ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಅಧಿಕಾರಿ ಪುತ್ರ ಶರತ್ ಕೊಂದವರು ಸಿಕ್ಕಿಬಿದ್ದಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22 : ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಪುತ್ರ ಶರತ್ ಶವವಾಗಿ ಪತ್ತೆಯಾಗಿದ್ದಾನೆ. ಶರತ್ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.

ಶರತ್ ಕೊಲೆ ಕೇಸ್ ಗೆ ಟ್ವಿಸ್ಟ್: ಸ್ನೇಹಿತನಿಂದಲೇ ಅಪಹರಣ, ಹತ್ಯೆ ಶರತ್ ಕೊಲೆ ಕೇಸ್ ಗೆ ಟ್ವಿಸ್ಟ್: ಸ್ನೇಹಿತನಿಂದಲೇ ಅಪಹರಣ, ಹತ್ಯೆ

ಆಚಾರ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಆಟೋ ಮೊಬೈಲ್ ಇಂಜಿನಿಯರಿಂಗ್ ಓದುತ್ತಿದ್ದ ಶರತ್‌ (19) ನನ್ನು ಸೆ.12ರಂದು ಅಪಹರಣ ಮಾಡಲಾಗಿತ್ತು. ಸೆ.22ರಂದು ಶರತ್ ಕೊಲೆಯಾದ ಬಗ್ಗೆ ಮಾಹಿತಿ ಬಂದಿದೆ. ಅಜ್ಜನಹಳ್ಳಿ ಕೆರೆಯ ಪ್ರದೇಶದಲ್ಲಿ ಶರತ್ ಶವವನ್ನು ಹೂತು ಹಾಕಲಾಗಿದೆ.

ಪೊಲೀಸರ ತನಿಖೆಯಿಂದ ಶರತ್ ಅಪಹರಣ ಪ್ರಕರಣದ ಸೂತ್ರಧಾರ ವಿಶಾಲ್ ಎಂದು ತಿಳಿದುಬಂದಿದೆ. ಆರ್‌ಟಿಓ ಕಚೇರಿಯಲ್ಲಿ ಏಜೆಂಟ್‌ ಆಗಿ ವಿಶಾಲ್ ಕೆಲಸ ಮಾಡುತ್ತಿದ್ದ. ಶರತ್‌ ಸ್ನೇಹಿತ, ಅವರ ಮನೆಗೂ ಆತ ಹಲವು ಬಾರಿ ಬಂದಿದ್ದ. ಶರತ್ ತಂದೆ ನಿರಂಜನ್ ಅವರಿಗೂ ವಿಶಾಲ್ ಪರಿಚಿತನಾಗಿದ್ದ.

ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ

ವಿಶಾಲ್ ನಾಲ್ಕು ಲಕ್ಷ ಸಾಲ ಮಾಡಿಕೊಂಡಿದ್ದ. ಶರತ್ ಅಪಹರಿಸಿ, ಅದರಲ್ಲಿ ಬರುವ ಹಣದಲ್ಲಿ ಸಾಲ ತೀರಿಸಿ ಉಳಿದ ಹಣವನ್ನು ಹಂಚಿಕೊಳ್ಳುವ ಸಂಚು ರೂಪಿಸಿದ್ದ. ಶರತ್ ಸಹ ಈ ಸಂಚಿನಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಸೆ.12ರಂದು ಇತರ ಮೂವರ ಜೊತೆ ಸೇರಿ ವಿಶಾಲ್, ಶರತ್ ಅಪಹರಿಸಿದ್ದ.

ದೂರು ನೀಡಬೇಡಿ ಎಂದು ಬೆದರಿಕೆ

ದೂರು ನೀಡಬೇಡಿ ಎಂದು ಬೆದರಿಕೆ

ಶರತ್ ಅಪಹರಣ ಮಾಡಿದ ಬಳಿಕ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಲಾಗಿತ್ತು. 50 ಲಕ್ಷ ಹಣ ನೀಡುವಂತೆ ವಾಟ್ಸಪ್ ವಿಡಿಯೋವನ್ನು ಶರತ್ ಪೋಷಕರಿಗೆ ಕಳುಹಿಸಿದ್ದರು. ಆದರೆ, ನಿರಂಜನ್ ಪೊಲೀಸರಿಗೆ ದೂರು ನೀಡಿದ ತಕ್ಷಣ ಶರತ್‌ನನ್ನು ಅರೋಪಿಗಳು ಹತ್ಯೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಶವವನ್ನು ಇಟ್ಟುಕೊಂಡು ತಿರುಗಾಡಿದ್ದಾರೆ.

ರಾಮೋಹಳ್ಳಿಗೆ ಕೆರೆಗೆ ಶವ

ರಾಮೋಹಳ್ಳಿಗೆ ಕೆರೆಗೆ ಶವ

ಮೊದಲು ಶರತ್ ಶವವನ್ನು ರಾಮೋಹಳ್ಳಿ ಕೆರೆಗೆ ಎಸೆದಿದ್ದರು. ಪ್ರತಿದಿನ ಶವ ಕೆರೆಯಿಂದ ಮೇಲೆ ಬಂದಿದೆಯೇ? ಎಂದು ನೋಡಿಕೊಂಡು ಬರುತ್ತಿದ್ದರು. ಬುಧವಾರ ಶರತ್‌ ಮನೆಗೆ ಭೇಟಿ ನೀಡಿದ್ದ ವಿಶಾಲ್, ಅಪಹರಣದ ಬಗ್ಗೆ ನಿರಂಜನ್ ಅವರ ಜೊತೆಗೆ ಮಾತುಕತೆ ನಡೆಸಿದ್ದ.

ಶವವನ್ನು ಕೆರೆಯಿಂದ ತೆಗೆದು ಹೂತರು

ಶವವನ್ನು ಕೆರೆಯಿಂದ ತೆಗೆದು ಹೂತರು

ರಾಮೋಹಳ್ಳಿ ಕೆರೆಯಲ್ಲಿ ಶರತ್ ಶವ ತೇಲಲು ಆರಂಭವಾದ ನಂತರ ಅದನ್ನು ತೆಗೆದುಕೊಂಡು ಹೋಗಿ ಅಜ್ಜನಹಳ್ಳಿ ಕೆರೆಯ ಪ್ರದೇಶದಲ್ಲಿ ಹೂತು ಹಾಕಿದ್ದರು. ಪೊಲೀಸರ ವಶದಲ್ಲಿರುವ ವಿಶಾಲ್ ಶವ ಹೂತು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಶವ ಹೊರತೆಗೆಯಲು ಸ್ಥಳಕ್ಕೆ ತೆರಳಿದ್ದಾರೆ.

ವಿಶಾಲ್ ಪೊಲೀಸರಿಗೆ ಸಿಕ್ಕಿದ್ದು ಹೇಗೆ

ವಿಶಾಲ್ ಪೊಲೀಸರಿಗೆ ಸಿಕ್ಕಿದ್ದು ಹೇಗೆ

ಶರತ್ ಅಪಹರಣದ ತನಿಖೆಗೆ 4 ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು. ಪೊಲೀಸರು ಶರತ್ ಕುಟುಂಬದವರನ್ನು ವಿಚಾರಣೆ ನಡೆಸಿದಾಗ ವಿಶಾಲ್ ಮನೆಗೆ ಬಂದು ವಿಚಾರಿಸಿಕೊಂಡು ಹೋಗುತ್ತಿರುವ ವಿಚಾರವನ್ನು ಪೊಲೀಸರಿಗೆ ಹೇಳಿದ್ದರು.
ವಿಶಾಲ್ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಆತ ಮಾಗಡಿ ಸುತ್ತ-ಮುತ್ತ ಓಡಾಡುತ್ತಿರುವ ಬಗ್ಗೆ ತಿಳಿಯಿತು. ವಿಶಾಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶರತ್ ಹತ್ಯೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

English summary
Income Tax officer son Sharath who was kidnapped on September 12, 2017 was found dead on Friday. Police arrested 4 accused in connection with the kidnap and murder case. How accused traced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X