientist, who had done his schooling in Bengaluru, Subir Sachdev wins prestigious Dirac award for his contribution in the field of physics. The International center theoretical Physics announces his name for the award. He is a professor at Harvard University America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X