ಆಸ್ಟ್ರೇಲಿಯಾದ ಫೈಬರ್ ಉಡುಪಿನಲ್ಲಿ ಮಿಂಚಿದ ನಟಿ ರೆಜಿನಾ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07 :ದೇಶದ ಖ್ಯಾತ ಫ್ಯಾಷನ್ ಡಿಸೈನರ್ ಧ್ರುವ್ ಕಪೂರ್ ಅವರು ಆಸ್ಟ್ರೇಲಿಯಾದ ನೈಸರ್ಗಿಕ ಫೈಬರ್ ಉತ್ಪನ್ನಗಳಿಂದ ವಿನ್ಯಾಸಗೊಳಿಸಿದ ಉಡುಪುಗಳನ್ನು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಫ್ಯಾಷನ್ ಫೋರಂನಲ್ಲಿ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಮೆರಿನೋ ವೂಲ್ ನ ಬ್ರಾಂಡ್‍ಗಳಾದ ಬ್ಲ್ಯಾಕ್‍ ಬೆರ್ರಿ, ಆರೋದ ಉಡುಪುಗಳನ್ನು ಕಪೂರ್ ವಿನ್ಯಾಸಗೊಳಿಸಿದ್ದರು.

ರೆಜಿನಾ ಕೆಸ್ಸಾಂಡ್ರಾ ಮತ್ತು ಭಾರತೀಯ ವೂಲ್ ಅಂಬಾಸಿಡರ್ ಶ್ರವಣ್ ರೆಡ್ಡಿ ಅವರು ಈ ಧ್ರುವ್ ಕಪೂರ್ ಅವರು ಸಿದ್ಧಪಡಿಸಿದ ಉಡುಪುಗಳನ್ನು ಧರಿಸಿ ಬೆಕ್ಕಿನ ನಡಿಗೆ ಇಟ್ಟು ಪ್ರೇಕ್ಷಕರ ಮನಗೆದ್ದರು.

ಕ್ರೀಡಾ ಕ್ಷೇತ್ರ ಮತ್ತು ಫಾರ್ಮಲ್ ವೇರ್ ವಿಭಾಗದಲ್ಲಿ ಧರಿಸಲು ಯೋಗ್ಯವಾದ ಉಡುಪುಗಳ ಬಳಕೆಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಧೃವ್ ಕಪೂರ್ ಅವರು ವಿನ್ಯಾಸಗೊಳಿಸಿದ್ದರು. ಪ್ರಮುಖವಾಗಿ ಇವರು ಮಲ್ಟಿಪಲ್ ಜನರಸ್, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದ್ದರು.

ದೇಶದ ಖ್ಯಾತ ಫ್ಯಾಷನ್ ಡಿಸೈನರ್ ಧ್ರುವ್ ಕಪೂರ್

ದೇಶದ ಖ್ಯಾತ ಫ್ಯಾಷನ್ ಡಿಸೈನರ್ ಧ್ರುವ್ ಕಪೂರ್

ದೇಶದ ಖ್ಯಾತ ಫ್ಯಾಷನ್ ಡಿಸೈನರ್ ಧ್ರುವ್ ಕಪೂರ್ ಅವರು ಆಸ್ಟ್ರೇಲಿಯಾದ ನೈಸರ್ಗಿಕ ಫೈಬರ್ ಉತ್ಪನ್ನಗಳಿಂದ ವಿನ್ಯಾಸಗೊಳಿಸಿದ ಉಡುಪುಗಳನ್ನು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಫ್ಯಾಷನ್ ಫೋರಂನಲ್ಲಿ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಮೆರಿನೋ ವೂಲ್ ನ ಬ್ರಾಂಡ್‍ಗಳಾದ ಬ್ಲ್ಯಾಕ್‍ಬೆರ್ರಿ, ಆರೋದ ಉಡುಪುಗಳನ್ನು ಕಪೂರ್ ವಿನ್ಯಾಸಗೊಳಿಸಿದ್ದರು.

ಕ್ರೀಡಾ ಕ್ಷೇತ್ರ ಮತ್ತು ಫಾರ್ಮಲ್ ವೇರ್ ವಿಭಾಗದಲ್ಲಿ ಧರಿಸಲು ಯೋಗ್ಯವಾದ ಉಡುಪುಗಳ ಬಳಕೆಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಧ್ರುವ್ ಕಪೂರ್ ಅವರು ವಿನ್ಯಾಸಗೊಳಿಸಿದ್ದರು. ಪ್ರಮುಖವಾಗಿ ಇವರು ಮಲ್ಟಿಪಲ್ ಜನರಸ್, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದ್ದರು.

ಬುಡಕಟ್ಟು ಜನಾಂಗದ ಉಡುಪುಗಳ ಮಿಶ್ರಣ

ಬುಡಕಟ್ಟು ಜನಾಂಗದ ಉಡುಪುಗಳ ಮಿಶ್ರಣ

ಈ ವಿನ್ಯಾಸಗಾರರ ಸಂಗ್ರಹದಲ್ಲಿ ಚತುರ ರೀತಿಯ ಆಫ್ರಿಕಾದ ಬುಡಕಟ್ಟು ಜನಾಂಗದ ಉಡುಪುಗಳ ಮಿಶ್ರಣವಿತ್ತು. ಈ ಉಡುಪನ್ನು ಜಪಾನ್‍ನ ಗೆಯಶಾ ಅವರು ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಇಲ್ಲಿನ ಪ್ರತಿಯೊಂದು ವಿನ್ಯಾಸಗಳು ಡಿಐವೈ ಪರಿಕಲ್ಪನೆಯನ್ನು ಇಟ್ಟುಕೊಂಡು ಉಡುಪುಗಳನ್ನು ಸಿದ್ಧಪಡಿಸಲಾಗಿತ್ತು. ಈ ಮೂಲಕ ಅತ್ಯದ್ಭುತವಾದ ರೀತಿಯಲ್ಲಿ ಈ ಧಿರಿಸುಗಳು ಸ್ಟೈಲ್ ಮತ್ತು ಫ್ಯಾಷನ್ ಲೋಕದ ಆಕರ್ಷಣೆ ಎನಿಸಿದವು. ಅತ್ಯುತ್ತಮ ಗುಣಮಟ್ಟದ ಮೆರಿನೋ ವೂಲ್‍ನಿಂದ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿದ್ದ ಈ ಉಡುಪುಗಳಿಗೆ ಜೋಡಿಸಿದ್ದ ಹರಳುಗಳು ಉಡುಪಿನ ಮೆರಗನ್ನು ಹೆಚ್ಚಿಸಿದವು.

ಆಧುನಿಕ ಶೈಲಿಯಲ್ಲಿ ಮೆರಿನೋ ವೂಲ್

ಆಧುನಿಕ ಶೈಲಿಯಲ್ಲಿ ಮೆರಿನೋ ವೂಲ್

ಭಾರತೀಯ ವೂಲ್ ಅಂಬಾಸಿಡರ್ ಮತ್ತು ನಟ ಶ್ರವಣ್ ರೆಡ್ಡಿ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, 'ನನ್ನ ಅತ್ಯಂತ ಮೆಚ್ಚಿನ ವಿನ್ಯಾಸಗಾರರಲ್ಲಿ ಒಬ್ಬರಾಗಿರುವ ಧ್ರುವ್ ಕಪೂರ್ ಅವರು ವಿನ್ಯಾಸಗೊಳಿಸಿದ ಉಡುಪನ್ನು ಧರಿಸಿ ರ್ಯಾಂಪ್‍ನಲ್ಲಿ ಹೆಜ್ಜೆ ಹಾಕುವುದೇ ನನಗೆ ಅತ್ಯಂತ ಸಂತಸದ ಕ್ಷಣವಾಗಿದೆ. ನಾನು ಧ್ರುವ್ ಅವರ ವಿನ್ಯಾಸದ ಚಾಕಚಕ್ಯತೆಯ ಅಭಿಮಾನಿಯಾಗಿದ್ದೇನೆ. ವಿಶೇಷವಾಗಿ ಅವರು ಆಧುನಿಕ ಶೈಲಿಯಲ್ಲಿ ಮೆರಿನೋ ವೂಲ್ ಅನ್ನು ವಿನ್ಯಾಸಗೊಳಿಸುತ್ತಾರೆ. ಅದು ನನಗೆ ಬಹು ಇಷ್ಟವಾದ ವಿನ್ಯಾಸವಾಗಿದೆ. ಹೀಗಾಗಿ ಧ್ರುವ್ ಅವರು ವಿನ್ಯಾಸಗೊಳಿಸಿದ ಎಲ್ಲಾ ಸಂಗ್ರಹಗಳು ನನಗೆ ಅತ್ಯಂತ ಮೆಚ್ಚುಗೆಯ ವಿನ್ಯಾಸಗಳಾಗಿವೆ.' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧ್ರುವ್ ಕಪೂರ್ ಅವರು ಮಾತನಾಡಿ

ಧ್ರುವ್ ಕಪೂರ್ ಅವರು ಮಾತನಾಡಿ

ಸಿದ್ಧ ಉಡುಪುಗಳ ಖ್ಯಾತ ಡಿಸೈನರ್ ಆಗಿರುವ ಧ್ರುವ್ ಕಪೂರ್ ಅವರು ಮಾತನಾಡಿ, "ಮಲ್ಟಿಪಲ್ ಜನರಸ್, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ವಿನ್ಯಾಸಗೊಳಿಸಿ ಪ್ರದರ್ಶನ ಮಾಡುತ್ತಿರುವುದು ನನಗೆ ಅತೀವ ಸಂತಸವೆನಿಸುತ್ತಿದೆ. ಫೈಬರ್ ನೊಂದಿಗೆ ಕಲೆ, ವಿನ್ಯಾಸ ಮಾಡುವುದು ಅತ್ಯದ್ಭುತವಾದ ಅನುಭವವಾಗಿದೆ. ಏಕೆಂದರೆ ಇದು ಇತರೆ ಬಟ್ಟೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಬ್ಲೆಂಡ್ ಮಾಡುತ್ತದೆ ಮತ್ತು ಪ್ರತಿ ಗಾರ್ಮೆಂಟ್‍ಗೆ ಒಂದು ಹೊಸ ಹೊಳಪು ನೀಡುತ್ತದೆ'' ಎಂದರು.

ನಟಿ ರೆಗೀನ ಕೆಸ್ಸಂಡ್ರಾ ಅವರು ಮಾತನಾಡಿ, "ಬೆಂಗಳೂರಿನಲ್ಲಿ ಇಂಡಿಯಾ ಫ್ಯಾಷನ್ ಫೋರಂ 2018 ರಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಅದೇರೀತಿ ಖ್ಯಾತ ಡಿಸೈನರ್ ಧ್ರುವ್ ಕಪೂರ್ ಅವರೊಂದಿಗೆ ಹೆಜ್ಜೆ ಹಾಕುವುದು ಅಮೂಲ್ಯವಾದ ಕ್ಷಣವಾಗಿದೆ'' ಎಂದು ಬಣ್ಣಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Fashion Forum : Actress Regina Cassandra seen in Dhruv Kapoor designed Merino wool attire show held at Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ