ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಜಿನಿಯರ್ಸ್ ಡೇ: ಸರ್ ಎಂವಿ ಕೊಡುಗೆ ಸ್ಮರಿಸಿದ ಟ್ವಿಟ್ಟರ್ ಲೋಕ

By Mahesh
|
Google Oneindia Kannada News

ಬೆಂಗಳೂರು, ಸೆ. 15: ಭಾರತದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಾತಃಸ್ಮರಣೀಯರಾದ ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಸೆಪ್ಟೆಂಬರ್ 15ರಂದು ವಿಶೇಷವಾಗಿ ನೆನಪಿಸಿಕೊಳ್ಳಲಾಗುತ್ತಿದೆ. ಸರ್ ಎಂವಿ ಅವರು ಸಲ್ಲಿಸಿರುವ ಅಪಾರ ಕೊಡುಗೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.

ಇಂದು ಭಾರತದ ಟ್ವಿಟ್ಟರ್ ಟ್ರೆಂಡಿಂಗ್ ಪಟ್ಟಿಯಲ್ಲಿ #EngineersDay ಟಾಪ್ ಟ್ರೆಂಡಿಂಗ್ ನಲ್ಲಿದೆ. ದೇಶದೆಲ್ಲೆಡೆಯಿಂದ ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸಾರ್ವಜನಿಕರು ಸ್ಮರಿಸುತ್ತಿದ್ದಾರೆ. ವಿಶೇಷವೆಂದರೆ ನೇಪಾಳ ಸೇರಿದಂತೆ ಕೆಲ ಇತರೆ ರಾಷ್ಟ್ರಗಳಲ್ಲೂ ಈ ಟ್ಯಾಗ್ ಬಳಸಿ ಇಂಜಿನಿಯರ್ಸ್ ಗಳನ್ನು ಹೊಗಳಲಾಗಿದೆ.

ನದಿ ನೀರು ಹಂಚಿಕೆ ಸಮಸ್ಯೆ ಬಗ್ಗೆ ಮುಂಚಿತವಾಗಿ ಯೋಚನೆ ಮಾಡಿದ್ದ ಸರ್ ಎಂವಿ ಅವರು ಭಾರತದ ನದಿಗಳನ್ನು ಜೋಡಿಸುವ ಯೋಜನೆಯನ್ನು ರೂಪಿಸಿ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರಿಗೆ ನೀಡಿದ್ದರು.

ಸರ್ ಎಂವಿ ಅವರ ಯೋಜನೆಗೆ ನೆಹರೂ ಅವರು ಒಪ್ಪಿಗೆ ನೀಡಿರಲಿಲ್ಲ ಎಂಬ ಸುದ್ದಿಯೂ ಇದೆ. ಮುಂಬೈ ಮಹಾನಗರಿಯಲ್ಲಿ ಮಹಾಮಳೆ ಸುರಿದರೂ ನೀರು ಇಂಗುವ ವ್ಯವಸ್ಥೆಯನ್ನು 1884ರಲ್ಲೇ ಸರ್ ಎಂ. ವಿಶ್ವೇಶ್ವರಯ್ಯ ಅವರು ರೂಪಿಸಿದ್ದರು. ಸರ್ ಎಂವಿ ಅವರ ಸಾಧನೆಯನ್ನು ಸ್ಮರಿಸುತ್ತಾ ಬಂದಿರುವ ಟ್ವೀಟ್ ಗಳು ಇಲ್ಲಿವೆ...

ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಸ್ ಪಾತ್ರ

ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಸ್ ಪಾತ್ರ

ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಸ್ ಪಾತ್ರ ಅಧಿಕ, ಎಲ್ಲಾ ಇಂಜಿನಿಯರ್ಸ್ ಗೆ ಶುಭಹಾರೈಕೆ ಎಂದು ಟ್ವಿಟ್ಟರ್ ನಲ್ಲಿ ಇಂಜಿನಿಯರ್ಸ್ ಗಳ ಪಾತ್ರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಸರ್ ಎಂವಿ ಅವರ ಕೊಡುಗೆ ಬರೀ ಕರ್ನಾಟಕಕ್ಕೆ ಸೀಮಿತವಾಗಿಲ್ಲ

ಸರ್ ಎಂ ವಿಶ್ವೇಶ್ವರಯ್ಯ ಅವರ ಕೊಡುಗೆ ಬರೀ ಕರ್ನಾಟಕಕ್ಕೆ ಸೀಮಿತವಾಗಿರಲಿಲ್ಲ. ಈ ಪಟ್ಟಿಯಲ್ಲಿರುವ ಎಲ್ಲಾ ನಗರಗಳ ಜಲ ಸಂಪನ್ಮೂಲ, ಒಳಚರಂಡಿ ವ್ಯವಸ್ಥೆಗೆ ಸರ್ ಎಂವಿ ಕೊಡುಗೆ ಇದೆ.

ಎಲ್ಲಾ ಇಂಜಿನಿಯರ್ಸ್ ಗಳಿಗೆ ಹ್ಯಾಪಿ ಡೇ

ದೇಶದ ಎಲ್ಲಾ ಇಂಜಿನಿಯರ್ಸ್ ಗಳಿಗೆ ಹ್ಯಾಪಿ ಇಂಜಿನಿಯರ್ಸ್ ಡೇ ಎಂದು ಮಾಹಿತಿ ಜೊತೆಗೆ ಶುಭ ಹಾರೈಕೆ.

ಇಂಜಿನಿಯರ್ಸ್ ಗಳ ಕುತೂಹಲದಿಂದ ಬದುಕು ಸುಂದರ

ಇಂಜಿನಿಯರ್ಸ್ ಗಳ ಕುತೂಹಲದಿಂದ ಬದುಕು ಸುಂದರವಾಗಿದೆ, ಅವರ ಜ್ಞಾನ ದೇಶದ ಅಭ್ಯುದಯಕ್ಕೆ ಬುನಾದಿ ಹಾಕಿಕೊಟ್ಟಿದೆ.

English summary
India is celebrating Engineers Day on 15 September every year as a remarkable tribute to the greatest Indian Engineer Bharat Ratna M. Visvesvaraya.Sir M Vishveshwaraiah a notable Indian engineer, scholar, statesman and the Diwan of Mysore during 1912 to 1918. Here are the twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X