ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆಯನ್ನು ತಗ್ಗಿಸಲು ನಮ್ಮ ಮೆಟ್ರೋ ಸಂಚಾರವನ್ನು ಅರಂಭಿಸಿದರೂ ಕೂಡ ಸಂಚಾರ ದಟ್ಟಣೆ ಕಡಿಮೆಯಾದಂತೆ ಕಾಣುತ್ತಿಲ್ಲ.

2017-18ನೇ ಸಾಲಿನಲ್ಲಿ 5.73 ಲಕ್ಷ ಹೊಸ ವಾಹನಗಳು ಬೆಂಗಳೂರು ರಸ್ತೆಗಿಳಿದಿವೆ, 2016ರಲ್ಲಿ ನಗರದಲ್ಲಿ 61.12 ಲಕ್ಷ ವಾಹನವಿತ್ತು, 2017ರ ಅಂತ್ಯಕ್ಕೆ ಏಕಾಏಕಿ 68.33 ಲಕ್ಷಕ್ಕೆ ಏರಿಕೆಯಾಗಿರುವುದು ಆತಂಕವನ್ನುಂಟು ಮಾಡಿದೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರುಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ವಾಹನ ಸಂಚಾರ ದಟ್ಟಣೆಯನ್ನು ಬೆಂಗಳೂರಲ್ಲಿ ತಗ್ಗಿಸುವ ನಿಟ್ಟಿನಲ್ಲಿ ಮೆಟ್ರೋವನ್ನು ಆರಂಭಿಸಿದ್ದಾರೆ, ದಿನಕ್ಕೆ ನಾಲ್ಕೈದು ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಕೂಡ ವಾಹನ ಸವಾರರಿದ್ದಾರೆ ಎಂದರೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

2017ರ ಜೂನ್‌ನಲ್ಲಿ ಮೆಟ್ರೋ ಮೊದಲನೇ ಹಂತ ಪೂರ್ಣ ಪ್ರಮಾಣದಲ್ಲಿ ಸಂಚಾರ ಮುಕ್ತವಾಯಿತು. 2018ರ ಮಾರ್ಚ್ ಅಂತ್ಯಕ್ಕೆ ನಗರದಲ್ಲಿ ವಾಹನ ನೋಂದಣಿ ಸಂಖ್ಯೆ 74.06 ಲಕ್ಷ ಮೀರಿದೆ.

 ಪ್ರತಿಯೊಂದು ಮನೆಯೂ ಕನಿಷ್ಠ ವಾಹನ ಹೊಂದಿರಬೇಕು

ಪ್ರತಿಯೊಂದು ಮನೆಯೂ ಕನಿಷ್ಠ ವಾಹನ ಹೊಂದಿರಬೇಕು

ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ವಾಹನಗಳಿರಬೇಕು, ಕೆಲವೊಮ್ಮೆ ಮನೆಯಲ್ಲಿ ಕೇವಲ ಇಬ್ಬರೇ ಮಂದಿಯಿದ್ದರೂ ನಾಲ್ಕೈದು ವಾಹನಗಳಿರುತ್ತವೆ. ಡೀಸೆಲ್‌ ವಾಹನಗಳ ನೋಂದಣಿಯನ್ನು ತಗ್ಗಿಸಬೇಕಾಗುತ್ತದೆ.

ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?

 ನಗರದಲ್ಲಿವೆ 66.84 ಲಕ್ಷ ಸಾರಿಗೇತರ ವಾಹನಗಳು

ನಗರದಲ್ಲಿವೆ 66.84 ಲಕ್ಷ ಸಾರಿಗೇತರ ವಾಹನಗಳು

14,32,374 ಕಾರುಗಳು, ಶೇ.9ರಷ್ಟಿ ಇತರೆ ವಾಹನಗಳು, ಶೇ.3ರಷ್ಟು ಆಟೋಗಳಿವೆ.ನಗರದಲ್ಲಿ ಖಸಗಿ ವಾಹನ ಸಂಖ್ಯೆಯೇ ಶೇ.90ರಷ್ಟಿದೆ.ಒಟ್ಟು 74.06 ಲಕ್ಷ ವಾಹನದಲ್ಲಿ 66.84 ಲಕ್ಷ ವಾಹನಗಳು ಸಾರಿಗೇತರ ವಾಹನಗಳಾಗಿವೆ.

ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯ ಪ್ರಮುಖ ಅಂಶಗಳು ಇಲ್ಲಿವೆಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯ ಪ್ರಮುಖ ಅಂಶಗಳು ಇಲ್ಲಿವೆ

 ಬೆಂಗಳೂರಲ್ಲಿ ದ್ವಿಚಕ್ರ ವಾಹನ ಪ್ರಮಾಣ ಹೆಚ್ಚು

ಬೆಂಗಳೂರಲ್ಲಿ ದ್ವಿಚಕ್ರ ವಾಹನ ಪ್ರಮಾಣ ಹೆಚ್ಚು

2012ರ ಮಾರ್ಚ್ ಅಂತ್ಯಕ್ಕೆ ನಗರದಲ್ಲಿ 28.67 ಲಕ್ಷ ದ್ವಿಚಕ್ರ ವಾಹನಗಳಿದ್ದವು, 5 ವರ್ಷ ಕಳೆದ ನಂತರ ಎಂದರೆ 2017ಕ್ಕೆ ಈ ಸಂಖ್ಯೆ 47.31 ಲಕ್ಷಕ್ಕೆ ಏರಿಕೆಯಾಗಿತ್ತು. ನಗರದಲ್ಲಿರುವ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಶೇ.69 ದ್ವಿಚಕ್ರ ವಾಹನಗಳಿವೆ. 2018ರ ಮಾರ್ಚ್‌ ಅಂತ್ಯಕ್ಕೆ ದ್ವಿಚಕ್ರ ವಾಹನಗಳ ಸಂಖ್ಯೆ 51.34 ಲಕ್ಷ ಮೀರಿದೆ.

 ಗುರಿಮೀರಿದ ವಾಹನಗಳು

ಗುರಿಮೀರಿದ ವಾಹನಗಳು

ವರ್ಷದಿಂದ ವರ್ಷಕ್ಕೆ ವಾಹನ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಇಲಾಖೆಗೆ ಆದಾಯ ಹೆಚ್ಚಳಕ್ಕೂ ಕಾರಣವಾಗಿದೆ. 2017-18ನೇ ಸಾಲಿನಲ್ಲಿ ಬೆಂಗಳೂರು ವಿಭಾಗಕ್ಕೆ 2788.1 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಲಾಗಿತ್ತು. ವಾಹನ ಸಂಖ್ಯೆ ಮಿತಿ ಮೀರಿ ಏರಿಕೆಯಾಗುತ್ತಿರುವುದರಿಂದ ರಾಜಸ್ವ ಸಂಗ್ರಹವೂ ಏರಿಕೆಯಾಗಿದೆ.

2017-18ರಲ್ಲಿ 2,955.8 ಕೋಟಿ ರೂ ಸಂಗ್ರಹವಾಗಿದೆ. 2016-17ರಲ್ಲಿ 2355.2 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ 2,621 ಕೋಟಿ ರೂ. ರಾಜಸ್ವ ಸಂಗ್ರಹವಾಗಿತ್ತು.

 ಕಾರ್‌ಪೂಲಿಂಗ್‌ ಕಟ್ಟುನಿಟ್ಟಾಗಿ ಜಾರಿಯಾಗಬೇಕು

ಕಾರ್‌ಪೂಲಿಂಗ್‌ ಕಟ್ಟುನಿಟ್ಟಾಗಿ ಜಾರಿಯಾಗಬೇಕು

ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆಮಾಡಬೇಕಾಗಿದ್ದರೆ ಕಾರ್‌ಪೂಲಿಂಗ್‌ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇದರಿಂದ ಹೆಚ್ಚು ವಾಹನಗಳು ರಸ್ತೆಗೆ ಬರುವುದನ್ನು ತಡೆಯಬಹುದಾಗಿದೆ.

 ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಮನೆಗೆ ಕಾರ್ ಇಲ್ಲ

ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಮನೆಗೆ ಕಾರ್ ಇಲ್ಲ

ಕಾರ್ ಕೊಳ್ಳಬೇಕಾದರೆ ಮನೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರಬೇಕು, ಇಲ್ಲವಾದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಿದೆ. ಸಾರ್ವಜನಿಕರು ನಗರದಲ್ಲಿ ಓಡಾಟಕ್ಕೆ ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳನ್ನು ಬಳಸಬೇಕು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ.

English summary
More than 5.73 new vehicles were registered in Bengaluru during 2017-18 financial year and there were more than 74 lakh vehicles are already running in Bengaluru' dusty roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X