ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ಯಾಕ್ಸ್‌ ಕಟ್ಟದಿದ್ದರೆ ಕರೆಂಟ್‌, ನೀರು ಎರಡೂ ಕೊಡಲ್ಲ: ಬಿಬಿಎಂಪಿ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 9: ತೆರಿಗೆ ಪಾವತಿಸಿದಿದ್ದರೆ ವಿದ್ಯುತ್, ನೀರು ಎಲ್ಲವನ್ನೂ ಕಡಿತ ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಸ್ವಾಧೀನಾನುಭವ ಪತ್ರ ಪಡೆದರೂ ತೆರಿಗೆ ಪಾವತಿಸದ ಕಟ್ಟಡ ಮಾಲೀಕರಿಂದ ಬಿಬಿಎಂಪಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನೂರಾರು ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು, ಬಿಬಿಎಂಪಿಯಿಂದ ಒಸಿ ಪಡೆಯುತ್ತಿದೆ.

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

ಅದಾದ ಬಳಿಕ ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿದೆ. ಆದರೆ ಬೆಸ್ಕಾಂ, ಜಲಮಂಡಳಿಯಿಂದ ವಿದ್ಯುತ್‌ ಮತ್ತು ನೀರಿನ ಸಂಪರ್ಕವನ್ನು ಪಡೆಯುತ್ತಿದೆ. ಇದೆಲ್ಲಕ್ಕೂ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.

If you not paid tax, you wont get power and water supply

ತೆರಿಗೆ ವಾರ್ಷಿಕ 200 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ಕುರಿತು ಕೆಲ ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿಗಳ ಜತೆಗೆ ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದರು. ಅದನ್ನು ಪಡಿಗಣಿಸಿದ ಮುಖ್ಯ ಕಾರ್ಯದರ್ಶಿಗಳು ಇನ್ನುಮುಂದೆ ಒಸಿ ಜತೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆಯನ್ನು ನೀಡಿದರಷ್ಟೇ ಬೆಸ್ಕಾಂ ಮತ್ತು ಜಲಮಂಡಳಿ ತನ್ನ ಸೇವೆಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.

ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಈವರೆಗೆ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆಯಬೇಕೆಂದರೆ ಕಟ್ಟಡ ಮಾಲೀಕರು ತಮ್ಮ ಹೆಸರಿನಲ್ಲಿನ ಕಟ್ಟಡ ಮಾಲೀಕತ್ವದ ದಾಖಲೆಗಳು ಹಾಗೂ ಬಿಬಿಎಂಪಿ ನೀಡುವ ಓಸಿ ನೀಡಿದರೆ ಸಾಕಿತ್ತು ಇನ್ನುಮುಂದೆ ತೆರಿಗೆ ಕಟ್ಟಿದ ದಾಖಲೆಯನ್ನೂ ನೀಡಬೇಕಾಗಿದೆ.

English summary
BBMP has asked BESCOM and BWSSB not to provide power and water supply those have not paid property tax after getting Occupied Certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X