ಜಕ್ಕೂರಿನಲ್ಲಿ ಇಂಡಿಯಾ ಸ್ಪೀಡ್ ವೀಕ್ 2017

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07 : ಬೈಕ್ ಮತ್ತು ಕಾರ್ ರೇಸ್‌ಗಳ ಬಗ್ಗೆ ವಿಪರೀತ ಮೋಹ ಇರಿಸಿಕೊಂಡಿರುವವರ ಸಂಖ್ಯೆಗೇನೂ ಕೊರತೆ ಇಲ್ಲ. ಇವುಗಳ ರೋಚಕತೆ ಅಂತಹುದು. ಬೈಕನ್ನು ಚಮತ್ಕಾರಿಕವಾಗಿ ಓಡಿಸುವ ಕೌಶಲ್ಯ, ಅತಿವೇಗವಾಗಿ ಕಾರು ಚಲಾಯಿಸುವ ಚಾಲಕನ ಮೋಡಿಯನ್ನು ಈ ರೇಸ್‌ನಲ್ಲಿ ಕಂಡು ಪುಳಕಿತರಾಗಬಹುದು.

ರುದ್ರ ಮೋಟಾರ್ ಸಂಸ್ಥೆ ಈ ಅವಕಾಶ ಮಾಡಿಕೊಟ್ಟಿದ್ದು ಬೆಂಗಳೂರು ಹೊರವಲಯದಲ್ಲಿರುವ ಜಕ್ಕೂರಿನಲ್ಲಿರು ಬೆಂಗಳೂರು ಜಕ್ಕೂರು ಏರೋಡ್ರಮ್ ನಲ್ಲಿ ಇಂಡಿಯಾ ಸ್ಪೀಡ್ ವೀಕ್ 2017 ಮೋಟಾರ್ ಬೈಕ್ ಹಾಗೂ ಕಾರ್ ರೇಸ್ ನ್ನು ಆಯೋಜಿಸಿದೆ.

India speed week 2017 in Jakkuru

ಇದು ಡಿಸೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇದರ ಮೊದಲ ಸುತ್ತು ಅಕ್ಟೋಬರ್ 27 ರಿಂದ 29 ರವರೆಗೆ ನಡೆದಿದ್ದು ಇದೀಗ ಇದು ಎರಡನೇ ಸುತ್ತು.

ಈ ಕ್ರೇಜಿ ಬೈಕ್ಸ್ ರೇಸ್ ಬೆಂಗಳೂರಿನ ಮೋಟಾರ್ ರೇಸ್ ಪ್ರಿಯರಿಗೆ ರೋಚಕ ಅನುಭವ ನೀಡಲಿದೆ. 150ಕ್ಕೂ ಅಧಿಕ ಸಾಹಸಿಗಳು ತಮ್ಮ ಚಾಲನಾ ಕೌಶಲ್ಯ ಮೆರೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India speed week 2017 in Jakkuru. It is the biggest motor event of India. discover the numerous range of racing cars and sports activities. reloaded with entertainment and attended by renowned personalities and bollywood celeb visits.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ