ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಮಗಳು ವಿಡಿಯೋ ಯೂಟ್ಯೂಬಿನಲ್ಲಿ 'ಹಿಟ್'

By Mahesh
|
Google Oneindia Kannada News

ನವದೆಹಲಿ, ಮಾ.9: ದೆಹಲಿಯಲ್ಲಿ ನಡೆದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಕುರಿತಂತೆ ಬ್ರಿಟನ್ ಮೂಲದ ಲೆಸ್ಲೀ ಉಡ್ವಿನ್ ಅವರು ಸಾಕ್ಷ್ಯಚಿತ್ರ ನಿರ್ಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಡಿಯೋ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಅದರೆ, ಆನ್ ಲೈನ್ ವಿಡಿಯೋ ಶೇರಿಂಗ್ ಜಾಲತಾಣಗಳಲ್ಲಿ ಈ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಭಾರತದಲ್ಲಿ ವಿಡಿಯೋಕ್ಕೆ ನಿಷೇಧ ಹೇರಿರುವುದು ಕಳಕಳಿಯಿಂದಲೋ ಅಥವಾ ಸೆನ್ಸಾರ್ ಶಿಪ್ ನಿಯಮಗಳಿಂದಲೋ ಗೊತ್ತಿಲ್ಲ. ಅದರೆ, ಭಾರತದ ಕ್ರಮದ ವಿರುದ್ಧ ಲೆಸ್ಲೀ ಕಿಡಿ ಕಾರಿದ್ದಾರೆ.

ಡಿ.16, 2012ರಂದು 23 ವರ್ಷ ವಯಸ್ಸಿನ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕುರಿತಂತೆ ತಯಾರಾಗಿರುವ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿಯಲ್ಲಿ ಆರೋಪಿ ಮುಕೇಶ್ ಸಿಂಗ್ ನೀಡಿರುವ ಹೇಳಿಕೆ, ವಕೀಲರು ಆಡಿರುವ ಮಾತುಗಳು ಚರ್ಚಾಸ್ಪದವಾಗಿದೆ.

BBC India’s Daughter a hit on YouTube

ನಿಷೇಧ ಎಲ್ಲಿ?: ನಿಷೇಧಗೊಂಡ ಮೇಲೂ ವಿಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಯುಟ್ಯೂಬ್ ನಿಂದ ವಿಡಿಯೋ ತೆಗೆಯುವಂತೆ ಬಿಬಿಸಿ ಮನವಿ ಸಲ್ಲಿಸಿರುವ ಸುದ್ದಿ ಸಿಕ್ಕಿದೆ. ಅದರೆ, ಸದ್ಯಕ್ಕೆ ಭಾರತದಲ್ಲಿ ವಿಡಿಯೋ ಪ್ರಸಾರ ಸಾಧ್ಯವಿಲ್ಲ. ಯುಟ್ಯೂಬಿನಿಂದ ವಿಡಿಯೋ ಪ್ರಸಾರ ಸ್ಥಗಿತಗೊಂಡಿದೆ. ಭಾರತ ಹೊರತುಪಡಿಸಿ ಇನ್ನಿತರ ದೇಶಗಳಲ್ಲಿ ವಿಡಿಯೋ ಪ್ರಸಾರಕ್ಕೆ ಬಿಬಿಸಿ ಸಿದ್ದವಾಗಿರುವ ಸುದ್ದಿಯೂ ಇದೆ.

ಇದಕ್ಕೂ ಮೊದಲು ಯೂಟ್ಯೂಬಿನಲ್ಲೇ ಇಂಡಿಯಾಸ್ ಡಾಟರ್ ವಿಡಿಯೋನ ಎರಡು ಆವೃತ್ತಿಗಳು ಪೈಪೋಟಿಗೆ ಬಿದ್ದಂತೆ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ದಿ ರಿಯಲ್ ಫಿಯರ್ ಲೆಸ್ ಇಂಡಿಯನ್ ಎಂಬ ಖಾತೆಯಿಂದ ಅಪ್ ಲೋಡ್ ಆಗಿರುವ ವಿಡಿಯೋ ಸುಮಾರು 1,550,144 ವೀಕ್ಷಣೆ ಪಡೆದುಕೊಂಡಿದೆ. 11 ಸಾವಿರ ಜನ ಲೈಕ್ ಹಾಗೂ 1 ಸಾವಿರ ಬಾರಿ ಇಷ್ಟವಾಗಿಲ್ಲ ಎಂಬ ಬಟನ್ ಒತ್ತಿದ್ದಾರೆ. ಮತ್ತೊಂದು ವಿಡಿಯೋ 26 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಭಾರತ ಸರ್ಕಾರ ಹಾಗೂ ಬಿಬಿಸಿ ನಡುವಿನ ಕಾಪಿರೈಟ್ ಹಾಗೂ ನಿಷೇಧ ಸಮರ ನಡೆದಿರುವ ಸಂದರ್ಭದಲ್ಲೇ ಭಾರತೀಯ ನಿವಾಸಿಗಳು ಸೇರಿದಂತೆ ಅನಿವಾಸಿ ಭಾರತೀಯರು ವಿಡಿಯೋ ಹಂಚಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಇದಕ್ಕೆ ಯಾವ ಸೆನ್ಸಾರ್ ಶಿಪ್ ಇಲ್ಲ.

English summary
India has banned the British filmmaker Leslee Udwin's documentary - "India's Daughter" - on the December 16, 2012, fatal gang-rape of a 23-year-old woman who has come to be known as Nirbhaya or the Fearless, following an uproar over Mukesh Singh's comments. But it was accessible on Youtube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X