ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫಿ, ವಿಪ್ರೋ ಸ್ಫೋಟದ ಸಂಚು ರೂಪಿಸಿದ್ದ ಇಮ್ರಾನ್

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಆರೋಪ, ಬೆಂಗಳೂರಿನ ಐಟಿ ಕಂಪನಿ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ಬಿಲಾಲ್ ಅಲಿಯಾಸ್ ಇಮ್ರಾನ್‌ ಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಬಿಲಾಲ್ ಅಪರಾಧಿ ಎಂದು ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿತ್ತು. ಬುಧವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಇಮ್ರಾನ್ ನೀಡಿದ್ದ ಸ್ಫೋಟಕ ಮಾಹಿತಿಯತ್ತ ಒಂದು ಹಿನ್ನೋಟ ಇಲ್ಲಿದೆ.

ಲಷ್ಕರ್ ಎ ತೋಯ್ಬಾ ಸಂಘಟನೆಯ ಸಂಪರ್ಕ ಹೊಂದಿರುವ ಆರೋಪವನ್ನು ಹೊತ್ತಿರುವ ಇಮ್ರಾನ್‌ ನನ್ನು ಗೋರಗುಂಟೆಪಾಳ್ಯದ ಬಳಿ ಸಿಸಿಬಿ ಪೊಲೀಸರು 2007ರಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೊಸಪೇಟೆಯಿಂದ ಬೆಂಗಳೂರಿಗೆ ಬರುವಾಗ ಬಂಧಿಸಲಾಗಿತ್ತು. [ಇಮ್ರಾನ್ ಬಿಲಾಲ್ ಗೆ ಜೀವಾವಧಿ ಶಿಕ್ಷೆ]

ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತರುತ್ತಿದ್ದ ಇಮ್ರಾನ್ ಬಂಧಿಸಲಾಗಿತ್ತು. ಇಮ್ರಾನ್‌ ಬಳಿ ಒಂದು ಎಕೆ-47 ರೈಫಲ್, 150 ಸಿಡಿಮದ್ದುಗಳು, ಐದು ಗ್ರೇನೆಡ್, ಎರಡು ಮ್ಯಾಗಜಿನ್, ಎರಡು ಮೊಬೈಲ್, ಒಂದು ಸ್ಯಾಟಲೈಟ್ ಫೋನ್, ಆರು ಸಿಮ್‌ಗಳು ದೊರಕಿತ್ತು.

ಇಮ್ರಾನ್ ಹಿನ್ನೆಲೆ: ಜಮ್ಮು-ಕಾಶ್ಮೀರ ಮೂಲದ ಇಮ್ರಾನ್ ಅಲಿಯಾಸ್ ಬಿಲಾಲ್ ಅಹ್ಮದ್ ಕೋಟಾ 1990ರಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ನ (ಜೆಕೆಎಲ್‌ಎಫ್‌) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. 1991ರಲ್ಲಿ ಬೆಂಗಳೂರಿನ ಆಚಾರ್ಯ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೋಮಾ ಮಾಡುತ್ತಿದ್ದ.

Imran alias Bilal about LeT's Plan to attack Infosys Wipro IT firms and Airport

ಆದರೆ, ಪರೀಕ್ಷೆಯಲ್ಲಿ ಫೇಲಾದ ಬಳಿಕ 1995ರಲ್ಲಿ ವಾಪಸ್ ಶ್ರೀನಗರಕ್ಕೆ ತೆರಳಿ ನಿಷೇಧಿತ ಲಷ್ಕರ್-ಏ-ತೊಯ್ಬಾ ಸಂಘಟನೆ ಜತೆ ಸೇರಿದ್ದ. ಕರ್ನಾಟಕದ ಹೊಸಪೇಟೆಗೆ ಬಂದು ನೆಲೆಸಿದ್ದ. ಬಳಿಕ ಹಂಪಿಯಲ್ಲಿ ಸನ್‌ರೈಸ್ ಕಾಶ್ಮೀರಿ ಎಂಪೋರಿಯಂ ಸ್ಥಾಪಿಸಿದ್ದ. ರಾಜ್ಯದಲ್ಲಿ ಸ್ಲೀಪರ್ ಸೆಲ್ ಸ್ಥಾಪನೆ ಬಿಲಾಲ್ ಉದ್ದೇಶವಾಗಿತ್ತು.

ಇನ್ಫಿ, ವಿಪ್ರೋ ಸ್ಫೋಟಕ್ಕೆ ಸಂಚು: 2005ರ ಡಿಸೆಂಬರ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ದಾಳಿ, ದೆಹಲಿಯಲ್ಲಿ ಸರಣಿ ಸ್ಫೋಟದ ನಂತರ ಲಷ್ಕರ್ ಇ ತೋಯ್ಬಾ ಸಂಘಟನೆಯು ಬೆಂಗಳೂರಿನ ಐಟಿ ಕಂಪನಿಗಳತ್ತ ಮುಖ ಮಾಡಿತ್ತು.

ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರು ಇನ್ಫೋಸಿಸ್, ವಿಪ್ರೋ ಸೇರಿದಂತೆ ಪ್ರಮುಖ ಐಟಿ ಕಂಪನಿಗಳು, ಬೆಂಗಳೂರಿನ ವಿಮಾನ ನಿಲ್ದಾಣ ಸ್ಫೋಟಕ್ಕೆ ಲಷ್ಕರ್ ಸಂಚು ರೂಪಿಸಿತ್ತು ಎಂದು ಇಮ್ರಾನ್ ಹೇಳಿದ್ದ. ಇಮ್ರಾನ್ ಗೆ ಮಂಪರು ಪರೀಕ್ಷೆ ನಡೆಸಿದ ನಂತರ ಈ ಸತ್ಯ ಹೊರ ಬಂದಿತ್ತು.

ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಕೋಮು ಗಲಭೆ ಸೂಕ್ಷ್ಮ ಪ್ರದೇಶಗಳಲ್ಲಿ 400ಕ್ಕೂ ಅಧಿಕ ಮಂದಿ ನಿಯೋಜಿಸಲಾಗಿದೆ. ಅನೇಕ ಮಂದಿ ಸ್ಲೀಪರ್ ಸೆಲ್ ನಲ್ಲಿದ್ದು ಲಷ್ಕರ್ ಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದ.

ಪುಣೆಯಲ್ಲಿ ರಾಜೇಶ್ ಎಂಬಾತನ ನೆರವು ಪಡೆದು ಶಸ್ತ್ರಾಸ್ತ್ರಗಳನ್ನು ತಂದಿದ್ದ ಇಮ್ರಾನ್, ನೇರ ಹೊಸಪೇಟೆಯ ತನ್ನ ನಿವಾಸಕ್ಕೆ ಒಯ್ದಿದ್ದ. ಅಲ್ಲಿಂದ ಬೆಂಗಳೂರಿಗೆ ತರುವಾಗ ಸಿಕ್ಕಿಬಿದ್ದಿದ್ದ. ಕರ್ನಾಟಕದ ಹೊಸಪೇಟೆ, ಹಂಪಿಯಲ್ಲಿ ಸನ್‌ರೈಸ್ ಕಾಶ್ಮೀರಿ ಎಂಪೋರಿಯಂ ಸ್ಥಾಪಿಸಿದ್ದ. ಆದರೆ, ಹೆಚ್ಚು ಸಕ್ರಿಯವಾಗಿರಲಿಲ್ಲ.

English summary
Imran alias Bilal who is convicted and awarded with Death Sentence on Tuesday by Sessions court. Imran earlier spilled the bean on LeT's plans to attack campuses of software giants Infosys, Wipro and several firms in Electronic City along with the Bengaluru airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X