ಮೋದಿ ನಡೆ ಪರವಾಗಿ ಯುವ ಬ್ರಿಗೇಡ್ ಸಂಭ್ರಮ ದಿವಸದ ಚಿತ್ರಗಳು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಸೋಮವಾರ (ನವೆಂಬರ್ 28) ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳ ಪಾಲಿಗೆ ಆಕ್ರೋಶ್ ದಿವಸ್. ನೋಟು ರದ್ದು ಮಾಡಿದ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಗಳಾಗುತ್ತಿವೆ. ನಿರ್ಧಾರಕ್ಕೆ ಸಂಬಂಧಿಸಿದ ವಿಚಾರಗಳ ಜಾರಿಯಲ್ಲಿ ಸರಕಾರ ಎಡವಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಈ ನಿರ್ಧಾರವನ್ನೇ ವಾಪಸ್ ಪಡೆಯಬೇಕು ಎಂಬ ಒತ್ತಾಯ ಹಲವರದು.

ಆದರೆ, ನಿರ್ಧಾರದ ಪರವಾಗಿ ಸೋಮವಾರದಂದು ಯುವ ಬ್ರಿಗೇಡ್ ನಿಂದ ಸಂಭ್ರಮ ದಿವಸ ಆಚರಿಸಲಾಗುತ್ತಿದೆ. ಈ ದಿನವನ್ನು ಕಾಮದಹನ, ದೀಪಾವಳಿ ಇತರೆ ಪರ್ವ ಕಾಲಕ್ಕೆ ಹೋಲಿಸಿ, ಕೆಟ್ಟದ್ದು ಕೊನೆಯಾಗಿದ್ದರ ಸಂಭ್ರಮವನ್ನು ಆಚರಿಸುವ ರೀತಿಯಲ್ಲಿ ಸಂಭ್ರಮ ದಿವಸ ಕಾಣುತ್ತಿದೆ.[ಆಕ್ರೋಶ ದಿನಕ್ಕೆ ಕ್ಯಾರೆ ಎನ್ನದ ಮಂಗಳೂರು ಜನ]

ಬೆಂಗಳೂರಿನ ಹಲವೆಡೆ ಯುವ ಬ್ರಿಗೇಡ್ ನೇತೃತ್ವದಲ್ಲಿ ಸಂಭ್ರಮ ದಿವಸ ಆಚರಣೆ ನಡೆಯುತ್ತಿದೆ. ಕಪ್ಪುಹಣದ ನಿರ್ಮೂಲನೆ ದೇಶದ ಪಾಲಿಗೆ ಮಹತ್ವದ ಕೆಲಸ. ಇಂಥ ಮಹತ್ತರ ಕೆಲಸ ನಡೆಯುವುದನ್ನು ಪರ್ವ ಕಾಲ ಎನ್ನಬೇಕಾಗುತ್ತದೆ. ಆದ್ದರಿಂದ ಈ ರೀತಿ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಯುವ ಬ್ರಿಗೇಡ್ ಹೇಳಿಕೊಂಡಿದೆ.

ಯುವಕರಿಗೆ ತಿಲಕ

ಯುವಕರಿಗೆ ತಿಲಕ

ಯುವ ಬ್ರಿಗೇಡ್ ಆಯೋಜಿಸಿದ್ದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಭ್ರಮ ದಿವಸ್ ಕಾರ್ಯಕ್ರಮದಲ್ಲಿ ಮಹಿಳೆಯರು ಯುವಕರಿಗೆ ತಿಲಕವಿಟ್ಟರು

ಇದು ಯುದ್ಧವಲ್ಲ

ಇದು ಯುದ್ಧವಲ್ಲ

ಯುವ ಬ್ರಿಗೇಡ್ ನೀಡಿರುವ ಕರೆಯಲ್ಲಿ ಇದು ಯುದ್ಧವಲ್ಲ ರಾಷ್ಟ್ರೀಯತೆಯ ಹಬ್ಬ ಎಂಬ ಒಕ್ಕಣೆಯಿದೆ

ಭವ್ಯ ಭಾರತ ಕಟ್ಟೋಣ

ಭವ್ಯ ಭಾರತ ಕಟ್ಟೋಣ

ಐನೂರು, ಸಾವಿರದ ನೋಟು ನಿಷೇಧದ ನಂತರ ಪತರಗುಟ್ಟಿರುವ ಪ್ರತಿಪಕ್ಷಗಳ ಕೆಲವರು ನವೆಂಬರ್ 28ರಂದು 'ಆಕ್ರೋಶ ದಿವಸ'ದ ಮೂಲಕ 'ಭಾರತ್ ಬಂದ್' ಆಚರಿಸಲು ಕರೆ ಕೊಟ್ಟಿದ್ದಾರೆ ಎಂದು ಆರಂಭವಾಗಿರುವ ಪತ್ರ ಬನ್ನು ಜೊತೆಗುಡೋಣ. ದೇಶವಿರೋಧಿ ಶಕ್ತಿಗಳನ್ನು ಸೋಲಿಸಿ ಭ್ರಷ್ಟಾಚಾರಮುಕ್ತ ಭವ್ಯ ಭಾರತ ಕಟ್ಟೋಣ!! ಎಂದು ಕೊನೆಯಾಗುತ್ತದೆ.

ಮಹಿಳಾ ಬ್ರಿಗೇಡ್

ಮಹಿಳಾ ಬ್ರಿಗೇಡ್

ಬೆಂಗಳೂರಿನಲ್ಲಿ ಯುವ ಬ್ರಿಗೇಡ್ ಆಚರಿಸಿದ ಸಂಭ್ರಮ ದಿವಸದಲ್ಲಿ ಮಹಿಳೆಯರು ಕಂಡುಬಂದಿದ್ದು ಹೀಗೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
November 28th (Monday) Yuva brigade celebrating Sambrhma diwasa in Bengaluru supporting Prime minister Narendra Modi demonetisation move.
Please Wait while comments are loading...