ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಪರಿಚಯಸ್ಥರಿಂದಲೇ ಅತ್ಯಾಚಾರ ಪ್ರಕರಣ!

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19 : ಬೆಂಗಳೂರು ನಗರದಲ್ಲಿ ಸಂಭವಿಸುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಸಂಬಂಧಿಗಳಿಗೇ ಆರೋಪಿಗಳಾಗಿರುವ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ, ವಿಡಿಯೋ ತೆಗೆದ ಪಾಪಿಗಳು

2015 ಕ್ಕೆ ಹೋಲಿಸಿದರೆ 2016 ಶೇಕಡಾ 166 ರಷ್ಟು ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾಹಿತಿ ಪೊಲೀಸ್ ದಾಖಲೆಗಳಿಂದ ತಿಳಿದುಬಂದಿದೆ. 2017 ರ ನವೆಂಬರ್ 30 ರ ಅಂತ್ಯದ ವೇಳೆಗೆ ಬೆಂಗಳೂರು ನಗರದಲ್ಲಿ 16 ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಅವರ ಸಂಬಂಧಿಗಳೇ ಅತ್ಯಾಚಾರ ವೆಸಗಿದ ಆರೋಪಿಗಳಾಗಿದ್ದರು.

In Bengaluru, rapes by relatives increase

ಅದೇ ರೀತಿ 2015 ರಲ್ಲಿ ಎಂಟು ಪ್ರಕರಣ ಹಾಗೂ 2016ರಲ್ಲಿ 6 ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ್ ಸಂಬಂಧಿಗಳೆ ಆರೋಪಿಗಗಳಾಗಿದ್ದರು. ಇನ್ನು 2015ರಲ್ಲಿ ಸಂಭವಿಸಿದ ಒಟ್ಟು 35 ಪ್ರಕರಣಗಳಲ್ಲಿ ಅವರ ಸಂಬಂಧಿಗಳು ಅತ್ಯಾಚಾರ ವೆಸಗಿದ್ದರು ಎಂಬ ಮಾಹಿತಿ ಪೊಲೀಸ್ ದಾಖಲೆಗಳಿಂದ ತಿಳಿದು ಬಂದಿದೆ. ಇನ್ನು 2015 ರಲ್ಲಿ ಕ್ರಮವಾಗಿ 19 ಜನ ಹಾಗೂ 30 ಜನ ಸಂಬಂಧಿಗಳು ಹಾಗೂ ಪರಿಷಯಸ್ಥರಿಂದ ಹಾಗೂ ಪರಿಷಯಸ್ಥರಿಂದ ಅತ್ಯಚಾರ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ಅತ್ಯಾಚಾರದ ಬಹುತೇಕ ಪ್ರಕರಣಗಳಲ್ಲಿ ಅವರ ಸಂಬಂಧಿಗಳಿಂದಲೇ ಅತ್ಯಾಚಾರ ನಡೆದಿರುವುದು ಗೊತ್ತಾಗುತ್ತದೆ ಆದರೆ ಅನೇಕ ಜನ ಮಹಿಳೆಯರು ಅಸಹಾಯಕರು ಹಾಗೂ ಬಡತನದಿಂದ ಬಳಲುತ್ತಿರುವ ಕಾರಣಕ್ಕಾಗಿ ಇಂತಹ ಪ್ರಕರಣಗಳನ್ನು ಪೊಲೀಸರ ಎದುರು ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಅಥವಾ ಸಂಬಂಧಿಗಳ ಎದುರು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಬಂಧಿಗಳು, ಪರಿಚಯಸ್ಥರಿಂದಲೇ ಅತ್ಯಚಾರ ನಡೆಯುತ್ತಿರುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷೆ ವಿ.ಎಸ್. ಉಗ್ರಪ್ಪ.

ವಿವಾಹ ಪೂರ್ವ ನಡೆಯುವ ಅತ್ಯಚಾರ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದರೆ ಅನೇಕ ಜನರು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವುದು ಕಂಡುಬರುತ್ದೆ. 2017 ಒಂದರಲ್ಲಿ 74 ಮಹಿಳೆಯರು ಇಂತಹ ಮೋಸಕ್ಕೆ ಒಳಗಾಗಿರುವ ಪ್ರಕರಣಗಳು ದಾಖಲಾಗಿವೆ.

ಇನ್ನು 2015 ರಲ್ಲಿ85 ಪ್ರಕರಣಗಳು 2016 ರಲ್ಲಿ 56 ಪ್ರಕರಣಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ಇನ್ ರಿಲೇಷನ್ ಒಪ್ಪಿಸಿಕೊಂಡು ನಂತರ ನಾನಾ ನೆಪವೊಡ್ಡಿ ಮದುವೆಗು ಮುನ್ನವೇ ಸಂಬಂಧಗಳು ಮುರಿದು ಬೀಳುತ್ತಿದೆ.

ಈ ರೀತಿ ಪರಿಷಯಸ್ಥರು ಸಂಬಂಧಿಗಳು ಅಥವಾ ಕೆಲಸಕೊಡಿಸುವ ನೆಪದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುತತ್ಇರುವ ಪ್ರಕರಣಗಳು ಹೆಚ್ಚುತ್ತಿವೆಯಾದರೂ ಪತಿಯಿಂದಲೇ ಪತ್ನಿ ಮೇಲೆ ನಡೆಯುವ ದೌರ್ಜನ್ಯಗಳ ಪ್ರಕರಣಗಳು 2016 ಕ್ಕೆ ಹೋಲಿಸಿದರೆ 2017 ಕ್ಕೆ ಕಡಿಮೆಯಾಗಿವೆ. 2016 ರಲ್ಲಿ ಪತಿಯಿಂದಲೇ ಪತ್ನಿ ಮೇಲೆ ದೌರ್ಜನ್ಯ ನಡೆಸಿದ 487 ಪ್ರಕರಣಗಳು ದಾಖಲಾಗಿದ್ದರೆ 2017 ರಲ್ಲಿ ನವೆಂಬರ್ ಅಂತ್ಯದವರೆಗೆ 451 ಪ್ರಕರಣಗಳು ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The police records have revealed that number of rapes on women by their own relatives and known pwersons are drastically increased in last three years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ