ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಟಾಪ್ 100 ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ

|
Google Oneindia Kannada News

ಬೆಂಗಳೂರು, ಜೂನ್ 01: ವಿಶ್ವದ ಅತ್ಯುತ್ತಮ 100 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ ಸ್ಥಾನ ಪಡೆದಿದೆ.

ಟೈಮ್ಸ್‌ ಹೈಯರ್ ಎಜುಕೇಶನ್ ಅವರು ನೆಡಸಿದ್ದ ವರ್ಲ್ಡ್‌ ರೆಪ್ಯುಟೇಶನ್ ರ್ಯಾಂಕಿಂಗ್‌ 2018 ರಲ್ಲಿ ಐಐಎಸ್‌ಸಿ ಸ್ಥಾನ ಪಡೆದಿದ್ದು, ಟಾಪ್‌ 100 ವಿಶ್ವವಿದ್ಯಾಲಯದಲ್ಲಿ ಸ್ಥಾನ ಪಡೆದ ಏಕೈಕ ಭಾರತದ ವಿಶ್ವ ವಿದ್ಯಾಲಯ ಎಂಬ ಖ್ಯಾತಿಗೂ ಐಐಎಸ್‌ಸಿ ಪಾತ್ರವಾಗಿದೆ.

IISc ranked in top 100 of best universities of the world

ಈ ಪಟ್ಟಿಯಲ್ಲಿ ಅಮೆರಿಕದ ಹಾರ್ವರ್ಡ್‌, ಲಂಡನ್‌ನ ಕೆಂಬ್ರಿಜ್‌, ಎಂಐಟಿ, ಸ್ಟಾನ್‌ಫರ್ಡ್‌ ಇನ್ನೂ ಹಲವು ಖ್ಯಾತ ನಾಮ ವಿಶ್ವವಿದ್ಯಾಲಯಗಳಿವೆ. ಈ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿಗೆ 91ನೇ ಸ್ಥಾನ ದೊರೆತಿದೆ.

ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ

10000 ನುರಿತ ಹಾಗೂ ಖ್ಯಾತ ಶಿಕ್ಷಣ ಶಾಸ್ತ್ರಜ್ಞರು ಇದ್ದ ತಂಡ ಈ ಪಟ್ಟಿ ಮಾಡಿದ್ದು, 2011ರ ನಂತರ ಇದೇ ಮೊದಲ ಬಾರಿಗೆ ಭಾರತದ ವಿವಿಯೊಂದು ಈ ಪಟ್ಟಿಯಲ್ಲಿ 100 ರ ಒಳಗೆ ಸ್ಥಾನ ಪಡೆದಿದೆ.

1-2ನೇ ಕ್ಲಾಸ್ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ: ಕೋರ್ಟ್1-2ನೇ ಕ್ಲಾಸ್ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ: ಕೋರ್ಟ್

1909ರಲ್ಲಿ ಕೇವಲ 2 ಶೈಕ್ಷಣಿಕ ವಿಭಾಗಗಳೊಂದಿಗೆ ಸ್ಥಾಪನೆಯಾದ ಐಐಎಸ್‌ಸಿಯು ಇಂದು 40ಕ್ಕೂ ಹೆಚ್ಚು ವಿಭಾಗಗಳನ್ನು ಹೊಂದಿದೆ. ವಿಜ್ಞಾನದ ಬಹುತೇಕ ಎಲ್ಲಾ ವಿಭಾಗಗಳನ್ನೂ ಹೊಂದಿರುವ ಐಐಎಸ್‌ಸಿ ವಿಶ್ವದ ಶ್ರೇಷ್ಠ ವಿಜ್ಞಾನ ವಿವಿಗಳಲ್ಲಿ ಒಂದು.

English summary
Bengaluru's IISc ranked in top 100 best university in the Times Higher Education's World Reputation Rankings 2018, becoming the only Indian institution to make it to the prestigious list this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X