ಕಳಸಾ ಬಂಡೂರಿ ಪರ ಟ್ವೀಟ್ ಅಭಿಯಾನ ಯಶಸ್ಸು

Posted By:
Subscribe to Oneindia Kannada

ಬೆಂಗಳೂರು, ಜುಲೈ 13: ಒಂದು ವರ್ಷದ ಹಿನ್ನೆಲೆ ಇರುವ ಕಳಸಬಂಡೂರಿ ಹೋರಾಟಕ್ಕೆ ಬೆನ್ನೆಲುಬಾಗಿ ಇಂದು ಎಲ್ಲಾ ಕನ್ನಡಿಗರು #ImplementKalasaBanduri ಎಂದು ಟ್ವೀಟ್ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಂದ ಉತ್ತಮ ಬೆಂಬಲ ಸಿಕ್ಕಿದ್ದು, ಹೋರಾಟಗಾರರಲ್ಲಿ ಹೊಸ ಶಕ್ತಿ ಹೊಮ್ಮಿದೆ ಎಂದು ಐಟಿ ಬಿಟಿ ಕನ್ನಡಿಗರು ಹೇಳಿದ್ದಾರೆ

40 ವರ್ಷಗಳು ಹಳೆಯದಾದ ಯೋಜನೆ, ರಾಜಕೀಯ ಪಕ್ಷಗಳು ಇದನ್ನು ತಮ್ಮ ಪಕ್ಷಗಳನ್ನು ನಾಯಕರನ್ನು ಬೆಳೆಸಿಕೊಳ್ಳಲು ಬಳಸಿದೆ, ಆದರೆ 40 ವರ್ಷಗಳಿಂದ ಕೇಳಿಕೊಂಡರೂ ಅನುಷ್ಠಾನವಾಗಿಲ್ಲ, ನರಗುಂದದಲ್ಲಿ ಕಳೆದ 365 ದಿನಗಳಿಂದ ಜನರು ಸತತವಾಗಿ ಹೋರಾಟ ಮಾಡುತ್ತಿದ್ದಾರೆ, ಕರ್ನಾಟಕ ಬಂದ್ ಆಯಿತು, ಬೆಂಗಳೂರಿನಿಂದಲೇ ಎರಡು ಸಾವಿರ ಕೋಟಿ ನಷ್ಟವಾಯಿತು, ಕನ್ನಡ ಸಿನಿಮಾ ತಾರೆಯರು ದಂಡು ದಂಡಾಗಿ ಹೋರಾಟದಲ್ಲಿ ಧುಮುಕಿ ಜನಗಳಿಗೆ ಜೊತೆಯಾದರು, ಆದರೂ ದಪ್ಪ ಚರ್ಮದ ರಾಜಕಾರಣಿಗಳು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿಲ್ಲ. [#ImplementKalasaBanduri ಟ್ರೆಂಡಿಂಗ್]

ಒಂದು ವರ್ಷ ತುಂಬಿದ ದುಃಖದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಕನ್ನಡಿಗರು ಟ್ವಿಟ್ಟರ್ ಟ್ರೆಂಡ್ ಮಾಡಿದ್ದಾರೆ, ಈ ಬಾರಿ ಕೇವಲ ಭಾರತೀಯ ನಾಯಕರನ್ನಷ್ಟೆ ಅಲ್ಲದೆ ವಿಶ್ವದ ಯುಎನ್, ಯುಎನ್ ವಾಟರ್ ಬಾಡಿ, ಒಬಾಮ, ಇನ್ನಿತರರನ್ನು ಟ್ಯಾಗ್ ಮಾಡಿದ್ದಾರೆ, ಟ್ವೀಟ್ ಶುರುವಾದ ಒಂದೆರಡು ಗಂಟೆಗಳಲ್ಲೇ ಭಾರತದ ನಂಬರ್ ಒನ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ #ImplementKalasaBanduri ಆಗಿತ್ತು, ನಾಲ್ಕೈದು ಗಂಟೆಗಳಲ್ಲಿ 10000 ಟ್ವೀಟ್ ಗಳು ಬಂದವು, ಭಾರತದ ಟ್ವಿಟರ್ ಟ್ರೆಂಡ್ ಗಳಲ್ಲಿ ಇದು ದಾಖಲೆ ಆಗಿದೆ.

ನಮ್ಮ ಹೋರಾಟದ ಉದ್ದೇಶ

ನಮ್ಮ ಹೋರಾಟದ ಉದ್ದೇಶ

* 1 ವರ್ಷದ ನೋವಿನ ಕೂಗಿಗೆ ನಮ್ಮ ಬಲ ನೀಡಿ ಅವರಿಗೆ ಬೆಂಬಲ ಕೊಡುವುದು.
* ರಾಷ್ಟ್ರೀಯ ನ್ಯಾಯಾಧಿಕರಣದ ಮೇಲೆ ವಿಶ್ವಾಸ ಹೋಗಿರುವದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ನಾಯಕರುಗಳ ಮೂಲಕ ಒತ್ತಡ ತರುವುದು
* ಜಗತ್ತಿನ ಎಲ್ಲ ಮೂಲೆಗಳಿಂದ ಕನ್ನಡಿಗರೆಲ್ಲ ಕಳಸಾ ಕಣಿವೆಯ ಜನರ ಜೊತೆ ಇದ್ದೆವೆಂದು ತೋರಿಸಲು
* ರಾಷ್ಟೀಯ ಮತ್ತು ಅಂತರಾಷ್ಟೀಯ ಮಟ್ಟದಲ್ಲಿ ಕಳಸಾ ಬಂಡೂರಿ ಸಮಸ್ಯೆಯನ್ನ ಎತ್ತಿ ತೋರಿಸುವುದು.

ನಟ ಶಿವರಾಜ್ ಕುಮಾರ್ ಬೆಂಬಲ

ನಟ ಶಿವರಾಜ್ ಕುಮಾರ್ ಬೆಂಬಲ

ನಟರಾದ ಶಿವರಾಜ್ ಕುಮಾರ್ , ಅಚ್ಯುತ್ ಕುಮಾರ, ಜಗ್ಗೇಶ್, ಗೊಲ್ಡನ್ ಸ್ಟಾರ್ ಗಣೇಶ್, ಸಂಚಾರಿ ವಿಜಯ್,1st Rank Raju ಖ್ಯಾತಿಯ ಗುರುನಂದನ್ , 1st Rank Raju ಖ್ಯಾತಿಯ ಎಡಿಟರ ಗಿರಿ ಮಹೇಶ್ , ನಿರ್ದೇಶಕ ಶಶಾಂಕ, ಅನಿರುದ್ಧ, ಅರವಿಂದ ನರಸಿಂಹರಾಜು, ನಾಗೆಂದ್ರ ಪ್ರಸಾದ್, ಸುಚೆಂದ್ರ ಪ್ರಸಾದ್, ಬಿ ಸುರೇಶ್, ಲಿಂಗದೇವರು, ತಿಥಿ ಖ್ಯಾತಿಯ ಮಂಡ್ಯದ ಈರೇಗೌಡ್ರು , ಪಿಡಿ ಸತೀಶ್, ಆಸಿಫ್ ಫರೂಕಿ, ರಕ್ಷಿತ್ ಶೆಟ್ಟಿ, ಜ್ಞಾನಪೀಠ ಪುರಸ್ಕೃತ ಕಂಬಾರರು, ಚಂಪಾ ಸ್ವಯಂ ಪ್ರೇರಿತವಾಗಿ ಕಳಸ ಬಂಡೂರಿ ಯೋಜನೆ ಜಾರಿಯಾಗಲಿ ಎಂದು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ವಿಡಿಯೊ ಅಪ್ಲೊಡ್ ಮಾಡಿ ಹೋರಾಟ

ವಿಡಿಯೊ ಅಪ್ಲೊಡ್ ಮಾಡಿ ಹೋರಾಟ

ಬೆಂಗಳೂರಿನಲ್ಲಿ ಕೆಲಸ ಮಾಡುವ ಒರಿಯಾ, ನೇಪಾಳಿಗಳನ್ನು ಅಲ್ಲಿ ಕೆಲಸ ಮಾಡುವ ಕನ್ನಡಿಗರು ವಿಷಯದ ಬಗ್ಗೆ ತಿಳಿಸಿ ಬೆಂಬಲಿಸುವಂತೆ ವಿಡಿಯೊ ಅಪ್ಲೊಡ್ ಮಾಡಿ ಹೋರಾಟದಲ್ಲಿ ಧುಮುಕುವಂತೆ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದ ಸಿನಿಮಾ ತಾರೆಯರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಐಟಿ ಬಿಟಿ ಕನ್ನಡಿಗರು ಆರಂಭಿಸಿದ ಈ ಅಭಿಯಾನ ಯಶಸ್ವಿಯಾಗಿದೆ.

ವಿವಿಧ ಕ್ಷೇತ್ರದಿಂದ ಸಿಕ್ಕಿತು ಬೆಂಬಲ

ವಿವಿಧ ಕ್ಷೇತ್ರದಿಂದ ಸಿಕ್ಕಿತು ಬೆಂಬಲ

ವಿಜಯಪುರದ ಗುರುರಾಜ್ ಮನಹಳ್ಳಿ, ಶಿವಣ್ಣ ಗುಂಡಾನವರ್, ವಿಜಯ್ ಮಹಾಂತೇಶ್, ಮಂಡ್ಯದ ರೈತ ಹಾಗು ಸಾಮಾಜಿಕ ಜಾಲತಾಣ ಕನ್ನಡ ಹೋರಾಟಗಾರ ಮಲ್ಲಿಕಾರ್ಜುನ ಗೌಡ, ಮಂಡ್ಯದ ಯುವ ಕವಿ ರಾಜೇಂದ್ರ ಪ್ರಸಾದ್, ರಾಯಚೂರಿನ ಪ್ರಭು ಗುಡಿಮನಿ, ಶಿವಕಿರಣ್ ಆಸ್ಕಿಹಾಳ್, ಕೋಲಾರದ ಸುರೇಶ್ ವೆಂಕಟಪ್ಪ

ಅಭಿಯಾನಕ್ಕೆ ಎಲ್ಲೆಡೆಯಿಂದ ಬೆಂಬಲ

ಅಭಿಯಾನಕ್ಕೆ ಎಲ್ಲೆಡೆಯಿಂದ ಬೆಂಬಲ

ರಾಣಿಬೆನ್ನೂರಿನ ಕುಬೇರ್ ಪೂಜಾರ್, ಹಾಸನದ ಸುನಿಲ್ ಗೌಡ, ಶಿವಮೊಗ್ಗದ ಪವನ್ ಹಿರಿಯಣ್ಣ ಹೆಗಡೆ, ಕಿರಣ್ ಮಲೆನಾಡು, ಹಾನಗಲ್ಲಿನ ಶ್ರೀಕಾಂತ್, ರಾಮನಗರದ ಗಿರೀಶ್, ಸಂತೋಷ್, ಮೈಸೂರಿನ ಶರತ್, ಬಳ್ಳಾರಿಯ ಪ್ರದೀಪ್ ಟಿಜಿ, ತುಮಕೂರಿನ ಮಂಜುನಾಥ್ ಗೌಡ, ಪುಟ್ಟ ಹೊನ್ನೇಗೌಡ, ದೇವರಾಜ್ ಗೌಡ, ಗಂಗಾವತಿಯಿಂದ ಸಚ್ಚಿದಾನಂದ್, ಚೆನ್ನೈನಿಂದ ಪ್ರವೀಣ ಅಡಿಗೆರೆ,

ವಿದೇಶದಿಂದಲೂ ಕನ್ನಡಿಗರು ಬೆಂಬಲಿಸಿದರು

ವಿದೇಶದಿಂದಲೂ ಕನ್ನಡಿಗರು ಬೆಂಬಲಿಸಿದರು

ಅಮೆರಿಕದಲ್ಲಿ ನೆಲೆಸಿರುವ ನವೀನ್ ಪಾಟಿಲ್, ಚಿತ್ರದುರ್ಗದ ನಂದಿ ಜೆ ಹೂವಿನಹೊಳೆ, ಅವಿರತ ಗೆಳೆಯರು, ಟ್ರೋಲ್ ಹೈಕ್ಳು ಫೇಸ್ ಬುಕ್ ಪೇಜ್ ತಂಡ,ಕೋರ ಕನ್ನಡ ಬಳಗ, ಬನವಾಸಿ ಬಳಗದ ವಸಂತ್ ಶೆಟ್ಟಿ, ಚೇತನ್ ಜೀರಾಳ್, ಗದಗಿನ ಪ್ರಶಾಂತ್ ಸೊರಟೂರು, ಕರವೇ ನಾರಾಯಣ ಗೌಡ್ರು, ನಟ ಜಗ್ಗೇಶ್ ಸೇರಿ ಸಾವಿರಾರು ಕನ್ನಡಿಗರು ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#ImplementKalasaBanduri trended on Twitter today(July 13) The fight for water from Mahadayi river to Karnataka has almost completing one year. IT BT Kannadigaru of Karnataka have taken an initiative in support of the fight and have requested Kannadigas to upload selfie in support of the protest.
Please Wait while comments are loading...