ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲೇ ಮೊದಲ ಬಾರಿಗೆ ಗೂಡ್ಸ್ ರೈಲು ನಿಲ್ದಾಣಗಳ ನಿರ್ಮಾಣ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 27: ದೇಶದಲ್ಲೇ ಮೊದಲ ಬಾರಿಗೆ ಸರಕು ಸಾಗಣಿಕೆಗೆ ನೆರವಾಗುವಂತೆ ನೂರು ವಿಶೇಷ ವಿನ್ಯಾಸದ ರೈಲು ನಿಲ್ದಾಣ ಹಾಗೂ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ.

ಸುಮಾರು 82 ಸಾವಿರ ಕೋಟಿ ರೂ. ವಿಶೇಷ ಸರಕು ಸಾಗಣೆ ಯೋಜನೆಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಸುಮಾರು 3360 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಸರಕು ಸಾಗಣಿಕೆಗೆ ವಿಶೇಷವಾದ ನಿಲಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ರೈಲು ವಿಳಂಬದಿಂದ ತಪ್ಪಿದ ಪರೀಕ್ಷೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶರೈಲು ವಿಳಂಬದಿಂದ ತಪ್ಪಿದ ಪರೀಕ್ಷೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

ಪಶ್ಚಿಮ ಹಾಗೂ ಪೂರ್ವ ರೈಲ್ವೆ ವಲಯಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕೆಲಸ ನಡೆಯಲಿದೆ. ಯೋಜನೆಯಲ್ಲಿ 12 ಖಾಸಗಿ ಸರಕು ಟರ್ಮಿನಲ್, 15 ಸೈಡಿಂಗ್ಸ್, 10 ಶೆಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಶೆಡ್ ಗಳಲ್ಲಿ ವಾರ್ಷಿಕ 30 ಕೋಟಿ ಟನ್ ಸರಕು ಸಂಗ್ರಹಿಸಬಹುದಾಗಿದೆ.

In a first, railways to build 100 goods railway stations

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಈ ಯೋಜನೆ ಒಂಭತ್ತು ರಾಜ್ಯ ಹಾಗೂ 50 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಪಶ್ಚಿಮದಲ್ಲಿ 48 ಹಾಗೂ ಪೂರ್ವದಲ್ಲಿ 58 ನಿಲ್ದಾಣಗಳನ್ನು ಹೊಂದಲಿದೆ. ಖಾಸಗಿ ಸಹಭಾಗಿತ್ವದಲ್ಲಿ 2021ರ ಒಳಗೆ ಯೋಜನೆ ಅಂತ್ಯಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಯೋಜನೆ ಪೂರ್ಣವಾದ ನಂತರ ಈ ರೈಲುಗಳಿಗೆ ಹೊಸ ವೇಳಾಪಟ್ಟಿಯನ್ನು ತಯಾರಿಸಲಾಗುತ್ತದೆ.

English summary
In a first, Indian railways is constructing over 100 exclusive goods railway station exclusively for loading and unloading of goods in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X