ಈರುಳ್ಳಿ ಮಹಾತ್ಮೆ: ಹೋಟೆಲ್ ತಿಂಡಿಗಳ ಬೆಲೆ ಏರಿಕೆ?

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 30 : ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದರಿಂದ ತಿಂಡಿ, ಪದಾರ್ಥಗಳ ದರವನ್ನು ಪರಿಷ್ಕರಣೆ ಮಾಡಲು ಹೋಟೆಲ್ ಮಾಲಿಕರ ಸಂಘ ಆಲೋಚಿಸಿದೆ. ಒಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಏರಿಕೆ ಕಂಡಿದ್ದು ಸದ್ಯ ಇಳಿಮುಖವಾಗುವ ಲಕ್ಷಣಗಳು ಗೋಚರಿಸಿದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು !

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 70 ರಿಂದ 80 ರೂ.ಗೆ ಏರಿಕೆಯಾಗಿರುವುದರಿಂದ ಹೋಟೆಲ್ ಮಾಲೀಕರು ಚಿಂತಾಕ್ರಾಂತಾರಿದ್ದಾರೆ. ಹೋಟೆಲ್‍ನಲ್ಲಿ ತಯಾರಿಸುವ ಪ್ರತಿಯೊಂದು ತಿಂಡಿಗೂ ಈರುಳ್ಳಿ ಹಾಕಬೇಕಾಗುತ್ತದೆ. ಗ್ರಾಹಕರಿಗೆ ರುಚಿಕರವಾದ ತಿಂಡಿ ನೀಡದಿದ್ದರೆ ದಿನನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ.

Increasing Onion price Worried Hotellers

ಈಗಿನ ದರದಲ್ಲೇ ನಾವು ಈರುಳ್ಳಿ ಕೊಂಡು ರುಚಿಕರವಾದ ತಿಂಡಿ, ಊಟ ತಯಾರಿಸಿದರೆ ನಮಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಯೊಬ್ಬರು.

ಮಳೆ ತಂದ ಅವಾಂತರದಿಂದ ಈರುಳ್ಳಿ ಸೇರಿ ತರಕಾರಿ ಬೆಲೆ ಗಗನಕ್ಕೆ

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ನಮಗೆ ಪ್ರತಿ ಕೆಜಿಗೆ ಈರುಳ್ಳಿ ಮಾರುಕಟ್ಟೆಯಲ್ಲಿ 20ರಿಂದ 30ರೂ. ಆಸುಪಾಸಿನಲ್ಲಿ ಲಭ್ಯವಾಗುತ್ತಿತ್ತು. ರೈತರು ಬೆಳೆದ ಬೆಳೆಯನ್ನು ಈ ತಿಂಗಳಿನಲ್ಲೇ ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ದರ ದುಪ್ಪಟ್ಟಿಗಿಂತಲೂ ಹೆಚ್ಚಾಗಿರುವುದರಿಂದ ಹೋಟೆಲ್ ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ದರ ಪರಿಷ್ಕರಣೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಅಸಹಾಯಕತೆಯನ್ನು ಅವರು ಹೊರ ಹಾಕಿದ್ದಾರೆ.

ಮೆಜೆಸ್ಟಿಕ್ ಹತ್ತಿರದ ಹೋಟೆಲ್ ಗಳು 24 ಗಂಟೆಯೂ ಓಪನ್

ಬೆಲೆ ಏರಿಕೆ ಅನಿವಾರ್ಯ : ನಮಗೆ ಈಗಿನ ತರಕಾರಿ ದರದಲ್ಲಿ ಹೋಟೆಲ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಒಂದು ರೂ. ಏರಿಕೆ ಮಾಡಿದರೆ ಗ್ರಾಹಕರು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಕಾರ್ಮಿಕರ ವೆಚ್ಚ, ಬಾಡಿಗೆ, ವಿದ್ಯುತ್ ಸೇರಿದಂತೆ ಮತ್ತಿತರ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಉಪ್ಪಿಟ್ಟು, ಚಿತ್ರಾನ್ನ, ವೆಜಿಟೆಬಲ್ ಫಲಾವು, ಗೋಬಿ, ಪಾನೀಪುರಿ, ಟೊಮ್ಯಾಟೋಭಾತ್, ವಾಂಗಿಭಾತ್, ಈರುಳ್ಳಿ ದೋಸೆ, ಮಸಾಲದೋಸೆ, ಸೆಟ್‍ದೋಸೆ, ಪಕೋಡ, ಸಾಗು, ಸಾಂಬಾರು ಸೇರಿದಂತೆ ಮತ್ತಿತರ ತಿಂಡಿಗಳಿಗೆ ಹೆಚ್ಚಿನ ಖರ್ಚು ತಗುಲುವುದರಿಂದ ದರ ಪರಿಷ್ಕರಣೆ ಸದ್ಯದಲ್ಲೇ ಆಗಲಿದೆ ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The onion effect: Bengaluru hotel owner's association mulls hiking rates of food stufs following hike in onion prices.In Bengaluru market prices of onion as on 30th nov stands at rs 70-80 per kilo.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ