ಬಿಡಿಎ ಹಾಗೂ ಕೆಇಬಿ ಬಡಾವಣೆಗಳಲ್ಲಿ ಅಸಮರ್ಪಕ ನೀರು ಪೂರೈಕೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ನಗರದ ವಿವಿದ ಬಡಾವಣೆಯಲ್ಲಿ ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ಅಸಮರ್ಪಕ ನೀರು ಪೂರೈಸಲಾಗುತ್ತಿದೆ. ಬಿಡಿಎ ಮತ್ತು ಕೆಇಬಿ ಬಡಾವಣೆ 7ನೇ ಅಡ್ಡ ಒಳರಸ್ತೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಈ ರೀತಿ ತೊಂದರೆ ಉಂಟಾಗಿದೆ.

ಜಲಮಂಡಳಿ ಮಾತ್ರ ದಿನ ಬಿಟ್ಟು ದಿನ ಅಥವಾ ಮೂರು ದಿನಗಳಿಗೊಮ್ಮೆ ಪೂರೈಕ್ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ರಾತ್ರಿ ಪಾಳಿಯಲ್ಲಿ ಅಸಮರ್ಪಕ ನೀರು ಪೂರೈಕೆಯಿಂದ ನಿವಾಸಿಗಳು ಕಂಗಾಲಾಗಿದ್ದಾರೆ.

ಮಾರ್ಚ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ7 ಹಳ್ಳಿಗಳಿಗೆ ಕಾವೇರಿ ನೀರು!

5ನೇ ಒಳ ರಸ್ತೆಯಲ್ಲಿ ಮತ್ತು ಕೆಇಬಿ ಆಟದ ಮೈದಾನದಲ್ಲಿ ಈಗಾಗಲೇ ಕೊಳವೆ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಬಹುತೇಕ ಕಡೆ ಕಾವೇರಿ ನೀರು ಪೂರೈಕೆಯಾಗುವ ಬಡಾವಣೆಗಳಲ್ಲೂ ಕೊಳವೆ ಬಾವಿಗಳನ್ನು ಕೊರೆಸಿ ಪೈಪ್‌ಲೈನ್ ಮೂಲಕ ನೀರಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

Improper water supply from BWSSB

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಆದರೆ 7ನೇ ಅಡ್ಡರಸ್ತೆಯಲ್ಲಿ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೊಳವೆ ಬಾವಿಗಳ ಸೌಲಭ್ಯವಿಲ್ಲ ಅಥವಾ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆಯೂ ಇಲ್ಲ. ಹೀಗಾಗಿ ಜಲಮಂಡಳಿಯ ಕಾವೇರಿ ನೀರು ಪೂರೈಕೆಯನ್ನೇ ಜನರು ನಂಬಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Residents of interior part if BDA and KIB layout are facing water problem.BWSSB improper water supply effecting their livelihood.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ