ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ಕಾಮಿಕ್ ಪುಸ್ತಕ ಮಕ್ಕಳಿಗೆ ಮಾರಾಟ:ಎಫ್‌ಐಆರ್‌ ದಾಖಲು

|
Google Oneindia Kannada News

ಬೆಂಗಳೂರು, ನವೆಂಬರ್ 23: ಅಶ್ಲೀಲ ಕಾಮಿಕ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದ ಕಾರಣಕ್ಕೆ ಖಾಸಗಿ ಸಂಸ್ಥೆಯೊಂದರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಮಕ್ಕಳ ಬ್ಯಾಗ್ ನಲ್ಲಿದ್ದ ಪುಸ್ತಕ ನೋಡಿ ಪೋಷಕರು ಬೆಚ್ಚಿಬಿದ್ದಿದ್ದಾರೆ, ಹದಿಹರೆಯದ ಮಕ್ಕಳ ಬ್ಯಾಗ್‌ನಲ್ಲಿದ್ದ ಚಿತ್ರಗಳನ್ನು ನೋಡಿದ ಪೋಷಕರೊಬ್ಬರು ಈ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳ್ಳರ ಹಿಡಿದು ಪ್ರಶಸ್ತಿ ಪಡೆದ ಪೇದೆ: ಅತ್ಯಾಚಾರ ಮಾಡಿ ಜೈಲು ಸೇರಿದ ಕಳ್ಳರ ಹಿಡಿದು ಪ್ರಶಸ್ತಿ ಪಡೆದ ಪೇದೆ: ಅತ್ಯಾಚಾರ ಮಾಡಿ ಜೈಲು ಸೇರಿದ

ನಗರದ ವೈಟ್‌ಫೀಲ್ಡ್ ನಲ್ಲಿರುವ ಕೆಟಿಪಿಒ ಸಭಾಂಗಣದಲ್ಲಿ ನವೆಂಬರ್ 17-18ರಂದು ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ 7 ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಿತ್ತು.

Indecent pictures comic book selling in children festival

ಈ ಕಾರ್ಯಕ್ರಮದಲ್ಲಿ ಆರು ವರ್ಷದಿಂದ 18 ವರ್ಷದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಾಮಿಕ್ ಪುಸ್ತಕ, ಬ್ಯಾಡ್ಜ್, ಡಿ-ಶರ್ಟ್ ನೀಡಲಾಗಿತ್ತು. ಮಕ್ಕಳಿಗೆ ವಿತರಿಸಲಾಗಿದ್ದ ಅಮೆರಿಕ ಲೇಖಕ ಬ್ರಿ ಯಾನ್ ಕೆ.ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಇಂತಹ ಆಕ್ಷೇಪಾರ್ಹ ಚಿತ್ರಗಳಿವೆ.

ಇಂದಿರಾನಗರ ನಿವಾಸಿ 16 ವರ್ಷದ ಬಾಲಕಿಯೊಬ್ಬಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು, ಗುರುವಾರ ಬೆಳಗ್ಗೆ ಬಾಲಕಿ ತಾಯಿ ಮನೆ ಶುಚಿಗೊಳಿಸುವಾಗ ಕುತೂಹಲ ದಿಂದ ಅಲ್ಲಿಯೇ ಇದ್ದ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ನೀಡಿದ್ದ ಕಿಟ್ ತೆಗೆದು ನೋಡಿದ್ದಾರೆ.

ಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯ

ಈ ವೇಳೆ ಪುಸ್ತಕದಲ್ಇನ ಅಶ್ಲೀಲ ಚಿತ್ರಗಳನ್ನು ನೋಡಿ ಕೂಡಲೇ ಸಂಸ್ಥೆಗೆ ಅಪ್ರಾಪ್ತ ಮಕ್ಕಳಿಗೆ ವಿತರಿಸಲಾಗಿರುವ ಇಂತಹ ಚಿತ್ರಗಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂದೇಶ ಕಳುಹಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 ಅಡಿ ಪ್ರಕರಣ ದಾಖಲಾಗಿದೆ.

English summary
A controversy sparked over Comic Con India Institution children festival allegations organizers were sold comic books for children which had indecent pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X