ಬೆಂಗಳೂರು-ಚೆನ್ನೈ ರೈಲ್ವೆ ವೇಗ ಹೆಚ್ಚಳಕ್ಕೆ ಚೀನಾ ನೆರವು

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಬೆಂಗಳೂರು-ಚೆನ್ನೈ ರೈಲ್ವೆ ಕಾರಿಡಾರ್ ವೇಗವನ್ನು 150 ಕಿ.ಮೀ ಹೆಚ್ಚಿಸಲು ಭಾರತ ಚೀನಾ ನೆರವು ಕೇಳಿದೆ. ಎರಡು ದಶಕಗಳ ನಿಯೋಗಗಳ ನಡುವಿನ ಆರ್ಥಿಕ ಕಾರ್ಯತಂತ್ರದ ಕುರಿತಾದ ಮಾತುಕತೆ ವೇಳೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಈ ಕುರಿತು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮಾಹಿತಿ ನೀಡಿದ್ದು, ಇದೇ ವೇಳೆ ಆಗ್ರಾ ಮತ್ತು ಝಾನ್ಸಿ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿಗೂ ಎರಡು ದೇಶಗಳ ನಿಯೋಗವು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಬೆಂಗಳೂರು-ಚೆನ್ನೈ ರೈಲ್ವೆ ಕಾರಿಡಾರ್ ವೇಗವನ್ನು ಗಂಟೆಗೆ 150 ಕಿ.ಮೀ ಹೆಚ್ಚಳಕ್ಕೆ ಚೀನಾದ ನೆರವು ಹೇಳಲಾಗಿದೆ.

ಮೈಸೂರಿಗೆ ವಿದ್ಯುತ್ ರೈಲುಗಳ ಸಂಚಾರ ಆರಂಭ

ಈ ವ್ಊಹಾತ್ಮಕ ಆರ್ಥಿಕ ಮಾತುಕತೆ ರಾಜೀವ್ ಕುಮಾರ್ ಹಾಗೂ ಚೀನಾ ರಾಷ್ಟ್ರೀಯ ಅಭಿವೃದ್ಧಿ ಹಾಗೂ ಸುಧಾರಣಾ ಆಯೋಗದ ಅಧ್ಯಕ್ಷ ಹಿ ಲಿಫಿಂಗ್ ಅವರ ನೇತೃತ್ವದಲ್ಲಿ ನಿಯೋಗದ ನಡುವೆ ನಡೆಯಿತು.

India asks China to fund Bangalore- Chennai railway corridor

ಈ ಬಗ್ಗೆ ಪುನರ್ ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ಚೀನಾ ಹೇಳಿದೆ. ಚೀನಾ ಜಗತ್ತಿನಲ್ಲಿಯೇ ಅತಿ ವೇಗದ ರೈಲ್ವೆ ಜಾಲವನ್ನು ಹೊಂದಿದ್ದು, ದೇಶದೊಳಗಡೆಯೇ 22 ಸಾವಿರ ಕಿ.ಮೀ ವರೆಗೆ ವಿವಿಧ ನಗರಗಳೊಂದಿಗೆ ಸಂಪರ್ಕ ಕಲ್ಪಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RIndia has asked financial assistance for improvement of Bangalore- Chennai railway corridor. The government of India has intension to upgrade Bangalore- Chennai corridor up to 150 km per hour speed of trains.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ