ಸಿಎನ್ನಾರ್ ರಾವ್ ರಿಂದ ಬೆಂಗಳೂರು ಇಂಡಿಯಾ ನ್ಯಾನೊಗೆ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಮಾ. 03: ಭಾರತದ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮ ‘ಬೆಂಗಳೂರು ಇಂಡಿಯಾ ನ್ಯಾನೊ'ದ 8ನೇ ಆವೃತ್ತಿ ‘ಬೆಂಗಳೂರು ಇಂಡಿಯಾ ನ್ಯಾನೊ 2016' ಗುರುವಾರ ಆರಂಭಗೊಂಡಿದೆ.

ಕರ್ನಾಟಕ ರಾಜ್ಯ ಐಟಿ&ಬಿಟಿ, ಎಸ್&ಟಿ ಇಲಾಖೆ, ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿಯ ಸಹಯೋಗದ ಕಾರ್ಯಕ್ರಮದಲ್ಲಿ ಅಕಾಡೆಮಿ ಗಣ್ಯರು, ಸಂಶೋಧಕರು ಮತ್ತು ಉದ್ಯಮ ಒಟ್ಟಾಗಿ ಹಿಂದೆಂದೂ ಕಾಣದಂಥ ನ್ಯಾನೊ ತಂತ್ರಜ್ಞಾನದ ಅಪ್ಲಿಕೇಷನ್ ಗಳನ್ನು ಪ್ರದರ್ಶಿಸುತ್ತಾರೆ.[ಗ್ಯಾಲರಿ: ಬೆಂಗಳೂರು ಇಂಡಿಯಾ ನ್ಯಾನೊ]

ಬೆಂಗಳೂರು ಲಲಿತ್ ಅಶೋಕ್ ಹೊಟೆಲ್ ನಲ್ಲಿ ನಡೆದ ಉದ್ಘಾಟನೆ ಸಮಾರಂಭದಲ್ಲಿ ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿಯ ಅಧ್ಯಕ್ಷ, ಭಾರತರತ್ನ ಸಿ.ಎನ್.ಆರ್.ರಾವ್, ಮಾಹಿತಿ ತಂತ್ರಜ್ಞಾನ, ಬಿಟಿ ಸಚಿವ ಎಸ್.ಆರ್.ಪಾಟೀಲ್, ಮತ್ತು ಎಸ್&ಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಮೊದಲಾದ ಗಣ್ಯರಿದ್ದರು.

ಉದ್ಘಾಟನೆ ಸಮಾರಂಭದಲ್ಲಿ ನ್ಯಾನೊ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಅನನ್ಯ ಸಾಧನೆಗಾಗಿ ಪ್ರೊ.ಡಾ.ವಿ.ರಾಮ್ ಗೋಪಾಲ್ ರಾವ್ ಅವರಿಗೆ ಪ್ರೊ. ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿಯಾ ನ್ಯಾನೊ ಸೈನ್ಸ್ ಪ್ರಶಸ್ತಿ ನೀಡಲಾಯಿತು.
ಪ್ರೊ.ರಾಮ್ ಗೋಪಾಲ್ ರಾವ್, ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ನ್ಯಾನೊ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರು.

ಬೆಂಗಳೂರು ಇಂಡಿಯಾ ನ್ಯಾನೊಗೆ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರು. ಜೆಎಎನ್ ಎಸ್ ಎಎಸ್‍ಆರ್ ನ ಗೌರವಾನ್ವಿತ ಅಧ್ಯಕ್ಷ ಲೀನಸ್ ಪೌಲಿಂಗ್, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ನ ಭೌತಶಾಸ್ತ್ರ ವಿಭಾಗದ ಎ.ಕೆ.ಸೂದ್ ಕಾರ್ಯಕ್ರಮದ ರೂವಾರಿಗಳು. ಸಮಾವೇಶ ಪೂರ್ವ ಸಂವಾದ, ಪ್ರದರ್ಶನ, ಪಾಲುದಾರಿಕೆ ಅವಕಾಶ, 3 ದಿನಗಳ ಪ್ರದರ್ಶನ ಮೊದಲಾವುಗಳನ್ನು ಹೊಂದಿದೆ.

ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್‍

ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್‍

ಬೆಂಗಳೂರು ಇಂಡಿಯಾ ನ್ಯಾನೊ ಸಮಾವೇಶ ಆರೋಗ್ಯ, ಸ್ವಚ್ಛ ನೀರು, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್‍ಗಳ ಕುರಿತು ಚರ್ಚಿಸಲಿದೆ. 13ಕ್ಕು ಅಧಿಕ ಪ್ರಮುಖ ಭಾಷಣಗಳು ಮತ್ತು 9 ದೇಶಗಳಿಂದ (ಯುಕೆ, ಯುಎಸ್‍ಎ, ಜರ್ಮನಿ, ಕೆನಡಾ, ಕೋರಿಯಾ, ಬಲ್ಗೇರಿಯಾ, ಫ್ರಾನ್ಸ್, ಪೋಲೆಂಡ್, ಸಿಂಗಪುರ) 600ಕ್ಕೂ ಅಧಿಕ ಗಣ್ಯರು, 200ಕ್ಕೂ ಅಧಿಕ ಸಂಸ್ಥೆಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.

ವಿವಿಧ ದೇಶಗಳ ತಜ್ಞರಿಂದ ಉಪನ್ಯಾಸ

ವಿವಿಧ ದೇಶಗಳ ತಜ್ಞರಿಂದ ಉಪನ್ಯಾಸ

ಮೊದಲ ದಿನ ಫ್ರಾನ್ಸ್ ನ ಕೆಮಿಸ್ಟ್ರಿ ಆಫ್ ಹೈಬ್ರಿಡ್ ಮೆಟಿರಿಯಲ್ ಕಾಲೇಜಿನ ಮುಖ್ಯಸ್ಥರು, ಪ್ರೊ.ಡಾ.ಕ್ಲೆಮೆಂಟ್ ಸ್ಯಾಂಚೆ, ದಕ್ಷಿಣ ಕೋರಿಯಾದ ಫಿಸಿಕ್ಸ್ ಉಪನ್ಯಾಸಕ ಡಾ. ಯಂಗ್ ಹೀ ಲೀ ಅವರ ಉಪನ್ಯಾಸಗಳು ನಡೆದವು. 2ನೇ ದಿನ ಚಿಕಾಗೊ ವಿವಿಯ ನ್ಯಾನೊಸೈನ್ಸ್ ವಿಭಾಗದ ಪ್ರೊ.ಸುಪ್ರತೀಕ್ ಗುಹ, ಸಿಎನ್‍ಆರ್ ಪ್ರಶಸ್ತಿ ವಿಜೇತ ಪ್ರೊ.ವಿ.ರಾಮ್‍ಗೋಪಾಲ್ ರಾವ್ ಅವರ ಉಪನ್ಯಾಸ ನಡೆಯಲಿದೆ.

ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ ಕುರಿತು ಚರ್ಚೆ

ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ ಕುರಿತು ಚರ್ಚೆ

ಸಮಾವೇಶದಲ್ಲಿ ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್ ಗಳು, ಆರೋಗ್ಯ, ಸ್ವಚ್ಛ ನೀರು, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು ಚರ್ಚಿಸಲಿದೆ. ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ, ನ್ಯಾನೊ ಮೆಡಿಸಿನ್, ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಮತ್ತು ನ್ಯಾನೊ ಫೋಟೊನಿಕ್ಸ್ ಮೊದಲಾದ ವಿಚಾರಗಳತ್ತ ಸಮಾವೇಶ ಗಮನಹರಿಸಲಿದೆ.

14 ಕಂಪನಿಗಳ ನ್ಯಾನೊ ಸಾಧನ ಪ್ರದರ್ಶನ

14 ಕಂಪನಿಗಳ ನ್ಯಾನೊ ಸಾಧನ ಪ್ರದರ್ಶನ

ವ್ಯಾಪಾರಿ ಪ್ರದರ್ಶನವನ್ನು ಹೊಂದಿದ್ದು, ನ್ಯಾನೊ ಟೆಕ್ನಾಲಜಿ ಅಳವಡಿಸಿಕೊಂಡ 14 ಕಂಪನಿಗಳು ನ್ಯಾನೊ ಸಾಧನ, ಸೆಮಿಕಂಡಕ್ಟರ್ಸ್&ಹಾರ್ಡ್ ವೇ, ಲಿಥೊಪೊಗ್ರಫಿ, ಕೆಮಿಕಲ್ ಟೆಕ್ನಾಲಜಿ ಮತ್ತಿತರ ಕ್ಷೇತ್ರಗಳಿಂದ ಭಾಗವಹಿಸಲಿವೆ. ಆರ್‍ಐಸಿಎಚ್ ವೇದಿಕೆ(ರಿಸಚ್ ಇಂಡಸ್ಟ್ರಿ ಕೊಲಾಬರೇಷನ್ ಹಬ್) ನ್ಯಾನೊ ತಂತ್ರಜ್ಞಾನದ ವಾಣಿಜ್ಯೀಕರಣದತ್ತ ದೃಷ್ಟಿ ಹಾಯಿಸಲಿದೆ.

3 ದಿನಗಳ ಕಾರ್ಯಕ್ರಮದಲ್ಲಿ 14 ಸಂಸ್ಥೆ ಪಾಲ್ಗೊಳ್ಳಲಿವೆ

3 ದಿನಗಳ ಕಾರ್ಯಕ್ರಮದಲ್ಲಿ 14 ಸಂಸ್ಥೆ ಪಾಲ್ಗೊಳ್ಳಲಿವೆ

ಜೊತೆಗೆ 3 ದಿನಗಳ ಕಾರ್ಯಕ್ರಮದಲ್ಲಿ 45 ಭಿನ್ನ ಪ್ರದರ್ಶಕರಿಂದ ನ್ಯಾನೊ ತಂತ್ರಜ್ಞಾನ ಮತ್ತು ಉತ್ಪನ್ನ ಸಂಬಂಧಿ ಪ್ರದರ್ಶನ ನಡೆಯಲಿದೆ. ಡಿಎಸ್‍ಟಿ ನ್ಯಾನೊ ಮಿಷನ್ ಪೆವಿಲಿಯನ್, ಇನ್ಸ್‍ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ ಗಳಾದ ಐಐಟಿ, ಎನ್‍ಐಟಿ, ಐಐಎಸ್‍ಸಿ, ಐಎನ್‍ಎಸ್‍ಟಿ ಸೇರಿದಂತೆ 14 ಸಂಸ್ಥೆಗಳು ಭಾಗವಹಿಸಲಿವೆ.

ಚಿತ್ರದಲ್ಲಿ ಪ್ರೊ.ಡಾ.ವಿ.ರಾಮ್ ಗೋಪಾಲ್

ಚಿತ್ರದಲ್ಲಿ ಪ್ರೊ.ಡಾ.ವಿ.ರಾಮ್ ಗೋಪಾಲ್

ಬೆಂಗಳೂರು ಇಂಡಿಯಾ ನ್ಯಾನೊ ಇನ್ನೋವೇಷನ್ ಪ್ರಶಸ್ತಿಯನ್ನು ನ್ಯಾನೊ ತಂತ್ರಜ್ಞಾನದಲ್ಲಿ ಅತ್ಯುನ್ನತ ಸಾಧನೆ ಮಾಡಿದ ವ್ಯಕ್ತಿಗಳು/ಸಂಸ್ಥೆಗಳಿಗೆ ನೀಡಲಾಗುವುದು. ಮಲ್ಹೋತ್ರ ವೈಕಿಫಿಲ್ಡ್ ಫೌಂಡೇಷನ್ ನ್ಯಾನೊ ಸೈನ್ಸ್ ಫೆಲೊಶಿಪ್ ಅವಾರ್ಡ್, ಬೆಸ್ಟ್ ಪೋಸ್ಟರ್ ಅವಾಡ್ರ್ಸ್, ಬೆಸ್ಟ್ ಎಕ್ಸಿಬಿಟರ್ ಅವಾರ್ಡ್ ಮೊದಲಾದ ಪುರಸ್ಕಾರ ನೀಡಿಕೆ ಸಮಾರಂಭ ಕಾರ್ಯಕ್ರಮದ ಮತ್ತೊಂದು ಪ್ರಮುಖಾಂಶ.

8ನೇ ಬೆಂಗಳೂರು ಇಂಡಿಯಾ ನ್ಯಾನೊ ಕುರಿತು

8ನೇ ಬೆಂಗಳೂರು ಇಂಡಿಯಾ ನ್ಯಾನೊ ಕುರಿತು

ಬೆಂಗಳೂರು ಇಂಡಿಯಾ ನ್ಯಾನೊ, ಭಾರತದ ಬೃಹತ್ ನ್ಯಾನೊ ತಂತ್ರಜ್ಞಾನ ವಾರ್ಷಿಕ ಕಾರ್ಯಕ್ರಮವಾಗಿದೆ. ಕರ್ನಾಟಕ ರಾಜ್ಯ ಐಟಿ, ಬಿಟಿ ಮತ್ತು ಎಸ್‍ಆಂಡ್‍ಟಿ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಂಡಿತು. ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಲಜಿ, ಜವಹಾರ್‍ಲಾಲ್ ನೆಹರು ಸೆಂಟರ್ ಆಫ್ ಅಡ್ವಾನ್ಸ್ಡ್ ಸೈಟಿಫಿಕ್ ರಿಸರ್ಚ್, ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ, ಎಂಎಂ ಆಕ್ಟೀವ್ ಸೈನ್ಸ್ ಟೆಕ್ ಕಮ್ಯೂನಿಕೇಷನ್ ಗಳು ಒಟ್ಟಾಗಿ ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳತ್ತು ಈ ಸಮಾವೇಶ ದೃಷ್ಟಿ ಹಾಯಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 8th edition of India’s flagship Nanotechnology and nanoscience event – Bangalore India Nano 2016, observed a splendid opening today. An initiative powered by the Department of IT, Biotechnology and Science & Technology, Government of Karnataka and Vision Group on Nanotechnology.The inaugural ceremony was attended by Chairman of Vision Group on Nanotechnology and Science & Technology, Bharat Ratna Prof. C.N.R. Rao and others at Hotel Lalit Ashoka, Benagaluru.
Please Wait while comments are loading...