ಚಿತ್ರಗಳು : ಕೆಂಗೇರಿಯಲ್ಲಿ ರಸ್ತೆ ಜಲಾವೃತ, ಮೀನು ಹಿಡಿದ ಜನರು

Posted By: Gururaj
Subscribe to Oneindia Kannada
   Bengaluru rain : overflowing Vrishabhavati floods mysore road kengeri | Oneindia Kannada

   ಬೆಂಗಳೂರು, ಸೆಪ್ಟೆಂಬರ್ 10 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಾಗಿದೆ. ಕೆಂಗೇರಿಯಲ್ಲಿ ವೃಷಭಾವತಿ ಉಕ್ಕಿ ಹರಿದಿದ್ದು, ರಸ್ತೆ ಜಲಾವೃತವಾಗಿತ್ತು. ಬಸ್ಸು, ಕಾರುಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ.

   In Pics:ಬೆಂಗಳೂರು ಮಳೆ, ಕೆರೆಯಂತಾದ ರಸ್ತೆಗಳು

   ನಗರದ ಕೋರಮಂಗಲ, ನಾಯಂಡಹಳ್ಳಿ, ಮಾಗಡಿ ರಸ್ತೆ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಮುಂತಾದ ಕಡೆ ಭಾರೀ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡಿದರು. ಅಗ್ನಿ ಶಾಮಕ ದಳದ ಸಿಬ್ಬಂದಿ ನೀರು ಸರಾಗವಾಗಿ ಹರಿದು ಹೋಗಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

   ಇನ್ನೂ ಮೂರುದಿನ ಮಳೆ, ಜಲಾಶಯದ ನೀರಿನ ಮಟ್ಟ

   ತಡರಾತ್ರಿ 11 ಗಂಟೆ ವೇಳೆಗೆ ಆರಂಭವಾದ ಮಳೆ ಮುಂಜಾನೆ 4 ಗಂಟೆಯ ತನಕ ಸುರಿದಿದೆ. ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪ ಇನ್ಫೋಸಿಸ್ ಕ್ಯಾಂಪಸ್‌ನ 6ನೇ ಗೇಟ್ ಬಳಿ ಕಾಂಪೌಂಡ್ ಗೋಡೆ ಕುಸಿದು ಕ್ಯಾಂಪಸ್‌ಗೆ ನೀರು ನುಗ್ಗಿದೆ.

   ಬೆಂಗಳೂರಲ್ಲಿ ಮಳೆ, ಕೆಂಗೇರಿಯಲ್ಲಿ ರಸ್ತೆ ಜಲಾವೃತ

   ಮೈಸೂರು ರಸ್ತೆಯಲ್ಲಿ ಆರ್.ಆರ್.ನಗರದಿಂದ ಕೆಂಗೇರಿ ಬಸ್ ನಿಲ್ದಾಣದ ತನಕ ಸಾಗುವ ರಸ್ತೆಯಲ್ಲಿ 6 ಅಡಿ ನೀರು ನಿಂತಿತ್ತು. ಇದರಿಂದಾಗಿ ಬಸ್ ಮತ್ತು 4 ಕಾರುಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ರಸ್ತೆಯ ಚಿತ್ರಗಳು ಇಲ್ಲಿವೆ....

    ಉಕ್ಕಿ ಹರಿದ ವೃಷಭಾವತಿ

   ಉಕ್ಕಿ ಹರಿದ ವೃಷಭಾವತಿ

   ಮೈಸೂರು ರಸ್ತೆಯ ಕೆಂಗೇರಿ ಬಳಿ ವೃಷಭಾವತಿ ಕಾಲುವೆ ಉಕ್ಕಿ ಹರಿದಿದ್ದು ಮೈಸೂರು ರಸ್ತೆ ಜಲಾವೃತವಾಗಿತ್ತು. ಇದರಿಂದಾಗಿ ಮುಂಜಾನೆ ವಾಹನ ಸವಾರರು ಪರದಾಡಿದರು.

    ಕೆರೆಯಂತಾದ ರಸ್ತೆಗಳು

   ಕೆರೆಯಂತಾದ ರಸ್ತೆಗಳು

   ಮಳೆ ನೀರು ತುಂಬಿದ ಕಾರಣ ಕೆಂಗೇರಿ ಬಳಿ ರಸ್ತೆ ಕೆರೆಯಂತಾಗಿತ್ತು. ವಾಹನ ಸವಾರರು ಸಂಚಾರ ನಡೆಸಲು ಪರದಾಡಿದರು.

    ಮೀನು ಹಿಡಿದ ಜನರು

   ಮೀನು ಹಿಡಿದ ಜನರು

   ರಸ್ತೆಯಲ್ಲಿ ತುಂಬಿದ್ದ ನೀರಿನಲ್ಲಿ ಜನರು ಮೀನು ಹಿಡಿದರು. ಬೆಳಗ್ಗೆ 10.30ರ ವೇಳೆಗೆ ನೀರು ಇಳಿಮುಖವಾಗಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿ ಆರಂಭವಾಗಿದೆ.

    36 ಜನರ ರಕ್ಷಣೆ

   36 ಜನರ ರಕ್ಷಣೆ

   ಆರ್.ವಿ.ಇಂಜಿನಿಯರಿಂಗ್ ಕಾಲೇಜು ಬಳಿ ನೀರಿನಲ್ಲಿ ಸಿಲುಕಿದ್ದ 36 ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು.

    ಮುಳುಗಿದ ವಾಹನಗಳು

   ಮುಳುಗಿದ ವಾಹನಗಳು

   ಕೆಂಗೇರಿ ಬಳಿ ಮೋರಿಯ ನೀರು ನುಗ್ಗಿದ್ದರಿಂದ ಬಸ್, ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ.

    ರಸ್ತೆ ತುಂಬಾ ಮಣ್ಣು

   ರಸ್ತೆ ತುಂಬಾ ಮಣ್ಣು

   ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ರಸ್ತೆಗಳ ತುಂಬಾ ಮಣ್ಣು ತುಂಬಿಕೊಂಡಿದೆ. ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

    ಮೆಟ್ರೋ ಕಾಮಗಾರಿಗೆ ತೊಂದರೆ

   ಮೆಟ್ರೋ ಕಾಮಗಾರಿಗೆ ತೊಂದರೆ

   ಸಂಪೂರ್ಣ ರಸ್ತೆ ಜಲಾವೃತವಾಗಿದ್ದರಿಂದ ನಮ್ಮ ಮೆಟ್ರೋ ಕಾಮಗಾರಿಗೂ ತೊಂದರೆ ಉಂಟಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Heavy rains lashed Bengaluru on Saturday, September 9, 2017 with flooding reported from several parts of the city. Here are the photos of Kengeri, Bengaluru-Mysuru road.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ