ಇನ್ ದಿ ಫೀಲ್ಡ್: ಬೆಂಗಳೂರು ಹುಡುಗಿಯರ ವಿನೂತನ ಯೋಜನೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ಭಾರತ ಎದುರಿಸುತ್ತಿರುವ ಸಮಸ್ಯೆಗಳು ಹಲವು. ಅವುಗಳನ್ನು ಪರಿಹರಿಸುವುದಕ್ಕಾಗಿ ಸ್ವಇಚ್ಛೆಯಿಂದಲೇ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಸಂಸ್ಥೆಗಳು ಕೆಲವು. ಅವುಗಳಲ್ಲಿ ಇನ್ ದಿ ಫೀಲ್ಡ್ ಕೂಡ ಒಂದು.

'ಶೈಕ್ಷಣಿಕ ದತ್ತು' ಎಂಬ ವಿನೂತನ ಯೋಜನೆಗೆ ನಾಂದಿ ಹಾಡಿದ 'ಮಿಂಚು'

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇನ್ ದಿ ಫೀಲ್ಡ್ ಎಂಬುದು ಭಾರತ ಮತ್ತು ಅಭಿವೃದ್ಧಿಯ ಕುರಿತ ಒಂದು ಪೋಡ್ ಕಾಸ್ಟ್. ಅಂದರೆ ಲೇಖನ ಮತ್ತು ಆಡಿಯೋಗಳ ಮೂಲಕ ಭಾರತಕ್ಕೆ ಸಂಬಂಧಿಸಿದ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಮತ್ತು ಅವುಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಇದು. ಇದನ್ನು ಆರಂಭಿಸಿದ್ದು, ಬೆಂಗಳೂರಿಗರೇ ಆದ ರಾಧಿಕಾ ವಿಶ್ವನಾಥ್ ಮತ್ತು ಸಂಯುಕ್ತಾ ವರ್ಮಾ.

In the field- 2 Bengaluru girls start a podcast about India and Development

ಬೇರೆ ಬೇರೆ ಸಂಸ್ಥೆಗಳಲ್ಲಿ, ಸಾಮಾಜಿಕ ರಂಗದಲ್ಲಿ, ಸಂಶೋಧನೆ, ಸರ್ಕಾರ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಸಂಯುಕ್ತ ಮತ್ತು ರಾಧಿಕಾ ಅವರಿಗೆ ಭಾರತದ ಅಭಿವೃದ್ಧಿ ಮತ್ತು ತಾಯ್ನಾಡಿನ ಮೇಲಿದ್ದ ಅಭಿಮಾನವೇ ಇನ್ ದಿ ಫೀಲ್ಡ್ ಸ್ಥಾಪನೆಗೆ ನಾಂದಿಹಾಡಿತು.

ಕಲಿಕೆಯಲ್ಲೂ 'ವಾತ್ಸಲ್ಯ' ಅರಸುವ ಶಿವಮೊಗ್ಗದ ಶೈಲಾ ಹುಂಚದಕಟ್ಟೆ

ಲೇಖನ ಮತ್ತು ಆಡಿಯೋ ಜೊತೆ ಈಗಾಗಲೇ ಹಲವು ಎಪಿಸೋಡ್ ಗಳನ್ನು ಆರಂಭಿಸಿರುವ ಇನ್ ದಿ ಫೀಲ್ಡ್ ಕುರಿತು ಸಂಯುಕ್ತಾ ವರ್ಮಾ ಹೇಳಿದ್ದಿಷ್ಟು;

In the field- 2 Bengaluru girls start a podcast about India and Development

"ಇನ್ ದಿ ಫೀಲ್ಡ್ ಅನ್ನೋದು ಒಂದು ಪೋಡ್ ಕಾಸ್ಟ್. ಸಾಮಾಜಿಕ ಕ್ಷೇತ್ರಗಳಲ್ಲಿ ಆಗಬೇಕಾದ ಬದಲಾವಣೆ ಮತ್ತು ಪ್ರಗತಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇದು ಮಾಡುತ್ತಿದೆ. ಬೇರೆ ಬೇರೆ ಕಾರ್ಪೋರೇಟ್ ಕಂಪೆನಿಗಳನ್ನೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸುವಲ್ಲಿ ಪ್ರಯತ್ನಿಸುತ್ತಿದೆ."

"ಕಳೆದ ಒಂದು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಮಗೆ ದೇಶದ ಹಲವು ಸಮಸ್ಯೆಗಳ ಪರಿಚಯವಾಯ್ತು. ಆದರೆ ಆ ಎಲ್ಲ ಸಮಸ್ಯೆಗಳ ಕುರಿತು ದೇಶದ ಬಹುಪಾಲು ಜನರಿಗೆ ಗೊತ್ತೇ ಇಲ್ಲ ಎಂಬ ಸತ್ಯವೂ ಅರಿವಾಯ್ತು. ಅದಕ್ಕೆಂದೇ ಅವನ್ನು ಇನ್ ದಿ ಫೀಲ್ಡ್ ಮೂಲಕ ಒಂದಷ್ಟು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬೇರೆ ಬೇರೆ ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ, ಕಂಪೆನಿಗಳಲ್ಲಿ ಸಂವಾದ ಕಾರ್ಯಕ್ರಮಗಳನ್ನೂ ಮಾಡಿ, ಮತ್ತಷ್ಟು ಜನ ನಮ್ಮೊಂದಿಗೆ ಕೈಜೋಡಿಸುವಂತೆಯೂ ಮಾಡುತ್ತಿದ್ದೇವೆ. ಸೇವಾಮನೋಭಾವನೆಯ ಸಾಕಷ್ಟು ಜನ ನಮ್ಮೊಂದಿಗೆ ಸ್ವ ಇಚ್ಛೆಯಿಂದ ಕೈಜೋಡಿಸಿರುವುದು ನಮ್ಮ ಸುಯೋಗ"

In the field- 2 Bengaluru girls start a podcast about India and Development

"ಕೇವಲ ಲೇಖನ ಬರೆಯುವುದಕ್ಕಿಂತ, ಅವುಗಳಲ್ಲಿಂದ ಕಾಳಜಿಯ 'ಧ್ವನಿ'ಯನ್ನು ಪರಿಚಯಿಸಿದರೆ ಜನರಿಗೆ ಸಮಸ್ಯೆಯ ತೀವ್ರತೆ, ಮತ್ತಷ್ಟು ಜನರ ನೋವು ಅರ್ಥವಾದೀತು ಎಂಬ ದೃಷ್ಟಿಯಿಂದ ಆಡಿಯೋ ಕೂಡ ಇದರಲ್ಲಿ ಜೊತೆಯಾಗಿದೆ. ಇದರಿಂದ ದೇಶದಲ್ಲಿ ಒಂದಷ್ಟಾದರೂ ಧನಾತ್ಮಕ ಬದಲಾವಣೆಯಾದರೆ ನಮ್ಮ ಶ್ರಮವೂ ಸಾರ್ಥಕ"

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the Field is a podcast about India and Development. Each episode examines an issue or a question that related to development/social sector work and unpacks it and showcases the people and the work being done. It is hosted by Radhika Viswanathan and Samyuktha Varma, both are development professionals.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ