ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ 24 ದಿನಗಳಲ್ಲಿ ಬೆಂಗಳೂರಲ್ಲಿ 376 ಮಿ.ಮೀ. ಮಳೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಕಳೆದ 24 ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 376.7 ಮಿ.ಮೀ. ಮಳೆಯಾಗಿದ್ದು, ಇಷ್ಟು ಅಲ್ಪ ಕಾಲಾವಧಿಯಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿರುವುದು ಕಳೆದ 35 ವರ್ಷಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಸೆಪ್ಟೆಂಬರ್ 1ರಿಂದ 24ರವರೆಗಿನ ಅವಧಿಯಲ್ಲಿ ಈ ಪ್ರಮಾಣದ ಮಳೆಯಾಗಿರುವುದು ವಿಶೇಷ.

ರೋಣ: ನಿರಂತರ ಮಳೆಯಿಂದಾಗಿ ಉಕ್ಕಿ ಹರಿದ ಬೆಣ್ಣೆಹಳ್ಳ, ಪ್ರವಾಹದ ಭೀತಿರೋಣ: ನಿರಂತರ ಮಳೆಯಿಂದಾಗಿ ಉಕ್ಕಿ ಹರಿದ ಬೆಣ್ಣೆಹಳ್ಳ, ಪ್ರವಾಹದ ಭೀತಿ

1986ರಲ್ಲಿ ಇದೇ ಅವಧಿಯಲ್ಲಿ 516.6 ಮಿ.ಮೀ. ನಷ್ಟು ಮಳೆಯಾಗಿತ್ತು. ಈ ದಾಖಲೆ ಇನ್ನೂ ಜೀವಂತವಾಗಿದೆಯಾದರೂ, ಕಳೆದ 24 ದಿನಗಳಲ್ಲಿ ಬಂದ ಮಳೆ ಕಳೆದ ಮೂವತ್ತು ವರ್ಷಗಳಲ್ಲೇ ಬೆಂಗಳೂರು ಕಂಡ ಅಪಾರ ವರ್ಷಧಾರೆಯಾಗಿದೆ.

IN JUST 24 DAYS, BENGALURU RECEIVED 376.7 MM OF RAINFALL

ಸಾಮಾನ್ಯವಾಗಿ, ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿಯಾಗಿ 211.5 ಮಿ.ಮೀ. ಮಳೆ ಸುರಿಯುತ್ತದೆ. ಆದರೆ, ಈ ವರ್ಷ ಅತಿ ಹೆಚ್ಚು ಮಳೆ ಸುರಿದಿದೆ. ಕಳೆದ 24 ದಿನಗಳ ಅವಧಿಯಲ್ಲಿ ಸೆ. 1ರಂದು ಸುರಿದ ಮಳೆಯ ಪ್ರಮಾಣವೇ ಅತ್ಯಧಿಕ (72 ಮಿ.ಮೀ) ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆಯೇ ವರುಣನ ಆರ್ಭಟಬೆಂಗಳೂರಿನಲ್ಲಿ ಸೋಮವಾರ ಮುಂಜಾನೆಯೇ ವರುಣನ ಆರ್ಭಟ

2016ರ ಇದೇ ಅವಧಿಯಲ್ಲಿ ಉದ್ಯಾನ ನಗರಿಯಲ್ಲಿ 332 ಮಿ.ಮೀ. ಮಳೆಯಾಗಿತ್ತು. ಆನಂತರ, 2000ದ ಇಸವಿಯಲ್ಲಿ 300 ಮಿ.ಮೀ. ಮಳೆಯಾಗಿತ್ತು.

English summary
Within 24 days, September 1 to September 24, the city has received 376.7 mm of rainfall and this has been a record in last thirty years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X