50ರ ಜಮೀರ್‌ಗೆ ಕೇಕ್ ತಿನ್ನಿಸಿದ ಸಂಜುಬಾಬಾ ಮತ್ತಿತರರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 02 : ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಬಾಲಿವುಡ್ ನಟರ ಜೊತೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಜಮೀರ್ ಅವರ 50ನೇ ಹುಟ್ಟು ಹಬ್ಬಕ್ಕೆ ಶುಭ ಕೋರಲು ಹಲವು ನಟರು ಉದ್ಯಾನ ನಗರಿ ಬೆಂಗಳೂರಿಗೆ ಆಗಮಿಸಿದ್ದರು.

ಜಮೀರ್ ಅಹಮದ್ ಖಾನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಜಗಜೀವನರಾಂ ನಗರದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೆರವಣಿಗೆ ಏರ್ಪಡಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಜಮೀರ್ ಅಹಮದ್ ಖಾನ್ ಅವರು ನಟ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.

ಮುಂಬೈನಿಂದ ಸಂಜಯ್ ದತ್, ಜಾಕಿ ಶ್ರಾಫ್, ಶಕ್ತಿ ಕಪೂರ್, ಗೋವಿಂದ ಸೇರಿದಂತೆ ಹಲವು ನಟರು ಜಮೀರ್ ಅಹಮದ್ ಖಾನ್ ಹುಟ್ಟುಹಬ್ಬಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಹುಟ್ಟು ಹಬ್ಬದ ಆಚರಣೆಯ ಫೋಟೋಗಳನ್ನು ಜಮೀರ್ ಅಹಮದ್ ತಮ್ಮ ಫೇಸ್‌ ಬುಕ್ ಪೇಜ್‌ನಲ್ಲಿ ಹಾಕಿದ್ದಾರೆ.

ಬಾಲಿವುಡ್ ನಟರು ಮಾತ್ರವಲ್ಲದೇ ಶಾಸಕ ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಮುಂತಾದವರು ಜಮೀರ್ ಅಹಮದ್ ಖಾನ್ ಅವರ ಹುಟ್ಟು ಹಬ್ಬದ ಶುಭ ಕೋರಿದರು....

ಜಮೀರ್‌ಗೆ ಶುಭಾಶಯ ಕೋರಿದ ಸಂಜಯ್ ದತ್

ಜಮೀರ್‌ಗೆ ಶುಭಾಶಯ ಕೋರಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಸಂಜಯ್ ದತ್ ಜೊತೆ ಕೇಕ್ ಕತ್ತರಿಸಿ ಜಮೀರ್ ಹುಟ್ಟು ಹಬ್ಬ ಆಚರಿಸಿಕೊಂಡರು.

ಶುಭಾಶಯ ಕೋರಿದ ನಟ ಗೋವಿಂದ

ಶುಭಾಶಯ ಕೋರಿದ ನಟ ಗೋವಿಂದ

ಬಾಲಿವುಡ್ ನಟ ಗೋವಿಂದ ಅವರು ಶಾಸಕ ಜಮೀರ್ ಅಹಮದ್ ಖಾನ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದರು. ಗೋವಿಂದ ಅವರನ್ನು ಜಮೀದ್ ಸನ್ಮಾನಿಸಿದರು.

ಶುಭಾಶಯ ಕೋರಿದ ಶಕ್ತಿ ಕಪೂರ್

ಶುಭಾಶಯ ಕೋರಿದ ಶಕ್ತಿ ಕಪೂರ್

ಬಾಲಿವುಡ್ ನಟ ಶಕ್ತಿ ಕಪೂರ್ ಅವರು ಜಮೀರ್ ಅಹಮದ್ ಖಾನ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು, ಅವರಿಗೆ ಶುಭಾಶಯ ಕೋರಿದರು. ಜಗಜೀವನರಾಂ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಜಮೀರ್ ಅವರ ಜೊತೆ ಪಾಲ್ಗೊಂಡಿದ್ದರು.

ಶುಭಾಶಯ ಕೋರಿದ ಶಾಸಕರು

ಶುಭಾಶಯ ಕೋರಿದ ಶಾಸಕರು

ಬಾಲಿವುಡ್ ನಟರು ಮಾತ್ರವಲ್ಲದೇ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಚೆಲುವರಾಯ ಸ್ವಾಮಿ, ಎಚ್.ಸಿ.ಬಾಲಕೃಷ್ಣ ಅವರು ಸಹ ಜಮೀರ್ ಅಹಮದ್ ಖಾನ್ ಅವರಿಗೆ 50ನೇ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು.

ಜಮೀರ್ ಪುತ್ರನ ಬಾಲಿವುಡ್ ಸಿನಿಮಾ

ಜಮೀರ್ ಪುತ್ರನ ಬಾಲಿವುಡ್ ಸಿನಿಮಾ

ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ (Zaid Khan) ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹಲವು ದಿನಗಳ ಹಿಂದೆ ಸುದ್ದಿ ಹಬ್ಬಿತ್ತು.[ವಿವರಗಳು ಇಲ್ಲಿವೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajpet JDS MLA Zameer Ahmed Khan celebrated his 50th birthday with several bollywood stars on August 1, 2016. Here are the pics.
Please Wait while comments are loading...