ಚಿತ್ರಸಂತೆಯ ಬಣ್ಣದ ಚಿತ್ತಾರದಲ್ಲಿ ಮಿಂದೆದ್ದ ಕಲಾರಸಿಕರು

Posted By:
Subscribe to Oneindia Kannada

ಬೆಂಗಳೂರು, ಜನವರಿ 15: ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ 14ನೇ ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಸಂತೆಯಲ್ಲಿ ಸುತ್ತಾಡಿ ಬಂದರು.

ಸಂತೆಯಲ್ಲಿ ಓಡಾಡಿದ ಕಲಾರಸಿಕರು ಬಣ್ಣದ ಚಿತ್ತಾರದ ಸೊಬಗಿಗೆ ಬೆರಗಾಗಿದರು. ಸರಿ ಸುಮಾರು 1300ಕ್ಕೂ ಅಧಿಕ ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಕುಮಾರಕೃಪಾ ರಸ್ತೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಗಿಲ ಮಾದರಿಯ ಮೇಲೆ ಬರೆಯುವ ಮೂಲಕ 14ನೇ ಚಿತ್ರಸಂತೆಯನ್ನು ಉದ್ಘಾಟಿಸಿದರು. ಚಿತ್ರಸಂತೆಯಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂತರ ಪರಿಸರ ಸ್ನೇಹಿ ವಾಹನವನ್ನು ಚಲಾಯಿಸಿ, ಕಲಾ ಪ್ರದರ್ಶನವನ್ನು ವೀಕ್ಷಿಸಿದರು. ಇದೇ ಸಂಧರ್ಭದಲ್ಲಿ ಕಲಾವಿದರೊಡನೆ ಸಂಭಾಷಿಸಿದರು. ಸಾಹಿತಿಗಳು, ಕಲಾವಿದರು ಮತ್ತು ರಾಜಕೀಯ ಗಣ್ಯರು ಮುಖ್ಯಮಂತ್ರಿಯವರ ಜೊತೆ ಇದ್ದರು.

ನಗರದ ಕುಮಾರಕೃಪಾ ರಸ್ತೆ ಮತ್ತೊಮ್ಮೆ ಬಣ್ಣದ ಚಿತ್ತಾರದಿಂದ ಮಿಂದೆದ್ದು ಕಂಗೊಳಿಸಿತು. ಕಲಾಸಕ್ತರ ಬಹುನಿರೀಕ್ಷಿತ 'ಚಿತ್ರಸಂತೆ' ಆಯೋಜನೆ ಮತ್ತೊಮ್ಮೆ ಯಶಸ್ವಿ ಕಲಾ ಪ್ರದರ್ಶನ, ಮಾರಾಟದ ಮೂಲಕ ನೆರವೇರಿತು.

ನೇಗಿಲ ಪ್ರತಿರೂಪದ ಮೇಲೆ ಸಹಿ

ನೇಗಿಲ ಪ್ರತಿರೂಪದ ಮೇಲೆ ಸಹಿ

ನೇಗಿಲ ಪ್ರತಿರೂಪದ ಮೇಲೆ ಸಹಿ ಹಾಕಿ, ರೈತ ನಿಲ್ಲದಿರೆ ಜಗತ್ತು ಇಲ್ಲ ಎಂದು ಸಾರುವ ಚಿತ್ರವನ್ನು ಸಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ. 14ನೇ ಚಿತ್ರಸಂತೆ ಉದ್ಘಾಟನೆ ವಿಭಿನ್ನವಾಗಿ ನಡೆಯಿತು.

1300ಕ್ಕೂ ಅಧಿಕ ಕಲಾವಿದರು

1300ಕ್ಕೂ ಅಧಿಕ ಕಲಾವಿದರು

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 1300ಕ್ಕೂ ಅಧಿಕ ಹವ್ಯಾಸಿ ಹಾಗೂ ವೃತ್ತಿನಿರತ ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರು. ಜ.15ರಂದು ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆ ತನಕ ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮ್ಯಾನರ್ ವೃತ್ತದವರೆಗೆ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

2 ಸಾವಿರಕ್ಕೂ ಅಧಿಕ ಕಲಾವಿದರು

2 ಸಾವಿರಕ್ಕೂ ಅಧಿಕ ಕಲಾವಿದರು

ಅಧಿಕೃತವಾಗಿ ಸುಮಾರು 2 ಸಾವಿರಕ್ಕೂ ಅಧಿಕ ಕಲಾವಿದರು ಈ ಬಾರಿ ಚಿತ್ರಸಂತೆಯಲ್ಲಿ ಅರ್ಜಿ ಹಾಕಿದ್ದರು. 1300 ಮಂದಿಗೆ ಅವಕಾಶ ಸಿಕ್ಕಿದೆ. ಕನಿಷ್ಠ 100 ರು.ನಿಂದ 1 ಲಕ್ಷ ರು ವರೆಗೆ ಕಲಾಕೃತಿಗಳು ಮಾರಾಟವಾಗುವ ಸಾಧ್ಯತೆ ಕಂಡು ಬಂದಿತು.

ಕಲಾವಿದರಿಗೆ ಊಟ, ತಿಂಡಿ, ವ್ಯವಸ್ಥೆ

ಕಲಾವಿದರಿಗೆ ಊಟ, ತಿಂಡಿ, ವ್ಯವಸ್ಥೆ

ಪರಸ್ಥಳದಿಂದ ಬರುವ ಕಲಾವಿದರಿಗೆ ಊಟ, ತಿಂಡಿ, ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವೇಶ ಶುಲ್ಕ 200 ರು ನಿಗದಿಪಡಿಸಲಾಗಿತ್ತು. ಆದರೆ, ಚಿತ್ರಸಂತೆ ಆರಂಭಕ್ಕೆ ಕೆಲ ದಿನಗಳು ಬಾಕಿ ಇದೆ ಎನ್ನುವಾಗಲೂ ಅರ್ಜಿ ಹಾಕಲು ಕಲಾವಿದರು ಮುಂದಾಗಿ ಬರುತ್ತಿದ್ದರು.

ವಿವಿಧ ರಾಜ್ಯಗಳ ಕಲಾವಿದರು

ವಿವಿಧ ರಾಜ್ಯಗಳ ಕಲಾವಿದರು

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಇನ್ನಿತರ ಕಡೆಗಳಿಂದ ಕಲಾವಿದರು ಈ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರು.

ಕ್ಷಣದಲ್ಲೇ ಭಾವಚಿತ್ರಗಳನ್ನು ಬಿಡಿಸಿಕೊಡುವ ಕಲಾವಿದ

ಕ್ಷಣದಲ್ಲೇ ಭಾವಚಿತ್ರಗಳನ್ನು ಬಿಡಿಸಿಕೊಡುವ ಕಲಾವಿದ

ಸಾಂಪ್ರದಾಯಿಕ ಮೈಸೂರು ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿ, ತೈಲ ಮತ್ತು ಜಲವರ್ಣದ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಜತೆಗೆ ಅಕ್ರಾಲಿಕ್, ಗಾಜಿನ ಮೇಲೆ ಬಿಡಿಸಿದ ಚಿತ್ತಾರಗಳು, ಕೊಲಾಜ್, ಲಿಥೋಗ್ರಾಫ್ ಚಿತ್ರಗಳನ್ನು ನೋಡಲು, ಕೊಳ್ಳಲು ಲಭ್ಯವಿತ್ತು. ಕ್ಷಣದಲ್ಲೇ ಭಾವಚಿತ್ರಗಳನ್ನು ಬಿಡಿಸಿಕೊಡುವ ಕಲಾವಿದರೂ ಚಿತ್ರಸಂತೆಯ ಆಕರ್ಷಣೆಯಾಗಿತ್ತು.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chitrakala Parishath organized 'Chitra Santhe' held on January 15, 2017. Chitra santhe is a day long art fair at Kumarakrupa road, Bengaluru.
Please Wait while comments are loading...