ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವನಶೈಲಿ ತಂದ ಆಪತ್ತು:ಬೆಂಗಳೂರಿನ ಶೇ.15ರಷ್ಟು ಮಕ್ಕಳಿಗೆ ದೃಷ್ಟಿ ಸಮಸ್ಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಜೀವನಶೈಲಿ ಮಕ್ಕಳ ಬಾಳಿಗೆ ಕತ್ತಲು ತರುತ್ತಿದೆ. ಜಂಕ್ ಫುಡ್ ಸೇರಿದಂತೆ ವಿವಿಧ ರೀತಿಯ ಅನಾರೋಗ್ಯಕರ ಆಹಾರ ಸೇವನೆಯಿಂದ ನಗರದ ಖಾಸಗಿ ಶಾಲೆಯ ಶೇ.15ರಷ್ಟು ಮಕ್ಕಳು ದೃಷ್ಟಿ ದೋಷ ಮತ್ತು ಶೇ.21ರಷ್ಟು ಮಕ್ಕಳು ಅತಿಯಾದ ಬೊಜ್ಜಿನಿಂದ ಬಳಲುತ್ತಿದ್ದಾರೆ.

'ಆರೋಗ್ಯ ಕರ್ನಾಟಕ' ಯೋಜನೆಯ ಅನುಷ್ಠಾನ ಸರಳೀಕರಣ 'ಆರೋಗ್ಯ ಕರ್ನಾಟಕ' ಯೋಜನೆಯ ಅನುಷ್ಠಾನ ಸರಳೀಕರಣ

ರೈಬೋ ಹಾಸ್ಪಿಟಲ್ ಮತ್ತು ಅಡ್ರೆಸ್ ಹೆಲ್ತ್ ನಡೆಸಿದ ಅಧ್ಯಯನದಲ್ಲಿ ಕೆಲ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಕಡಿಮೆ ದೈಹಿಕ ಚಟುವಟಿಕೆಗಳಿಂದ ಆನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅಲ್ಲದೆ ಹಲವು ಮಕ್ಕಳು ಪತ್ತೆಯಾಗದ ಶ್ರವಣ ದೋಷದಿಂದ ಬಳಲುತ್ತಿದ್ದಾರೆ.

 ಖಾಸಗಿ ಶಾಲೆಗಳ ಮಕ್ಕಳ ಆರೋಗ್ಯ ಅಧ್ಯಯನ

ಖಾಸಗಿ ಶಾಲೆಗಳ ಮಕ್ಕಳ ಆರೋಗ್ಯ ಅಧ್ಯಯನ

ಜನವರಿಯಿಂದ ಅಕ್ಟೋಬರ್‌ವರೆಗೆ ನಗರದ 20ಕ್ಕೂ ಹೆಚ್ಚು ಖಾಸಗಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪುಟ್ಟ ಮಕ್ಕಳು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿ ಲಭ್ಯವಾಗಿದೆ.

15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ 15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ

ಪ್ರಾಥಮಿಕ ಮತ್ತು ಪ್ರೌಢಶಾಲೆ ಅಧ್ಯಯನ

ಪ್ರಾಥಮಿಕ ಮತ್ತು ಪ್ರೌಢಶಾಲೆ ಅಧ್ಯಯನ

ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವ ಶೇ.9ರಷ್ಟು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯಿದ್ದು, ಶೇ.12ರಷ್ಟು ಮಕ್ಕಳು ಅತಿಯಾದ ತೂಕದಿಂದ ಬಳಲುತ್ತಿದ್ದಾರೆ. ಹೆಚ್ಚು ಆದಾಯ ಹೊಂದಿರುವ ಪೋಷಕರ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದಿರುವುದು ಗಮನಾರ್ಹ ವಿಷಯವಾಗಿದೆ.

ದೃಷ್ಟಿಸಮಸ್ಯೆಯಿಂದ ಮಕ್ಕಳ ಬಳಲಿಕೆ

ದೃಷ್ಟಿಸಮಸ್ಯೆಯಿಂದ ಮಕ್ಕಳ ಬಳಲಿಕೆ

ಮತ್ತೊಂದು ಆತಂಕದ ಸಂಗತಿ ಏನೆಂದರೆ, ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಶೇ.15ರಷ್ಟು ಮಕ್ಕಳು ದೃಷ್ಟಿ ದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಕ್ಕಳಲ್ಲಿ ರಕ್ತಹೀನತೆ

ಮಕ್ಕಳಲ್ಲಿ ರಕ್ತಹೀನತೆ

ಶೇ.3.4ರಷ್ಟು ಮಕ್ಕಳಲ್ಲಿ ರಕ್ತ ಹೀನತೆ ಲಕ್ಷಣಗಳು ಕಂಡು ಬಂದಿದ್ದು, ಶೇ.30ರಷ್ಟು ಮಕ್ಕಳು ಹಲ್ಲು ನೋವಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಡ್ರೆಸ್ ಹೆಲ್ತ್ ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
A joint survey conducted by Rybo hospitals and Address Health has revealed that over 15 percents children suffered with eyesight problems in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X