ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಕುರಿತು ಚಿದಾನಂದ ರಾಜಘಟ್ಟ ಬರೆದ ಪುಸ್ತಕ ಲೋಕಾರ್ಪಣೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 22: ಖ್ಯಾತ ಪತ್ರಕರ್ತ ಮತ್ತು ಲೇಖಕ ಚಿದಾನಂದ ರಾಜ್ ಘಟ್ಟ ಅವರು ತಾವು ಬರೆದ 'ಇಲ್ಲಿಬರಲ್ ಇಂಡಿಯಾ: ಗೌರಿ ಲಂಕೇಶ್ ಆಂಡ್ ದಿ ಏಜ್ ಆಫ್ ಅನ್ ರಿಸನ್' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಇದನ್ನು ವೆಸ್ಟ್ ಲ್ಯಾಂಡ್ ಅವರು ತಮ್ಮ ಹೊಸ ಸಾಹಿತ್ಯಕ ಮುದ್ರೆ ಅಡಿಯಲ್ಲಿ ಬೆಂಗಳೂರಿನ ಹಿಗ್ಗಿನ್ ಭಾಥಮ್ಸ್ ನಲ್ಲಿ ಪ್ರಕಟಿಸಿದೆ.

ಈ ಕಾರ್ಯಕ್ರಮದಲ್ಲಿ ಲೇಖಕ ಚಿದಾನಂದ ರಾಜ್ ಘಟ್ಟ, ವಾಸಂತಿ ಹರಿಪ್ರಕಾಶ್, ಪಿಕಲ್ ಜಾರ್ ನ ಸಂಸ್ಥಾಪಕರು, ಮತ್ತು ಪತ್ರಕರ್ತೆ ಪ್ರೀತಿ ನಾಗರಾಜ್ ನಡುವೆ ಸಂವಾದ ಕಾರ್ಯಕ್ರಮವು ನಡೆಯಿತು.

ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ-ಸ್ಥಾನಮಾನಗಳನ್ನು ನೀಡಬೇಕೆಂಬ ಕಠಿಣ ನಿಲುವು ಹೊಂದಿರುವ ಗೌರಿ ಲಂಕೇಶ್ ಬಗ್ಗೆ, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಸಾಕಷ್ಟು ಮಂದಿ ಹಿಗ್ಗಿನ್ ಭಾಥಮ್ಸ್ ನಲ್ಲಿ ನೆರೆದಿದ್ದರು.

ಕರ್ನಾಟಕ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಹಿಂದುತ್ವ ಧೋರಣೆಯ ಪ್ರಬಲ ವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರು 2017ರ ಸೆಪ್ಟೆಂಬರ್ 5ರಂದು ಹತ್ಯೆಗೀಡಾದರು. ಎಂ.ಎಂ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ಶೈಲಿಯಲ್ಲೇ ಗೌರಿ ಹತ್ಯೆಯೂ ನಡೆದಿತ್ತು.

ಚಿದಾನಂದ್ ರಾಜ್ ಘಟ್ಟ ಅವರ ಜತೆ ಸಂವಾದ

ಚಿದಾನಂದ್ ರಾಜ್ ಘಟ್ಟ ಅವರ ಜತೆ ಸಂವಾದ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಾನಂದ್ ರಾಜ್ ಘಟ್ಟ ಅವರು ಭಾರತವು 'ಇಲ್ಲಿ ಬರಲ್' ಆಗಿದೆಯೇ ನೀವು ಸಾಮಾಜಿಕ ಸ್ತರದಲ್ಲಿ ಎಲ್ಲಿ ನಿಂತಿದ್ದೀರಿ ಎಂಬುದರ ಮೇಲೆ ಇದರ ಉತ್ತರ ಅವಲಂಬಿತವಾಗಿರುತ್ತದೆ. ಇದು ಬಿಳಿಯ ಅಮೆರಿಕನ್ನರನ್ನು ವರ್ಣಬೇಧದ ಬಗ್ಗೆ ಕೇಳಿದಂತೆ. ಅವರನ್ನು ವರ್ಣಬೇಧದ ಬಗ್ಗೆ ಪ್ರಶ್ನಿಸಿದರೆ ಅಮೆರಿಕದಲ್ಲಿ ವರ್ಣಬೇಧ ಇಲ್ಲ ಎಂದೇ ಹೇಳುತ್ತಾರೆ.

ರಾಜಕೀಯ ಚಿತ್ರಣವನ್ನು ಪುಸ್ತಕದಲ್ಲಿ ಶೋಧಿಸಲಾಗಿದೆ

ರಾಜಕೀಯ ಚಿತ್ರಣವನ್ನು ಪುಸ್ತಕದಲ್ಲಿ ಶೋಧಿಸಲಾಗಿದೆ

ಒಂದು ಮಹಿಳೆ ಎದ್ದು ನಿಂತು ತನ್ನ ಆಲೋಚನೆಗಳನ್ನು ಮುಕ್ತವಾಗಿ ಮಾತನಾಡಿದರೆ, ಅದನ್ನು ಸಹಿಸದ ಎಷ್ಟೋ ಜನ ಇರುತ್ತಾರೆ. ಲಿಂಗಾಯಿತ ಎನ್ನುವುದು ಭ್ರಷ್ಟವಾಗುತ್ತಿದೆ. ಧರ್ಮ ವ್ಯಾಪಾರವಾಗುತ್ತಿದೆ ಎನ್ನುವ ವಿಷಯವೇ ಆಕೆಯನ್ನು ಬಾಧಿಸುತ್ತಿದ್ದುದು. ಅದನ್ನೇ ಆಕೆ ಧೈರ್ಯವಾಗಿ ಮಾತನಾಡಿದ್ದು.

ಇಡೀ ದೇಶಕ್ಕೆ ಆಘಾತಕಾರಿಯಾದ ಗೌರಿ ಲಂಕೇಶ್ ಕೊಲೆಯನ್ನು, ಅದರ ಹಿಂದಿದ್ದ ರಾಜಕೀಯ ಚಿತ್ರಣವನ್ನು ಪುಸ್ತಕದಲ್ಲಿ ಶೋಧಿಸಲಾಗಿದೆ. ಒಂದೇ ರಾಜಕೀಯ ಹಿನ್ನೆಲೆಯ ಕಾಲಘಟ್ಟದಲ್ಲಿ, ಆ ಕುರಿತ ಜಾಗೃತಿಯಲ್ಲೇ ತೊಡಗಿ ದಶಕಗಳ ಅವಧಿ ಅದೇ ಪಯಣದಲ್ಲಿ ಮುಂದುವರೆದ ಇಬ್ಬರ ಕುರಿತು ಕಥೆಗಳಿವೆ.

ಇದೇ ಆಧುನಿಕ ಭಾರತದ ಇತಿಹಾಸದಲ್ಲಿ ಇದು ರಚನಾತ್ಮಕ ದಶಕವಾಗಿ, ಭಾರತಕ್ಕೆ ಬಹುಸಂಖ್ಯಾತ ರಾಷ್ಟ್ರೀಯತಾವಾದದ ಯುಗವಾಗಿ ಪರಿಣಮಿಸಿದವು

ಗೌರಿ ಹತ್ಯೆ ಬಗ್ಗೆ ಚಿತ್ರಣ

ಗೌರಿ ಹತ್ಯೆ ಬಗ್ಗೆ ಚಿತ್ರಣ

ಗೌರಿ ಲಂಕೇಶ್ ಕರ್ನಾಟಕ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಹಿಂದುತ್ವ ಧೋರಣೆಯ ಪ್ರಬಲ ವಿಮರ್ಶಕರಾಗಿದ್ದರು. ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ-ಸ್ಥಾನಮಾನಗಳನ್ನು ನೀಡಬೇಕೆಂಬ ನಿಲುವು ಹಲವು ವೈರಿಗಳನ್ನು ಹುಟ್ಟುಹಾಕಿತ್ತು. ಅವರ ಈ ನಿಲುವು ದೇಶದಾದ್ಯಂತ ಹಲವಾರು ಅಭಿಮಾನಿಗಳನ್ನೂ ಹುಟ್ಟುಹಾಕಿತ್ತು.
2017ರ ಸೆಪ್ಟೆಂಬರ್ 5ರಂದು ಅಪರಿಚಿತ ವ್ಯಕ್ತಿಯೊಬ್ಬ ಗೌರಿ ಲಂಕೇಶರಿಗೆ ಗುಂಡು ಹಾರಿಸಿದ. ಎಂ.ಎಂ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ಶೈಲಿಯಲ್ಲೇ ಗೌರಿ ಹತ್ಯೆಯೂ ನಡೆದಿತ್ತು.

ಇಲ್ಲಿಬರಲ್ ಇಂಡಿಯಾ

ಇಲ್ಲಿಬರಲ್ ಇಂಡಿಯಾ

ಇಲ್ಲಿಬರಲ್ ಇಂಡಿಯಾ: ಗೌರಿ ಲಂಕೇಶ್ ಆಂಡ್ ದಿ ಏಜ್ ಆಫ್ ಅನ್ ರಿಸನ್ ಕೃತಿಯಲ್ಲಿ ಶೀತಲ ಕೊಲೆಯ ಹಿಂದಿರುವ ರಾಜಕೀಯ ಪ್ರೇರಣೆಯ ಮೇಲೆ ಬೆಳಕು ಚೆಲ್ಲುತ್ತದೆ. ಇಬ್ಬರು ಅಪರಿಚಿತರು ರಾಜಕೀಯ ಪ್ರಜ್ಞೆಯಲ್ಲಿ ಒಂದಾಗಿ, ಮದುವೆಯಾಗಿ, ಬೇರ್ಪಟ್ಟು ಭಿನ್ನಾಭಿಪ್ರಾಯದ ಬಳಿಕ ಮತ್ತೆ ಗೆಳೆಯರಾಗಿ ಉಳಿದ ಕತೆ-ಸಹಿಷ್ಣುತೆಯನ್ನು ಉಳಿಸಿಕೊಂಡು ಬದುಕಿ ಬಾಳುವ ಪ್ರಕರಣಗಳು ನಮ್ಮಲ್ಲಿಂದು ಕಡಿಮೆಯಾಗುತ್ತಿವೆ. ಗೌರಿ ಲಂಕೇಶ್ ಅವರ ವೈಯಕ್ತಿಕ ಹಾಗೂ ರಾಜಕೀಯ ಬದುಕಿನ ಜೀವನ ಚಿತ್ರಣ ಈ ಪುಸ್ತಕದಲ್ಲಿದೆ

English summary
‘Illiberal India:Gauri Lankesh and the Age of Unreason,' which deals with the gruesome murder of journalist and activist Gauri Lankesh and is written by Chidanand Rajaghatta, a journalist, ex-husband and a dear friend of Gauri Lankesh was launched in Bengaluru on 20th July at Higginbothams followed by an discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X