ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸಲಾಗದು : ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 21: ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಕಂಡು ಬಂದರೆ ಸಹಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರಪತಿ ಪದಕ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಗಳು ಮಾತನಾಡಿದರು. ರಾಜ್ಯಪಾಲರು ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪದಕ ಪ್ರದಾನ ಮಾಡಿದರು.

ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓ.ಪ್ರಕಾಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇಡೀ ಸಮಾಜದ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಶಾಂತಿ ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಆಸ್ತಪಾಸ್ತಿ ರಕ್ಷಣೆ ಮಾಡುವ ಜವಾಬ್ದಾರಿ ಇಲಾಖೆ ಮೇಲಿದೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುವವರು ಪೊಲೀಸರು, ಸಮಾಜ ಗರುತಿಸಲಿ, ಬಿಡಲಿ, ನೀವು ಮಾತ್ರ ಕರ್ತವ್ಯದಿಂದ ವಿಮುಖರಾಗಬೇಡಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಸಮಾಜ ನಿಮ್ಮಿಂದ ಉತ್ತಮ‌ ಸೇವೆ ನಿರೀಕ್ಷಿಸಿದೆ : ಸಿಎಂ

ಸಮಾಜ ನಿಮ್ಮಿಂದ ಉತ್ತಮ‌ ಸೇವೆ ನಿರೀಕ್ಷಿಸಿದೆ : ಸಿಎಂ

ಸಮಾಜ ನಿಮ್ಮಿಂದ ಉತ್ತಮ‌ ಸೇವೆ ನಿರೀಕ್ಷಿಸಿದೆ, ಅದನ್ನು ಸವಾಲಾಗಿ ಸ್ವೀಕರಿಸಿ ಕೊಡುಗೆ ನೀಡಿ, ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಇತ್ತೀಚೆಗೆ ಅಶಿಸ್ತು ತೋರಿದ ಘಟನೆಗಳಾಗಿವೆ, ಅದಕ್ಕೆ ಅವಕಾಶ ಕೊಡಬಾರದು. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಕಾಣಿಸಿದರೆ ನಿಮ್ಮ ಮೇಲಿನ ನಂಬಿಕೆ, ಗೌರವ ಕಡಿಮೆಯಾಗುತ್ತದೆ.

ಪೊಲೀಸರಿಗೆ ಖಾಸಗಿ ಜೀವನ ಇಲ್ಲ. ಆದರೆ ಅದು ಅನಿವಾರ್ಯ. ನಾವೇ ಒಪ್ಪಿ ಈ ಸೇವೆಗೆ ಬಂದಿರುವುದರಿಂದ ಗೊಣಗುವ ಅಗತ್ಯವಿಲ್ಲ. ಒತ್ತಡವೂ ಸದಾ ಪೊಲೀಸರ ಮೇಲಿರುತ್ತದೆ ಎಂದರು ಮುಖ್ಯಮಂತ್ರಿಗಳು.

ಪೊಲೀಸ್ ಕುಟುಂಬಕ್ಕೂ ಅಭಿನಂದನೆ

ಪೊಲೀಸ್ ಕುಟುಂಬಕ್ಕೂ ಅಭಿನಂದನೆ

ಪೊಲೀಸರು, ಉತ್ತಮ ಸೇವೆ ಸಲ್ಲಿಸಬೇಕಾದರೆ ಕುಟುಂಬದವರ ಸಹಕಾರವೂ ಅಗತ್ಯ. ಅವರೆಲ್ಲರ ಸಹಕಾರ ಇಲ್ಲದಿದ್ದರೆ ಸಾಧನೆ ಮಾಡಲಾಗದು. ಪೊಲೀಸರ ಈ ಸಾಧನೆಯಲ್ಲಿ, ಪ್ರಶಸ್ತಿಯಲ್ಲಿ ಕುಟುಂಬದವರ ಪಾಲೂ ಇದೆ, ಹೀಗಾಗಿ ಕುಟುಂಬದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಪೊಲೀಸರಿಗೆ ಶೌರ್ಯ, ಫಿಟ್ ನೆಸ್ ಅಗತ್ಯ

ಪೊಲೀಸರಿಗೆ ಶೌರ್ಯ, ಫಿಟ್ ನೆಸ್ ಅಗತ್ಯ

ಪೊಲೀಸರಿಗೆ ಶೌರ್ಯ ಅಗತ್ಯ. ಅವರು ಫಿಟ್ ನೆಸ್ ಕಾಪಾಡಿಕೊಳ್ಳಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಇತ್ತೀಚೆಗೆ ಇಲಾಖೆಯಲ್ಲಿ ಅತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ, ಅದು ದುರದೃಷ್ಟಕರ ಎಂದರು.

ಪೊಲೀಸರಿಗೆ ಹಳೆಯ ಕಾಲದ ತರಬೇತಿ ಬದಲಾಗಿದೆ, ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುವ ಬಗ್ಗೆಯೂ ತರಬೇತಿ ಅವಶ್ಯ. ಗುಪ್ತದಳಕ್ಕೆ ಬರುವವರಿಗೂ ವಿಶೇಷ ತರಬೇತಿ ನೀಡಬೇಕಾಗುತ್ತದೆ.

ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

ಗುಪ್ತದಳಕ್ಕೆ ಬರುವವರಿಗೂ ವಿಶೇಷ ತರಬೇತಿ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಪ್ತದಳ ಬಲಯುತವಾಗಿದ್ದರೆ ಮುಂದಾಗುವ ಹಲವಾರು ಘಟನೆಗಳನ್ನು ಮತ್ತು ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಪರಾಧ ಸಂಭವಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪರಾಧಗಳನ್ನೇ ನಿಯಂತ್ರಿಸುವುದು ಸೂಕ್ತ. ಇದಕ್ಕಾಗಿ ಗುಪ್ತದಳದ ಬಲವರ್ಧನೆ ಆಗಬೇಕು ಎಂದು ಮುಖ್ಯಮಂತ್ರಿ ಗಳು ಅಭಿಪ್ರಾಯಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka governor Vajubhai Vala honored Police Staffs by President Award in Rajbhavan. CM Siddaramaiah, home minister G Parameshwara were present at the function.
Please Wait while comments are loading...