ಸೈಡ್ ವಿಂಗ್ ತಂಡದಿಂದ 12ರಂದು 'ಇಲ್ಯಾಡ್ಗಣ್ಣ' ನಾಟಕ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ರಂಗಭೂಮಿಗೆ ಇದೇ ಮೊದಲ ಬಾರಿಗೆ ಕಾಲಿಟ್ಟಿರುವ ಹವ್ಯಾಸಿ ರಂಗ ಕಲಾವಿದರ ತಂಡ 'ಸೈಡ್ ವಿಂಗ್ ಬೆಂಗಳೂರು' ನ ಚೊಚ್ಚಲ ಪ್ರಯತ್ನವಾದ 'ಇಲ್ಯಾಡ್ಗಣ್ಣ' ಎಂಬ ನಾಟಕ ಪ್ರದರ್ಶನ ಇದೇ ತಿಂಗಳ 12ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಳಿಯಿರುವ ಕಲಾಗ್ರಾಮದಲ್ಲಿ ನಡೆಯಲಿದೆ.

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಕದಂರೊಂದಿಗಿನ ಸಂದರ್ಶನ

ಈ ನಾಟಕವನ್ನು ಎಂ.ಎಂ. ಶೈಲೇಶ್ ಕುಮಾರ್ ರಚಿಸಿ ನಿರ್ದೇಶಿಸಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಇವರು ಕೆಲವಾರು ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರು ಈ ಹಿಂದೆ ರಚಿಸಿದ್ದ 'ಇಲ್ಲ ಅಂದ್ರೆ.. ಇದೆ!' ಎಂಬ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಕಂಡಿದೆ.

'Illidganna' play will be on Kalagrama on August 12, 2017

ನಾಟಕದ ರಂಗ ಸಜ್ಜಿಕೆ, ರಂಗ ಪರಿಕರಗಳನ್ನು ವಿಶ್ವನಾಥ್ ಮಂಡಿ ಒದಗಿಸಿದ್ದು, ಧನುಷ್ ಅವರ ಬೆಳಕು, ಆದಿತ್ಯ ಭಾರದ್ವಾಜ್ ಅವರ ಸಂಗೀತವಿದೆ.

ಟಾಗೋರ್ ದ್ವಿತೀಯ ದರ್ಜೆ ನಾಟಕಕಾರ : ಕಾರ್ನಾಡ್

'Illidganna' play will be on Kalagrama on August 12, 2017
IPL 2017 : Rishabh Pant's Emotional innings | Bangalore vs Delhi | Oneindia Kannada

ಆಗಸ್ಟ್ 12ರಂದು ಸಂಜೆ 7:30ಕ್ಕೆ ನಾಟಕ ಪ್ರದರ್ಶನ ನಡೆಯಲಿದ್ದು, ಪ್ರತಿ ಟಿಕೆಟ್ಟಿಗೆ 100 ರು. ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, 9845087901 ಸಂಖ್ಯೆಗೆ ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New team of ameture theater artists named 'Sidewing Benglauru', will be staging its first play 'illyadganna' on August 12th, 2017 at Kalagrama near Bangalore University.
Please Wait while comments are loading...