100 ಕೋಟಿ ಹಣ 3ಮಚ್ಚು 2 ಡ್ಯಾಗರ್ ಪತ್ತೆ, ವಿ ನಾಗರಾಜ್ ಪರಾರಿ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಗುಮಾನಿನ ಮೇಲೆ ಬೆಂಗಳೂರಿನ ಶ್ರೀರಾಂಪುರದಲ್ಲಿರುವಮಾಜಿ ಕಾರ್ಪೋರೇಟರ್ ವಿ, ನಾಗರಾಜ್ ಮನೆ ಮೇಲೆ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

ಮೊದಲು ನಾಗನ ಕಚೇರಿಗೆ ನುಗ್ಗಿದ ಪೊಲೀಸರಿಗೆ 3 ಮಚ್ಚು 2 ಡ್ಯಾಗರ್ ಹಾಗೂ ಸುಮಾರು ನೂರು ಕೋಟಿ ರು ಹಳೆಯ ಐನೂರು ಸಾವಿರ ಮುಖಬೆಲೆ ನೋಟುಗಳಿರುವ ಬ್ಯಾಗ್ ಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಕಂತೆ-ಕಂತೆ ನೋಟುಗಳನ್ನು ಪೊಲೀಸರು ಎಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Illegal weapon illegality Police raids on rowdy bomb Naga's house in bengaluru

ಸುಮಾರು ನಾಲ್ಕು ಅಂತಸ್ಥಿನ ಕಟ್ಟಡವಿರುವ ನಾಗನ ಮನೆಯ ಒಂದೊಂದು ಅಂತಸ್ಥಿನ ಮನೆಯ ಬಾಗಿಲಿಗೆ ಒಳಗೆ ಮತ್ತು ಹೊರಗೆ ಲಾಕ್ ಮಾಡಿಕೊಂಡು ಒಳಗೆ ಅವಿತುಕೊಂಡಿದ್ದಾನೆ. ಹಂತ ಹಂತವಾಗಿ ಪೊಲೀಸರು ಬೀಗ ಮುರಿದು ಒಳ ಪ್ರವೇಶಿಸುತ್ತಿದ್ದಂತೆಯೇ ಟೆರೇಸ್ ಮೂಲಕ ನಾಗರಾಜ್ ಪರಾರಿಯಾಗಿದ್ದಾನೆ. ಇನ್ನು ಮನೆಯಲ್ಲಿ ಸಿಕ್ಕ ಈತನ ಪತ್ನಿ ಲಕ್ಷ್ಮೀ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Illegal weapon illegality Police raids on rowdy bomb Naga's house in bengaluru

ನಕಲಿ ಬೀಗ ಬಳಸಿ ಮನೆ ಪಕ್ಕದಲ್ಲಿರುವ ನಾಗನ ಕಚೇರಿಯ ಒಳ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ. ಬೇರೆ ಮಾರ್ಗದಿಂದ ಎಸ್ಕೇಪ್ ಆಗದಂತೆ ನಾಗನ ಮನೆ ಸುತ್ತ ಪೊಲೀಸರು ಸುತ್ತು ಹೊರೆದಿದ್ದಾರೆ.

ಇತ್ತೀಚೆಗೆರಿಯಲ್ ಎಸ್ಟೇಟ್ ಉಮೇಶ್ ಎನ್ನುವರನ್ನು ನಗರದ ಎಸ್ ಬಿ ಲೇಔಟ್ ನಿಂದ ಅಪಹರಿಸಿ ಅವರಿಂದ 50 ಲಕ್ಷ ರು.ಸೇರಿದಂತೆ ಬಂಗಾರದ ಉಂಗುರಗಳನ್ನು ಪೀಕಿದ್ದ. ಅಷ್ಟೇ ಅಲ್ಲದೇ ಇತರೆ ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ನಾಗರಾಜ್ ಭಾಗಿಯಾಗಿದ್ದಾನೆ.

ಇದರಿಂದ ಈತನನ್ನು ರೌಡಿ ಬಾಂಬ್ ನಾಗ ಎಂದು ಕರೆಯಲಾಗಿತ್ತು. ಬಳಿಕ ನಾಗರಾಜ್ ನಾನೊಬ್ಬ ಜನಪ್ರತಿನಿಧಿ ಆಗಿದ್ದರಿಂದ ನನ್ನನ್ನು ರೌಡಿ ಎಂದು ಕರೆಯದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಇದರಿಂದ ಕೋರ್ಟ್, ಬಾಂಬ್ ನಾಗ ಎಂದು ಕರೆಯದಂತೆ ಆದೇಶ ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Illegal weapons illegality police raids on V Nagaraj alias rowdy bomb Naga's house in bengaluru.
Please Wait while comments are loading...