ಅಬ್ಬಬ್ಬಾ, ಎಂಥಾ ರೋಮಾಂಚನಕಾರಿ ಸ್ಟಂಟ್!

Posted By:
Subscribe to Oneindia Kannada

ಬೆಂಗಳೂರು, ಮೇ 13: ಮೋಟಾರ್ ಬೈಕ್ ಪ್ರಿಯರನ್ನು ಸೂಜಿಗಲ್ಲಿನ ಮೇಲೆ ನಿಲ್ಲಿಸಿ ನಿಬ್ಬೆರಗಾಗಗುವಂತೆ ಮಾಡಿದ ಆ ಸಾಹಸಿಯೇ ಗ್ರೇಟ್! ಅಬ್ಬಬ್ಬಾ, ಎಂಥಾ ರೋಮಾಂಚನಕಾರಿ ಸ್ಟಂಟ್! ಎಂಬ ಉದ್ಗಾರಗಳು ನಮ್ಮ ಬೆಂಗಳೂರಿಗರ ಬಾಯಲ್ಲಿ ಕೇಳಿ ಬಂದಿತು. ಎರಡು ಬಾರಿಯ ಯೂರೋಪಿಯನ್ ಸ್ಟಂಟ್ ರೈಡಿಂಗ್ ಚಾಂಪಿಯನ್ ಮತ್ತು ರೆಡ್‍ಬುಲ್ ನ ಅಥ್ಲೀಟ್ ಅರಾಸ್ ಗಿಬಿಯೆಝ ಸ್ಟಂಟ್ ರೈಡ್ ಎಲ್ಲರನ್ನು ಅಶ್ಚರ್ಯಚಕಿತರನ್ನಾಗಿಸಿತು.

ಭಾರತದ 9 ನಗರಗಳ ಸುಜುಕಿ ಜಿಕ್ಸ್ಷರ್ ಡೇ ಟೂರ್ ನ ಅಂಗವಾಗಿ ನಗರದ ಮಹದೇವಪುರ, ವೈಟ್ ಫೀಲ್ಡ್ ರಸ್ತೆ ಬಳಿ ಇರುವ ಫಿಯೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಾಸ್ ತಮ್ಮ ಅಪಾಯಕಾರಿ ಸ್ಟಂಟ್ ಗಳ ಮೂಲಕ ಎಲ್ಲರನ್ನೂ ಮೈನವಿರೇಳಿಸುವಂತೆ ಮಾಡಿದರು. ಏಪ್ರಿಲ್ 15 ರಂದು ದೆಹಲಿಯಲ್ಲಿ ಆರಂಭವಾಗಿರುವ ಈ ಸುಜುಕಿ ಜಿಕ್ಸರ್ ಡೇ ಟೂರ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಿತು. [ಕಾರ್ ಮತ್ತು ಬೈಕ್ ರೇಸಿಂಗ್ ನೋಡಲು ಹೊಸೂರಿಗೆ ಬನ್ನಿ]

Freestyle Stunt Rider Aras Gibieza in Bengaluru

ಅಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಅಭಿನಂದನಾ ಪೂರ್ವಕವಾಗಿ ಕೈಬೀಸುತ್ತಲೇ ಮಾತನಾಡಿದ, ಅರಾಸ್, 'ಸ್ಟಂಟ್ ರೈಡಿಂಗ್ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ಭಾರತೀಯ ಅಭಿಮಾನಿಗಳಿರುತ್ತಾರೆ ಎಂದುಕೊಂಡಿರಲಿಲ್ಲ. ಆದರೆ, ಇಲ್ಲಿ ಸೇರಿರುವ ಅಭಿಮಾನಿಗಳನ್ನು ನೋಡಿದ ಮೇಲೆ ನಾನು ಮತ್ತಷ್ಟು ಸ್ಟಂಟ್ ಗಳನ್ನು ಕರಗತ ಮಾಡಿಕೊಳ್ಳಬೇಕೆನಿಸುತ್ತಿದೆ. [ಹಾರ್ಲೆ 'ಬೈಕ್ ಗಳ ಟೂರ್']

ನಾನು ಪ್ರತಿಯೊಂದು ಸ್ಟಂಟ್ ಮಾಡಿದಾಗಲೂ ಈ ಅಭಿಮಾನಿಗಳು ನನ್ನನ್ನು ಹುರಿದುಂಬಿಸಿದ ರೀತಿ ಮತ್ತು ಮೆಚ್ಚುಗೆಯನ್ನು ಕಂಡರೆ ನಾನು ನನ್ನ ಸ್ಟಂಟ್‍ಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕೆನಿಸುತ್ತಿದೆ. ಕಾರ್ಯಕ್ರಮದ ಕಡೆಯಲ್ಲಿ ಉಳಿಯುವುದೊಂದೇ, ಅದೆಂದರೆ, ಅಭಿಮಾನಿಗಳ ಕರತಾಡನ. ನಾನು ಇಲ್ಲಿ ಅತ್ಯುತ್ತಮವಾದ ಅಭಿಮಾನಿಗಳ ಅಭಿಮಾನವನ್ನು ಬೆಳೆಸಿಕೊಂಡಿದ್ದೇನೆ. ಇದು ನನ್ನ ಭವಿಷ್ಯಕ್ಕೆ ಒಂದು ಉತ್ತಮ ವೇದಿಕೆಯಂತಾಗಿದೆ'' ಎಂದು ಹರ್ಷ ವ್ಯಕ್ತಪಡಿಸಿದರು. [ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ನಗರ ಸುತ್ತಾಡಿ]

Freestyle Stunt Rider Aras Gibieza in Bengaluru

ಅರಾಸ್ ಅವರ ಮುಂದಿನ ಸ್ಟಂಟ್ ರೈಡ್ ವಾಣಿಜ್ಯ ನಗರ ಮುಂಬೈನಲ್ಲಿ. ಅಲ್ಲಿಯೂ ಬೆಂಗಳೂರಿನ ಅಭಿಮಾನಿಗಳ ರೀತಿಯ ಪ್ರೋತ್ಸಾಹ, ಉತ್ಸಾಹದ ನಡುವೆ ಸ್ಟಂಟ್ ರೈಡಿಂಗ್ ಮಾಡುವ ವಿಶ್ವಾಸದೊಂದಿಗೆ ತೆರಳಿದರು.

ಅತ್ಯಂತ ಚಿಕ್ಕ ವಯಸಿಗೇ ಅರಾಸ್ ಇಂತಹ ಸಾಹಸಮಯ ರೈಡಿಂಗ್ ಕ್ರೀಡೆಯತ್ತ ಆಕರ್ಷಿತರಾಗಿದ್ದರು. ಇದರಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತಾ ಸ್ಟಂಟ್ ರೈಡಿಂಗ್ ಯೂರೋಕಪ್ ಅನ್ನು ತನ್ನದಾಗಿಸಿಕೊಂಡಿದ್ದಾರೆ. ಕೇವಲ 10 ವರ್ಷದವರಾಗಿದ್ದಾಗಲೇ ಅರಾಸ್ ಮೋಟಾರ್ ಬೈಕ್ ಮೇಲೆ ಸಾಹಸ ಮಾಡುತ್ತಾ ಬೈಕ್ ಚಲಾಯಿಸುವುದನ್ನು ಕಲಿತ್ತಿದ್ದರು. ಆದರೆ, ದ್ವಿಚಕ್ರ ವಾಹನ ಪರೀಕ್ಷೆ ಉತ್ತೀರ್ಣರಾಗಲಿಲ್ಲ.

ಇದಕ್ಕೆ ಸುಮ್ಮನಾಗದ ಅರಾಸ್, ಆಟದ ಮೈದಾನಕ್ಕೆ ಹೋಗಿ ಅಲ್ಲಿ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸ್ ಅನ್ನು ಅಭ್ಯಾಸ ಮಾಡತೊಡಗಿದರು. ಇಲ್ಲಿ ಮುಂದಿನ ಚಕ್ರದಿಂದಲೇ ಬೈಕ್ ಚಲಾಯಿಸುವುದನ್ನು ಕರಗತ ಮಾಡಿಕೊಂಡರು. ಇದಾದ ಬಳಿಕ ಅವರು ತಮ್ಮ ನೈಪುಣ್ಯತೆಯ ವಾಹನ ಸವಾರಿಯಿಂದ ಹಿಂದೆ ತಿರುಗಿ ನೋಡಲಿಲ್ಲ. ಹತ್ತು ಹಲವಾರು ಪ್ರಶಸ್ತಿಗಳು, ಪ್ರಶಂಸೆಗಳನ್ನು ಗಿಟ್ಟಿಸಿಕೊಂಡರು. ಇದೇ ಗೌರವದಿಂದ ಜಗತ್ತಿನ ಅತ್ಯುತ್ತಮ ಸ್ಟಂಟ್ ಮ್ಯಾನ್ ಎಂಬ ಬಿರುದನ್ನೂ ಪಡೆದರು.

-
-
-
-
-
-
-
-
-
-
-
-
ಅರಾಸ್ ಗಿಬಿಯೆಝ! ಅಬ್ಬಬ್ಬಾ ಅದೆಂತಹ ಸ್ಟಂಟ್!

ಅರಾಸ್ ಗಿಬಿಯೆಝ! ಅಬ್ಬಬ್ಬಾ ಅದೆಂತಹ ಸ್ಟಂಟ್!

-

2014ರಲ್ಲಿ ಲೂಥನಿಯಾದಲ್ಲಿ ಯುರೋ ಕಪ್ ಗೆದ್ದ ಬಳಿಕ ವಿಶ್ವದೆಲ್ಲೆಡೆ ಸ್ಟಂಟ್ ರೈಡ್ ಟೂರ್ ಹೊರಡಲು ಆರಂಭಿಸಿದರು. ಇದಕ್ಕೂ ಮುನ್ನ ಯುಕೆ, ಬಲ್ಗೇರಿಯಾದಲ್ಲಿ ಸತತವಾಗಿ ಚಾಂಪಿಯನ್ ಶಿಪ್ ಗೆದ್ದಿದ್ದ ಅರಾಸ್ ಇಂದು ಸ್ಟಂಟ್ ಬೈಕ್ ರೈಡರ್ ಗಳ ಸ್ಪೂರ್ತಿಯಾಗಿದ್ದಾರೆ.[ಇನ್ನಷ್ಟು ಚಿತ್ರಗಳನ್ನು ನೋಡಲು ಕ್ಲಿಕ್ ಮಾಡಿ]

26 ವರ್ಷದ ಈ ಯುವಕ 'ಬನ್ನಿ ಹಾಪ್ಸ್' ಮತ್ತು '360 ಡಿಗ್ರಿ' ಕೋನದಲ್ಲಿ ವ್ಹೀಲಿಂಗ್'ನಲ್ಲಿ ಪ್ರಸಿದ್ಧಿ ಪಡೆದವರು. ಇದರ ಜತೆಗೆ ಇನ್ನೂ ಹಲವಾರು ಸ್ಟಂಟ್‍ಗಳ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅರಾಸ್ ಚಂಡೀಗಢ, ಜೈಪುರ, ಅಹ್ಮದಾಬಾದ್, ಸೂರತ್, ಪುಣೆ, ಮಂಗಳೂರು, ಕೊಯಮತ್ತೂರು, ಕೊಚ್ಚಿನ್, ಶಿಲ್ಲಾಂಗ್, ಕೋಲ್ಕತ್ತಾ, ಗುವಾಹತಿ ಮತ್ತು ಹೈದ್ರಾಬಾದ್ ನಗರಗಳಲ್ಲಿ ಕಳೆದ ವರ್ಷ ಸ್ಟಂಟ್ ಪ್ರದರ್ಶನ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In pictures : Lithuanian athlete and two-time European Stunt Riding Champion, Aras Gibieza performed at Mahadevapura, Bengaluru as part of the ‘Suzuki Gixxer Day tour’,
Please Wait while comments are loading...