ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗುಂಡಿಯಲ್ಲಿ ಗಿಡ ನೆಟ್ಟ ಬಿಜೆಪಿ ನಾಯಕರು!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12 : ಕರ್ನಾಟಕ ಬಿಜೆಪಿ ನಾಯಕರು ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ಮಳೆಯಿಂದ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ವೀಕ್ಷಣೆಗೆ ನಗರ ಪ್ರದಕ್ಷಿಣೆ ನಡೆಸಲಾಗುತ್ತಿದೆ.

ಗುರುವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ನಾಯಕರು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಬೆಂಗಳೂರು ನಗರದ ಶಾಸಕರು, ಬಿಬಿಎಂಪಿ ಸದಸ್ಯರು ಯಡಿಯೂರಪ್ಪ ಜೊತೆಗಿದ್ದಾರೆ.

ಬೆಂಗಳೂರು ರಸ್ತೆ ಗುಂಡಿಗಳು, ಓದುಗರು ಕಳಿಸಿದ ಚಿತ್ರಗಳುಬೆಂಗಳೂರು ರಸ್ತೆ ಗುಂಡಿಗಳು, ಓದುಗರು ಕಳಿಸಿದ ಚಿತ್ರಗಳು

ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ವಿವಿಧ ನಾಯಕರು ಬೆಂಗಳೂರು ನಗರದ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದಾರೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ವಿವಿಧ ಬಡಾವಣೆಗಳಲ್ಲಿನ ರಸ್ತೆಗುಂಡಿಗಳನ್ನು ನಾಯಕರು ವೀಕ್ಷಿಸಲಿದ್ದಾರೆ.

'ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್‌ಗೆ ಹುಂಡಿ ಭಾಗ್ಯ''ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್‌ಗೆ ಹುಂಡಿ ಭಾಗ್ಯ'

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ನಗರ ಪ್ರದಕ್ಷಿಣೆ ಆರಂಭವಾಗಿದೆ. ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟು, ಬಣ್ಣ ಬಳಿದು ನಾಯಕರು ಬಿಬಿಎಂಪಿ ಗಮನ ಸೆಳೆಯುತ್ತಿದ್ದಾರೆ. ರಸ್ತೆ ದುರಸ್ಥಿ ಕಾರ್ಯವನ್ನು ಕೈಗೊಳ್ಳದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ...

ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಕಾರ್ಯಪಡೆ ರಚನೆಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಕಾರ್ಯಪಡೆ ರಚನೆ

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಬೆಂಗಳೂರು ನಗರ ಪ್ರದಕ್ಷಿಣೆ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಇದುವರೆಗೂ ನಗರದ ರಸ್ತೆಗಳಿಗೆ 400 ಕೋಟಿ ಹಣ ಖರ್ಚು ಮಾಡಲಾಗಿದೆ. 100 ಕೋಟಿ ಸಾಲ ಪಡೆಯಲಾಗಿದೆ. ಆದರೂ ನಗರದ ರಸ್ತೆಗಳ ಸ್ಥಿತಿ ಹೀಗಿದೆ. ಇದು ಸಿದ್ದರಾಮಯ್ಯ ಸರ್ಕಾರದ ಆಡಳಿತದ ಫಲ' ಎಂದು ಆರೋಪಿಸಿದರು.

ಗಿಡ ನೆಟ್ಟ ಬಿಜೆಪಿ ನಾಯಕರು

ಗಿಡ ನೆಟ್ಟ ಬಿಜೆಪಿ ನಾಯಕರು

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಅಂಡರ್ ಪಾಸ್ ಬಳಿ ರಸ್ತೆಯ ಸ್ಥಿತಿಯನ್ನು ನಾಯಕರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಗಮನ ಸೆಳೆಯಲು ರಸ್ತೆಗುಂಡಿಯಲ್ಲಿ ಗಿಡ ನೆಟ್ಟು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ರಸ್ತೆ ಗುಂಡಿಗೆ ಬಣ್ಣ ಬಳಿದರು

ರಸ್ತೆ ಗುಂಡಿಗೆ ಬಣ್ಣ ಬಳಿದರು

ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮುಂದಿನ ರಸ್ತೆ ಗುಂಡಿಗೆ ಬಿಜೆಪಿ ನಾಯಕರು ಬಣ್ಣ ಬಳಿದರು. ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೀರು ನಿಲ್ಲುವ ಸ್ಥಳ ಪರಿಶೀಲನೆ

ನೀರು ನಿಲ್ಲುವ ಸ್ಥಳ ಪರಿಶೀಲನೆ

ಅಂಡರ್‌ ಪಾಸ್‌ಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದ ನಾಯಕರು, ಮಳೆ ಬಂದರೆ ನೀರು ನಿಲ್ಲುವುದನ್ನು ವೀಕ್ಷಿಸಿದರು.

English summary
Karnataka BJP leaders Bengaluru rounds to inspect pothole in city roads. On October 12, 2017 BJP state president B.S.Yeddyurappa and other leaders begins city rounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X