ಕೆಎಫ್ ಸಿಯಿಂದ ಹೊಸ ಆಫರ್ ತಿನ್ನಬಲ್ಲ 'ರೈಸ್ ಬೌಲ್'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 29: ನೀವು ಈ ರೆಸ್ಟೋರೆಂಟ್ ಗಳಿಗೆ ಹೋದರೆ, ಅಲ್ಲೊಂದು ಆಶ್ಚರ್ಯ ಕಾದಿರುತ್ತದೆ. ನೀವು ಆಯ್ಕೆ ಮಾಡಿಕೊಂಡ ಖಾದ್ಯವನ್ನು ಒಂದು ಬೌಲ್ ನಲ್ಲಿ ಹಾಕಿಕೊಡುತ್ತಾರೆ. ಆ ಖಾದ್ಯವನ್ನು ತಿನ್ನುತ್ತೀರಿ. ನಂತರ ಅಪ್ಪಿತಪ್ಪಿಯೂ ಆ ಬೌಲನ್ನು ಎಸೆಯದಿರಿ. ಆಶ್ಚರ್ಯವಾಯಿತೇ? ಆ ಖಾದ್ಯದ ಜತೆ ಅಥವಾ ಖಾದ್ಯ ತಿಂದ ನಂತರ ನೀವು ಆ ಬೌಲನ್ನೂ ತಿನ್ನಬಹುದು.

ಇಂತಹ ವಿನೂತನವಾದ ಸೇವೆಯನ್ನು ಕೆಎಎಫ್ ಸಿ ತನ್ನ ಸಿಎಂಎಚ್ ರಸ್ತೆ ಮತ್ತು ಮಂತ್ರಿಮಾಲ್ ನ ಅಂಡರ್ ಗ್ರೌಂಡ್ ನಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ಪರಿಚಯಿಸಿದೆ. ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬದಲಾಗಿ ತಿನ್ನುವಂತಹ ಬೌಲನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ಸೌಲಭ್ಯ ಗುರುವಾರದಿಂದ ಜಾರಿಗೆ ಬಂದಿದೆ.

ಶೇ. 100 ಕ್ಕೆ ನೂರರಷ್ಟು ತಿನ್ನಬಹುದಾದ ಈ ಕೆಎಫ್‍ಸಿ ರೈಸ್‍ಬೌಲ್ ಪ್ಲಾಸ್ಟಿಕ್ ಬೌಲ್‍ಗೆ ಪರ್ಯಾಯವಾಗಿದೆ. ಕುರುಕಲು ರೀತಿಯ ಈ ರೊಟ್ಟಿಯಂತಿರುವ ಕೆಎಫ್ ಸಿ ರೈಸ್ ಬೌಲ್ ಚಿಕನ್, ಅನ್ನ ಮತ್ತು ಗ್ರೇವಿಯನ್ನು ಹೊಂದಿರುತ್ತದೆ. ರುಚಿಕಟ್ಟಾದ ಈ ಖಾದ್ಯ ನಿಮ್ಮ ಬಾಯಲ್ಲಿ ನೀರೂರಿಸದೇ ಇರಲಾರದು. ವಿಶೇಷವಾದ ಹಿಟ್ಟಿನಿಂದ ಚೆನ್ನಾಗಿ ಬೇಯಿಸಿ ಈ ರೈಸ್ ಬೌಲನ್ನು ಶುದ್ಧ ವಾತಾವರಣದಲ್ಲಿ ಸಿದ್ಧಪಡಿಸಲಾಗುತ್ತದೆ.

In a first, KFC tests edible ‘Rice Bowlz’ priced at Rs 89 in Bengaluru

ಈ ಬಗ್ಗೆ ಮಾಹಿತಿ ನೀಡಿರುವ ಕೆಎಫ್‍ಸಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶಿಂಧೆ, 'ನಮ್ಮದು ಒಂದು ಸಾಮಾಜಿಕ ಮತ್ತು ಪರಿಸರ ಕಾಳಜಿ ಇರುವ ಸಂಸ್ಥೆಯಾಗಿದ್ದು, ನಾವು ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ದೀರ್ಘಕಾಲೀನ ಪರಿಹಾರವಾಗಿ ಈ ರೈಸ್ ಬೌಲ್ ಅನ್ನು ಪರಿಚಯಿಸಿದ್ದೇವೆ. ಇದೊಂದು ಆವಿಷ್ಕಾರಕ ಮತ್ತು ರುಚಿಕಟ್ಟಾದ ಉಪಕ್ರಮವಾಗಿದ್ದು, ಗರಿಗರಿಯಾಗಿರುವ ರೊಟ್ಟಿಯಂತಹ ಬೌಲ್ ಪ್ಲಾಸ್ಟಿಕ್ ಗೆ ಸರಿಯಾದ ಪರ್ಯಾಯವಾಗಿದೆ.

ನಮ್ಮಲ್ಲಿನ ಖಾದ್ಯಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಖಾದ್ಯ ಎಂದರೆ ರೈಸ್ ಬೌಲ್. ಇದನ್ನು ಮತ್ತಷ್ಟು ಜನಪ್ರಿಯ ಮತ್ತು ರುಚಿಕಟ್ಟು ಮಾಡಲು ನಾವು ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಈ ಸೇವೆಯನ್ನು ಬೆಂಗಳೂರಿನ ಆಯ್ದ ಕೆಎಎಫ್ ಸಿ ಸ್ಟೋರ್ ಗಳಲ್ಲಿ ಪರೀಕ್ಷಾರ್ಥವಾಗಿ ಒದಗಿಸುತ್ತಿದ್ದು, ಗ್ರಾಹಕರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ'' ಎಂದು ತಿಳಿಸಿದರು.

ಈ ಕೆಎಎಫ್ ಸಿಯ ಹೊಸ ಅವತಾರದಂತಿರುವ ರೈಸ್ ಬೌಲ್ ವೆಜ್ ಮತ್ತು ನಾನ್ವೆಜ್ ನಲ್ಲಿ ಲಭ್ಯವಿದ್ದು, ಬೆಲೆ ರೂಪಾಯಿ 89/- ರಿಂದ ಆರಂಭವಾಗಲಿದೆ. ಏಪ್ರಿಲ್ 28 ರಿಂದ ಮೇ 04 ರ ತನಕ ಈ ಆಫರ್ ಜಾರಿಯಲ್ಲಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Something interesting is cooking at KFC (Kentucky Fried Chicken). Starting Thursday, KFC will be testing edible Rice Bowlz at two of its restaurants in Bengaluru.
Please Wait while comments are loading...